Breaking News

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಚುನವಣಾ ಕಣಕ್ಕೆ 10 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ – ನಾಮಪತ್ರ ಕ್ರಮಬದ್ದ ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ-ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಾಗಿ ಹತ್ತು‌ ಮಂದಿ ನಾಮಪತ್ರ ಸಲ್ಲಿಸಿದ್ದು ಹತ್ತು ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ದ ವಾಗಿದೆ
ಇದರೊಂದಿಗೆ 10 ಅಭ್ಯರ್ಥಿಗಳು ಶಾಸಕ ಸ್ಥಾನದ ಆಯ್ಕೆಗಾಗಿ ಕಣಕ್ಕಿಳಿಯಲು ಸಿದ್ದರಾದಂತಾಗಿದೆ.

ಬಿಜೆಪಿಯಿಂದ ಶಿವರಾಮ ಹೆಬ್ಬಾರ್, ಕಾಂಗ್ರೆಸ್ಸಿನಿಂದ ವಿ ಎಸ್ ಪಾಟೀಲ್, ಜೆಡಿಎಸ್‌ನಿಂದ ನಾಗೇಶ ನಾಯ್ಕ ಕಗಾಲ, ಕೆಆರ್‌ಎಸ್‌ನಿಂದ ಮಂಜುನಾಥ ಶಿರಟ್ಟಿ, ಕಲ್ಯಾಣ್ಯ ರಾಜ್ಯ ಪ್ರಗತಿ ಪಕ್ಷದಿಂದ ಸಂತೋಷ ರಾಯ್ಕರ್, ಆಮ್ ಆದ್ಮಿಯಿಂದ ಮಂಜುನಾಥ ಕೂಳಂಕರ್ ಹಾಗೂ ಪಕ್ಷೇತರರಾಗಿ ಲಕ್ಷ್ಮಣ ಬನ್ಸೋಡೆ, ಆನಂದ ಭಟ್ಟ, ಚಿದಾನಂದ ಹರಿಜನ, ಶಟ್ಟಪ್ಪ ಬೋವಿವಡ್ಡರ್ ಸ್ಪರ್ಧೆಯಲ್ಲಿದ್ದಾರೆ.

ನಾಮಪತ್ರ ಹಿಂಪಡೆಯಲು ಏ,24 ಕೊನೆಯ ದಿನವಾಗಿದ್ದು ಯಾರು ಚುನಾವಣ ಕಣದಿಂದ ಹಿಂದೆ ಸರಿಯುತ್ತಾರೆಂದು ಕಾದು ನೋಡಬೇಕಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಹುಟಕಮನೆ ಗುಡ್ಡ ನೆಲಸಮ ಪ್ರಕರಣ ನ್ಯಾಯಾಲಯಲ್ಲಿರುವಂತೆಯೆ ಮಾರಾಟಕ್ಕೆ ತೆರೆಮರೆಯ ಯತ್ನ.!!

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಸದ್ದುಮಾಡಿ ಬೆಂಗಳೂರಿನ ಭೂ ವ್ಯಾಜ್ಯಗಳ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದ ಹುಟಕಮನೆ ಗುಡ್ಡ ನೆಲಸಮ ಅರಣ್ಯನಾಶ …

Leave a Reply

Your email address will not be published. Required fields are marked *