
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಮಾರ್ಚ್ 2023 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸ್ಥಳೀಯ ವೈ.ಟಿ.ಎಸ್.ಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಒಟ್ಟು 150 ವಿದ್ಯಾರ್ಥಿಗಳಲ್ಲಿ 141 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಅದರಲ್ಲಿ 50 ಉನ್ನತ ಶ್ರೇಣಿ, 77 ಪ್ರಥಮ ಶ್ರೇಣಿ, 14 ದ್ವಿತೀಯ ಶ್ರೇಣಿಯಲ್ಲಿ ಉತ್ತಿರ್ಣ ಆಗಿರುತ್ತಾರೆ.

ವಿಜ್ಞಾನ ವಿಭಾಗದಲ್ಲಿ 95.83% ಫಲಿತಾಂಶ ಬಂದಿದ್ದು ವೈಷ್ಣವಿ ಹೆಗಡೆ 600 ಕ್ಕೆ 586 ಅಂಕಗಳೊಂದಿಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ,ಸಾನಿಯಾ ಶಬ್ಬೀರ್ ಶೇಖ 582 ಅಂಕಗಳೊAದಿಗೆ ದ್ವಿತೀಯ, ಸೃಜನ್ ರಾಜು ನಾಯ್ಕ 580 ಅಂಕಗಳೊAದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 93.10 ಫಲಿತಾಂಶ ದಾಖಲಾಗಿದ್ದು ಪವನಕುಮಾರ ಭಟ್ಟ 588 ಅಂಕಗಳದಿಗೆ ಕಾಲೆಜಿಗೆ ಹಾಗೂ ವಾಣಿಜ್ಯ ವಿಭಾಗಕ್ಕೆ ಪ್ರಥಮ, ತೃಪ್ತಿ ಭಟ್ಟ 569 ಅಂಕಗಳೊAದಿಗೆ ದ್ವಿತೀಯ ಹಾಗೂ 565 ಅಂಕಗಳೊಂದಿಗೆ ಮಂಜುಶ್ರೀ ಭಂಡಾರಿ ತೃತೀಯ ಸ್ಥಾನ ಗಳಿಸಿದ್ದಾರೆ.

ಕಲಾ ವಿಭಾಗದಲ್ಲಿ 90% ಫಲಿತಾಂಶ ಬಂದಿದ್ದು ಸಕೀನಾ ಶೇಖ 558 ಅಂಕಗಳೊಂದಿಗೆ ಪ್ರಥಮ, ಮೇಘಾ ಉಮೇಶ್ ಭಂಡಾರಿ 554 ಅಂಕಗಳೊಂದಿಗೆ ದ್ವಿತೀಯ, 553 ಅಂಕಗಳೊಂದಿಗೆ ರಕ್ಷಾ ನಾಗಪ್ಪ ಸಿದ್ದಿ ತೃತೀಯ ಸ್ಥಾನ ಪಡೆದಿದ್ದಾರೆ.

ಕಾಲೇಜಿನ ಒಟ್ಟಾರೆ ಫಲಿತಾಂಶ 94% ಆಗಿರುತ್ತದೆ. ಸಂಸ್ಕೃತದಲ್ಲಿ ನಾಲ್ಕು, ವ್ಯವಹಾರ ಅಧ್ಯಯನ ಒಂದು, ಲೆಕ್ಕಶಾಸ್ತದಲ್ಲಿ ಎರಡು , ಜೀವಶಾಸ್ತ ಒಂದು, ಗಣಕ ವಿಜ್ಞಾನದಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿ ಒಟ್ಟು 10 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದಿರುತ್ತಾರೆ.
ಸಂಸ್ಥೆಯ ಅಧ್ಯಕ್ಷರಾದ ರವಿಕುಮಾರ ಲಕ್ಷö್ಮಣ ಶಾನಭಾಗ , ಉಪಾಧ್ಯಕ್ಷ ಪ್ರಸನ್ನ ಗುಡಿಗಾರ, ಕಾರ್ಯದರ್ಶಿ ರಾಜೇಂದ್ರಪ್ರಸಾದ ಭಟ್ಟ ಹಾಗೂ ಸಂಸ್ಥೆಯ ಎಲ್ಲಾ ಸದಸ್ಯರೂ ಪ್ರಾಂಶುಪಾಲೆ ವಾಣಿಶ್ರೀ ಹೆಗಡೆ ಮತ್ತು ಎಲ್ಲಾ ಉಪನ್ಯಾಸಕ, ಶಿಕ್ಷಕ ವರ್ಗದವರೂ ಹಾಗೂ ಶಿಕ್ಷಕೇತರ ಸಿಬ್ಬಂದಿಗಳೂ ಸಂಸ್ಥೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳನ್ನೂ ಅಭಿನಂದಿಸಿದ್ದಾರೆ.
Prathidvani Yellapura