
ಪ್ರತಿಧ್ವನಿ ಯಲ್ಲಾಪುರ : ಅತ್ಯಂತ ಸಂಸ್ಕಾರವಂತ ಮತ್ತು ಸೌಹಾರ್ಧತೆಗೆ ಹೆಸರಾದ ಯಲ್ಲಾಪುರಕ್ಕೆ ಸಣ್ಣದಾಗಿ ರೌಡಿಸಂ ಪ್ರಕ್ರಿಯೆ ಕಾಲಿಟ್ಟಿತೇ ಎಂಬ ಅನುಮಾನ ಕಾಡಲು ಶುರುವಾಗಿದೆ. ಕಾರಣ ಕಳೆದ ಕೆಲ ದಿನಗಳ ಹಿಂದೆ ರವೀಂದ್ರ ನಗರದಲ್ಲಿ ನಡೆದ ಈ ಒಂದು ಘಟನೆ ಅನುಮಾನಕ್ಕೆ ಕಾರಣವಾಗಿದೆ.

ಪಟ್ಟಣದ ರವೀಂದ್ರ ನಗರ ನಿವಾಸಿ ಸಮೀರ್ ನಾಬಿ ರಸೂಲ್ ಶೇಖ್ ಎಂಬ 19 ವರ್ಷ ಪ್ರಾಯದ ಯುವಕ ವೆಲ್ಡಿಂಗ್ ವೃತ್ತಿ ಮಾಡಿಕೊಂಡಿದ್ದು ದಿನಾಂಕ 7-10-26 ರಂದು ರವೀಂದ್ರ ನಗರ ಗ್ರಾಮದೇವಿ ಗದ್ದುಗೆ ಸಮೀಪ ನಿಂತಿರುವಾಗ ಅದೇ ರವೀಂದ್ರ ನಗರ ನಿವಾಸಿಗಳಾದ ಶರತ್ ಮತ್ತು ರಾಜೇಂದ್ರ ಎಂಬ ಯುವಕರು ಏಕಾ ಏಕಿ ಮೈಮೇಲೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ ಕೊಲೆ ಬೆದರಿಕೆ ಹಾಕಿರುವುದಾಗಿ ಸಮೀರ್ ಎಂಬ ಯುವಕ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪ್ರಕರಣದ ಸತ್ಯಾಸತ್ಯತೆ ಇನ್ನಷ್ಟೆ ಹೊರ ಬರಬೇಕಿದೆ. ಜೆ.ಎಂ.ಎಫ್.ಸಿ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡ ಯಲ್ಲಾಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಪ್ರಕರಕ್ಕೆ ಸಂಬಂಧಿಸಿದ ಸಿಸಿ ಟಿವಿ ಫುಟೇಜ್ ಸ್ಥಳೀಯ ವಾಟ್ಸಪ್ ಗುಂಪಿನಲ್ಲಿ ಹರಿದಾಡುತ್ತಿದ್ದು ಅದನ್ನು ನೋಡಿದಾಗ ದೊಡ್ಡ ದೊಡ್ಡ ನಗರ ಪ್ರದೇಶಗಳಲ್ಲಿ ನಡೆಯುವ ರೌಡಿಸಂ ಪ್ರಕ್ರಿಯೆ ಕಂಡ ಅನುಭವವಾಗುತ್ತದೆ. ಯಾವುದೆ ಗೊಂದಲಗಳಿಲ್ಲದೆ ಶಾಂತಿ ಮತ್ತು ಸೌಹಾರ್ಧತೆಯ ಜೀವನಕ್ರಮಕ್ಕೆ ಹೆಸರಾದ ಯಲ್ಲಾಪುರದಂತಹ ಸಂಸ್ಕಾರವಂತ ಪಟ್ಟಣದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಕಾನೂನು ಬಿಗಿಯಾಗಬೇಕಿದೆ ಎಂಬುದು ಸ್ಥಳೀಯ ನಾಗರಿಕರ ಅಭಿಪ್ರಾಯವಾಗಿದೆ.
ಇಂತಹ ಘಟನೆ ಹಿಂದೆಯು ನಡೆದಿತ್ತು ಮತ್ತೆ ಇಂತಹ ಘಟನೆ ರವೀಂದ್ರ ನಗರದಲ್ಲಿ ನಡೆದಿರುವುದು ಕಂಡು ಆತಂಕವಾಗಿದೆ. ಇದರಲ್ಲಿ ಯಾರದ್ದು ತಪ್ಪು ಯಾರದ್ದು ಸರಿ ಎಂಬ ವಿಷಯ ಕಾನೂನಿನ ತನಿಖೆಗೆ ಬಿಟ್ಟದ್ದು ಆದರೆ ಯಾವುದೆ ವಿಚಾರಗಳು ಕನೂನಿನ ಅಡಿಯಲ್ಲಿ ನಡೆಯಬೇಕೆ ಹೊರತು ಹೊಡೆಬಡಿ ನಡೆಯಿಂದ ಸಮಾಜದಲ್ಲಿ ಅಶಾಂತಿ ಮೂಡಲಿದೆ. ಮತ್ತೊಮ್ಮೆ ಇಂತಹ ಪ್ರಕರಣಗಳು ನಡೆಯದಂತೆ ಎಚ್ಚರ ವಹಿಸಬೇಕಿದೆ. ಹೆಸರು ಹೇಳಲಿಚ್ಚಿಸದ ಸ್ಥಳೀಯ ನಿವಾಸಿ















Prathidvani Yellapura