Breaking News

ವೃತ್ತಿಯಲ್ಲಿ ವೈದ್ಯ ಹವ್ಯಾಸದಲ್ಲಿ ಸಾಹಿತ್ಯ ರಚನಕಾರ ಕವಿಹೃದಯಿ ಡಾ.ಶ್ರೀಶೈಲ ಮಾದಣ್ಣನವರ್ ದಸರ ಕವಿ ಗೋಷ್ಟಿಗೆ ಆಯ್ಕೆ – ಆತ್ಮೀಯರಲ್ಲಿ ಸಂತಸ.


ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞ ವೈದ್ಯರಾಗಿ ಬಹು ಸಮಯ ಕಾರ್ಯ ನಿರ್ವಹಿಸಿ ಹಲವು ಕುಟುಂಬದವರ ಆಪ್ತರಾಗಿ ಸಾಹಿತ್ಯ ವಲಯಕ್ಕೆ ಸ್ನೇಹಿತರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಶ್ರೀಶೈಲ ಮಾದಣ್ಣನರ್ ಸದ್ಯ ಮೈಸೂರಿನ ವಿಶ್ವ ಪ್ರಸಿದ್ದ ದಸರಾ ಮಹೋತ್ಸವದಲ್ಲಿ ಕವಿಗೋಷ್ಟಿಗೆ ಆಯ್ಕೆಯಾಗಿದ್ದು ಅರ್ಹತೆಗೆ ತಕ್ಕ ಗೌರವ ದೊರೆತಂತಾಗಿದೆ ಎಂಬುದು ಅವರ ಆಪ್ತ ವಲಯದ ಮಾತಾಗಿದೆ.


ಮೂಲತಃ ದಾರವಾಡದವರಾದ ಶ್ರೀಶೈಲ ಮಾದಣ್ಣನವರು ವೃತ್ತಿಯಲ್ಲಿ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದರು ಸದ್ಯ ದಾಂಡೇಲಿಯಲ್ಲಿ ತಮ್ಮ ವೃತ್ತಿ ಮುಂದುವರೆಸಿದ್ದಾರೆ. ಅವರಲ್ಲಿ ಅಡಗಿದ್ದ ಸುಪ್ತ ಪ್ರತಿಭೆ ಸಾಹಿತ್ಯ ರಚನೆಯ ಕಲೆ ಸದಾ ಅವರ ಒಡನಾಡಿಯಾಗಿ ಬೆಳೆದು ಬಂತು ಅವರ ರಚನೆಯಲ್ಲಿ ಮೂಡಿ ಬಂದ ಸುಂದರ ಸುಮಧುರ ಗೀತೆಗಳು ಹೆಸರುವಾಸಿಯಾಗಿದೆ‌ ಅದರಲ್ಲು ದಿವಂಗತ ಪುಟ್ಟರಾಜ ಗವಾಯಿಗಳ ಮೇಲೆ ಬರೆದಂತಹ ಗೀತೆ ಅತ್ಯಂತ ಮಧುರವಾಗಿದೆ.


ಹಲವು ಪ್ರಶಸ್ತಿ ಮುಡಿಗೇರಿಸಿಕೊಂಡ ಡಾ.ಶ್ರೀಶೈಲ ಮಾದಣ್ಣನವರ್ ಎಂದಿಗು ಅಹಂಕಾರ ತೋರಿದವರಲ್ಲ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ಯುವಕರು ಹಾಗು ಹಿರಿಯರ ಜೊತೆಯಲ್ಲಿ ಅನ್ಯೋನ್ಯತೆಯಿಂದ ಬೆರೆತು ಬೆರಗು ಮೂಡಿಸಿದವರು.ಕವಿ ಹೃದಯಿಯಾದ ಅವರು ಗಡಿನಾಡು ಕನ್ನಡ ಸಂಘಟನೆಯಲ್ಲಿ ಸಕ್ರಿಯರಾಗಿ ಪಾಲ್ಗೊಂಡು ಕನ್ನಡದ ತೇರೆಳೆಯುವ ಕಾಯಕ ಮಾಡುತ್ತಲೆ ಬಂದವರು.


ಒಂದು ಲೆಕ್ಕಾಚಾರದ ಪ್ರಕಾರ ಪ್ರಶಸ್ತಿಗಾಗಿಯೆ ಹಿಂದೆ ಬಿದ್ದವರಾಗಿದ್ದರೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಈಗಾಗಲೆ ಬರಬೇಕಿತ್ತು. ಹಣದಾಸೆಗಾಗಿ ಅಥವ ಅಹಂ ತೋರಿಸುವ ಸಲುವಾಗಿ ಸಾಹಿತ್ಯ ರಚನೆಗೆ ಕುಳಿತವರಲ್ಲ ಬದಲಾಗಿ ತಮ್ಮ ಆತ್ಮ ಒಪ್ಪುವಂತೆ ತಮ್ಮ ಹೃದಯ ಅಪ್ಪುವಂತೆ ಸಾಹಿತ್ಯದ ಸಾಲುಗಳನ್ನು ರಚಿಸಿದವರು. ಸದಾ ಎಲೆ ಮರೆಯ ಕಾಯಿಯಂತೆ ಇರಲು ಬಯಸಿದ ನಿಗರ್ವಿ ಮಾತೃ ಹೃದಯಿ ಡಾ‌.ಶ್ರೀಶೈಲ ಮಾದಣ್ಣನವರಿಗೆ ನಮ್ಮ ನಾಡಹಬ್ಬ ದಸರಾ ಮಹೋತ್ಸವದ ಘನ ವೇದಿಕೆಯಲ್ಲಿ ಕವಿಗೋಷ್ಟಿಗೆ ಆಯ್ಕೆ ಮಾಡಿರುವುದು ಆ ಕವಿ ಗೋಷ್ಟಿಗೆ ಒಂದು ಭೂಷಣ ಇಂತಹ ಸಂತಸದ ಸಂಗತಿಗೆ ಯಲ್ಲಾಪುರ ಮಂಜುನಾಥ ನಗರ ಹಿತೈಷಿಗಳು, ತಾಲೂಕು ಸರ್ಕಾರಿ ಆಸ್ಪತ್ರೆ ಸಮಸ್ತರು ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಜನಸ್ನೇಹಿ,ಜನಾನುರಾಗಿ ಎಸಿಎಫ್ ಹಿಮವತಿ ಭಟ್ ಪದೋನ್ನತಿಯೊಂದಿಗೆ ಗೌರವದ ವರ್ಗಾವಣೆ ಬೆಂಗಳೂರಿಗೆ.

ವಿಧಾನಪರಿಷತ್ ಮಾಜಿ ಸದಸ್ಯ “ಶಾಂತಾರಾಮ್ ಸಿದ್ದಿ” ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಯ ಕೆನರಾ ವೃತ್ತದಲ್ಲಿ ಉತ್ತಮ ಕರ್ತವ್ಯ …

Leave a Reply

Your email address will not be published. Required fields are marked *