Breaking News

ಯಲ್ಲಾಪುರದಲ್ಲಿ ನವರಾತ್ರಿ ಉತ್ಸವ ಸಂಭ್ರಮ – ಅನ್ನಸಂತರ್ಪಣೆ ಕಾರ್ಯಕ್ಕೆ ಸಿದ್ದರಾದ ಸಂತೋಷ್ ನಾಯ್ಕ್ ಪಡೆ.


ಪ್ರತಿಧ್ವನಿ ಯಲ್ಲಾಪುರ : ಸೀಮೆಯ ಶಕ್ತಿ ದೇವತೆಯರಾದ ಗ್ರಾಮದೇವಿಯರ ಸಾನಿದ್ಯದಲ್ಲಿ ನವರಾತ್ರಿ ಸಂಭ್ರಮ ಶ್ರದ್ದಾ ಭಕ್ತಿಯಿಂದ ಆರಂಭಗೊಂಡಿದ್ದು ಶುಭ ಮಂಗಳವಾರ ಪವಿತ್ರ ಶುಕ್ರವಾರ ಅನ್ನ ಪ್ರಸಾದ ಸೇವೆ ಭಕ್ತರಿಗೆ ದೊರೆಯಲಿದೆ.


ಪ್ರತಿ ವರ್ಷದಂತೆ ಈ ವರ್ಷವು ಗ್ರಾಮದೇವಿ ಸಾನಿದ್ಯದಲ್ಲಿ ಅನ್ನಪ್ರಸಾದ ಸೇವೆಗೆ ಸಮಾಜ ಸೇವಕ ಸಂತೋಷ್ ನಾಯ್ಕ್ ಹಿತೈಷಿ ಪಡೆ ಸಿದ್ದತೆ ಆರಂಭ ಮಾಡಿದ್ದು ಮಹಾ ಅನ್ನ ಸಂತರ್ಪಣೆಗೆ ದಿನಗಣನೆ ಆರಂಭಗೊಂಡಿದೆ.


ದಿನಾಂಕ 13 ರ ಮಂಗಳವಾರ ಮತ್ತು ದಿನಾಂಕ 16 ರ ಶುಕ್ರವಾರ ಮಹಾ ಅನ್ನಸಂತರ್ಪಣೆ ನೆರವೇರಲಿದ್ದು ಯಲ್ಲಾಪುರ ಸೀಮೆ ಹಾಗು ಸುತ್ತಮುತ್ತಲಿನ ತಾಲೂಕಿನ ನಾಗರಿಕ ಭಕ್ತ ಮಹಾಶಯರು ಈ ಅನ್ನಪ್ರಸಾದ ಸೇವೆಯ ಮಹಾ ಯಜ್ಞದಲ್ಲಿ ತನು,ಮನ,ಧನ ಸಹಾಯದೊಂದಿಗೆ ಪಾಲ್ಗೊಂಡು ಶಕ್ತಿ ಮಾತೆಯರಾದ ಗ್ರಾಮದೇವಿಯರ ಕೃಪೆಗೆ ಪಾತ್ರರಾಗಬೇಕೆಂದು ಲಾರಿ ಚಾಲಕರ ಸಂಘ, ಶ್ರೀ ಗ್ರಾಮದೇವಿ ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘ, ಬಸವೇಶ್ವರ ಗೂಡ್ಸು ರಿಕ್ಷಾ ಚಾಲಕ ಮಾಲಕರ ಸಂಘ, ಹಾಗು ವಿವಿಧ ಕನ್ನಡಪರ ಸಂಘಟನೆಗಳ ಪ್ರಮುಖರು ಹಾಗು ವಿವಿಧ ದಾನಿಗಳು ಕರೆ ನೀಡಿದ್ದಾರೆ.


ಪ್ರತಿ ವರ್ಷವೂ ತಾಯಿ ಗ್ರಾಮದೇವಿಯರ ಸಾನಿದ್ಯದಲ್ಲಿ ನವರಾತ್ರಿ ಸಂಭ್ರಮದಲ್ಲಿ ಅನ್ನ ಸಂತರ್ಪಣಾ ಮಹಾ ಕಾರ್ಯ ಹಮ್ಮಿಕೊಳ್ಳುತ್ತಾ ಬಂದಿದ್ದು ಈ ವರ್ಷವು ಸಹ 13 ರ ಮಂಗಳವಾರ ಹಾಗು 16 ರ ಶುಭ ಶುಕ್ರವಾರದಂದು ಅನ್ನ ಪ್ರಸಾದ ಸೇವೆ ಹಮ್ಮಿಕೊಂಡಿದ್ದೇವೆ ಭಕ್ತಾದಿಗಳು ಹಾಗು ದಾನಿಗಳು ತಮ್ಮ ಅಳಿಲು ಸೇವೆ ಸಲ್ಲಿಸಲು ಕೈ ಜೋಡಿಸಬಹುದಾಗಿದೆ. ಸಂಪರ್ಕ ಸಂಖ್ಯೆ 7019900957 ಗೆ ಕರೆಮಾಡಬಹುದಾಗಿದೆ.
ಸಂತೋಷ್ ನಾಯ್ಕ್
ಅಧ್ಯಕ್ಷರು, ಯಲ್ಲಾಪುರ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಜನಸ್ನೇಹಿ,ಜನಾನುರಾಗಿ ಎಸಿಎಫ್ ಹಿಮವತಿ ಭಟ್ ಪದೋನ್ನತಿಯೊಂದಿಗೆ ಗೌರವದ ವರ್ಗಾವಣೆ ಬೆಂಗಳೂರಿಗೆ.

ವಿಧಾನಪರಿಷತ್ ಮಾಜಿ ಸದಸ್ಯ “ಶಾಂತಾರಾಮ್ ಸಿದ್ದಿ” ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಯ ಕೆನರಾ ವೃತ್ತದಲ್ಲಿ ಉತ್ತಮ ಕರ್ತವ್ಯ …

Leave a Reply

Your email address will not be published. Required fields are marked *