
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಕಿರವತ್ತಿ ಸರ್ಕಾರಿ ಪದವಿಪೂರ್ವ ಕಾಲೇಜು 2023ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 81.53% ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 65
ವಿದ್ಯಾರ್ಥಿಗಳಲ್ಲಿ 53 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ 76.59 % ಫಲಿತಾಂಶ ದಾಖಲಾಗಿದ್ದು 47 ವಿದ್ಯಾರ್ಥಿಗಳಲ್ಲಿ 36 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮಧುಮತಿ ಕುಸಗಲ್ 600ಕ್ಕೆ 533 ಅಂಕಗಳಿಸಿ ಪ್ರಥಮ, 529 ಅಂಕಗಳೊಂದಿಗೆ ಲೋಕೇಶ್ವರಿ ಜಗದಾಳಿ ದ್ವಿತೀಯ, ಶಬೀನಾ ಶಿಗ್ಗಾವಿ 497 ಅಂಕಗಳೊಂದಿಗೆ ತೃತೀಯ ಸ್ಥಾನದಲ್ಲಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 94.44℅ ಫಲಿತಾಂಶ ದಾಖಲಾಗಿದ್ದು 18 ವಿದ್ಯಾರ್ಥಿಗಳಲ್ಲಿ 17 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪವಿತ್ರಾ ಬಾಬರಿ 522 ಅಂಕಗಳೊಂದಿಗೆ ಪ್ರಥಮ, 494 ಅಂಕಗಳೊಂದಿಗೆ ರಕ್ಷಿತಾ ಮಂಗಳಿ ದ್ವಿತೀಯ, 472 ಅಂಕಗಳೊಂದಿಗೆ ಪ್ರತಿಭಾ ರೆಡೆಕರ್ ತೃತೀಯ ಸ್ಥಾನ ಗಳಿಸಿದ್ದಾರೆ

ವಿದ್ಯಾರ್ಥಿನಿಯರ ಈ ಸಾಧನೆಗೆ ಶಾಲಾಭಿವೃದ್ಧಿ ಸಮಿತಿ , ಅದ್ಯಾಪಕ ವೃಂದ, ಪ್ರಾಂಶುಪಾಲರು ಹಾಗೂ ಊರ ನಾಗರೀಕರು ಪ್ರಶಂಶಿಸಿದ್ದಾರೆ.
Prathidvani Yellapura