
ಪ್ರತಿಧ್ವನಿ ಯಲ್ಲಾಪುರ : ಜನವರಿ ತಿಂಗಳಲ್ಲಿ ನಡೆಯಲಿದೆ ಎನ್ನಲಾಗುತ್ತಿರುವ ಜಿಲ್ಲಾ ಪಂಚಾಯತ ಚುನಾವಣ ಕಣಕ್ಕೆ ಹೆಸರುಗಳ ಪೈಪೋಟಿ ಆರಂಭಗೊಂಡಿದ್ದು ಇಡಗುಂದಿ ಕ್ಷೇತ್ರದಿಂದ ಸ್ಪರ್ಧೆ ಖಚಿತ ಎಂದು ಸಾಮಾಜಿಕ ಕಾರ್ಯಕರ್ತ ಅಜಾತಶತ್ರು ಲಕ್ಷ್ಮೀ ನಾರಾಯಣ್ ಭಟ್ಟ ತೋಟ್ಮನೆ ಪ್ರತಿಧ್ವನಿ ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪ್ರಸಕ್ತ ಚುನಾವಣೆಯಲ್ಲಿ ಈ ಬಾರಿ ಒಂದು ಕ್ಷೇತ್ರ ಹೆಚ್ಚಾಗಿದ್ದು ಒಟ್ಟು ಮೂರುಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ ಅದರಲ್ಲಿ ಇಡಗುಂದಿ ಕ್ಷೇತ್ರವು ಒಂದು ಅದಕ್ಕೆ ಹೆಸರುಗಳ ಪೈಪೋಟಿ ಸಹಜವಾಗಿದ್ದು ಈ ಬಾರಿ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯ ಸೇವಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮೀ ನಾರಾಯಣ್ ಭಟ್ ತೋಟ್ಮನೆ ಪ್ರಭಲ ಆಕಾಂಕ್ಷಿಯಾಗಿದ್ದು ಸ್ಪರ್ಧೆ ಖಚಿತ ಎಂಬುದಾಗಿ ಪ್ರತಿಧ್ವನಿ ವೆಬ್ ನ್ಯೂಸ್ ಜೊತೆಯಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ.

ಲಕ್ಷ್ಮೀ ನಾರಾಯಣ್ ಭಟ್ ತೋಟ್ಮನೆ ಒಬ್ಬ ಸಾಮಾನ್ಯ ರೈತಾಪಿ ಕುಟುಂಬದವರಾಗಿದ್ದು ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಮತ್ತು ಸೇವಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇವರು ಒಂದೆಡೆ ಹೆಬ್ಬಾರ್ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದು ಇತ್ತ ಬಿಜೆಪಿ ವಲಯದಲ್ಲಿಯು ಸಹ ಅತ್ಯಾಪ್ತತೆ ಹೊಂದಿದ್ದಾರೆ ಇದು ಸಹ ಚುನಾವಣೆ ಸ್ಪರ್ಧೆಗೆ ಅನುಕೂಲ ಆಗಿದೆ ಎನ್ನುತ್ತಾರೆ.

ನಾನು ಪ್ರತಿನಿಧಿಸಲು ಹೊರಟಿರುವ ಕ್ಷೇತ್ರದಲ್ಲಿ ಯಾವುದೇ ಪಕ್ಷದಿಂದ ಟಿಕೆಟ್ ನೀಡಿದರು ಸ್ಪರ್ಧೆಗೆ ಸಿದ್ದ ಒಂದುವೇಳೆ ಕೊಡದಿದ್ದರೆ ಪಕ್ಷೇತರನಾಗಿ ಕಣಕ್ಕಿಳಿಯುವುದು ಖಚಿತ ಎಂಬ ಸ್ಪಷ್ಟತೆ ನೀಡಿದ್ದಾರೆ.
ಚುನಾವಣೆ ಘೋಷಣೆಗು ಮೊದಲೆ ಲಕ್ಷ್ಮೀ ನಾರಾಯಣ್ ಭಟ್ ತೋಟ್ಮನೆ ತಮ್ಮ ಪ್ರಣಾಳಿಕೆ ಚಿಂತನೆ ನಡೆಸಿದ್ದಾರೆ.

ಸರ್ಕಾರಿ ಸೌಲಭ್ಯ ವಂಚಿತರಿಗೆ ಮೊದಲ ಆದ್ಯತೆ ನೀಡಿ ಬೆಂಬಲಿಸುವುದು, ಗ್ರಾಮೀಣ ಭಾಗದಲ್ಲಿನ ರಸ್ತೆ ಸುಧಾರಿಕರಣ, ಬಡವರು ಹಾಗು ಅಶಕ್ತರಿಗೆ ನನ್ನ ಕೈಲಾದ ಸೇವೆ ಸಲ್ಲಿಸುವುದು ಸೇರಿದಂತೆ ಜನತೆಗೆ ಪ್ರಾಮಾಣಿಕವಾಗಿ ತಲುಪಬೇಕಾದ ಸರ್ಕಾರದ ಮೂಲಭೂತ ಸೌಲಭ್ಯಗಳನ್ನು ಯಾವುದೇ ಆಮಿಷಕ್ಕೊಳಗಾಗದೆ ತಲುಪಿಸುವ ಪ್ರಯತ್ನ ಮಾಡುತ್ತೇನೆ. ವಿಶೇಷವಾಗಿ ನನಗೆ ಯಾರು ಶತ್ರುಗಳಿಲ್ಲ ಪಕ್ಷಾತೀತವಾಗಿ ಪ್ರೀತಿ ಪಾತ್ರರಿದ್ದು ಮತಗಳಾಗಿ ಬದಲಾದರೆ ಗೆಲುವು ಖಚಿತ ಯಾವುದೇ ಪಕ್ಷದಿಂದ ಟಿಕೆಟ್ ನೀಡಿದರು ಗೆದ್ದು ತೋರಿಸುತ್ತೇನೆ ಇಲ್ಲಚಾದಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಗೆಲ್ಲುತ್ತೇನೆ. ಉದ್ದೇಶ ಮಾತ್ರ ಸ್ಪಷ್ಟ ಅದು ಪ್ರಾಮಾಣಿಕ ಜನ ಸೇವೆ ಮಾತ್ರ. ಲಕ್ಷ್ಮೀ ನಾರಾಯಣ್ ಭಟ್ ತೋಟ್ಮನೆ, ಇಡಗುಂದಿ ಜಿಲ್ಲಾ ಪಂಚಾಯತ ಕ್ಷೇತ್ರದ ಪ್ರಭಲ ಆಕಾಂಕ್ಷಿತ ಅಭ್ಯರ್ಥಿ

















Prathidvani Yellapura