Breaking News

ಕರ್ನಾಟಕ ಸಿದ್ದಿ ಸಮುದಾಯ ಸಮಿತಿ ಮಂಚಿಕೇರಿ ವಿಭಾಗದ ವತಿಯಿಂದ – ಕಾನೂನು ಅರಿವು,ದಾಖಲೆ ಸರಿಪಡುಸಿಕೊಳ್ಳುವಿಕೆ,ಪೌಷ್ಟಿಕ ಆಹಾರದ ಕುರಿತು ಮಾಹಿತಿ ಸಭೆ.

ಪ್ರತಿಧ್ವನಿ ಯಲ್ಲಾಪುರ -: ಕರ್ನಾಟಕ ಸಿದ್ದಿ ಸಮುದಾಯ ಸಮಿತಿ ಮಂಚಿಕೇರಿ ವಿಭಾಗದಿಂದ  ಕುಂದರಗಿ ಪಂಚಾಯತದ ಮಾವಿನಕಟ್ಟಾ ಶ್ರೀ ಶಕ್ತಿ ಸಮುದಾಯಭವನದಲ್ಲಿ ಸಿದ್ದಿ ಜನಾಂಗದವರಿಗೆ ಕಾನೂನು ಅರಿವು,ದಾಖಲೆಗಳನ್ನು ಸರಿ ಪಡಿಸಿ ಕೊಳ್ಳುವಿಕೆ ಹಾಗೂ ಸಿದ್ದಿ ಪೌಷ್ಠಿಕ ಆಹಾರದ ಕುರಿತು ಮಾಹಿತಿ ನೀಡಲು ಸಭೆಯನ್ನು ಆಯೋಜಿಸಲಾಗಿತ್ತು .

ಕಾರ್ಯಕ್ರಮವನ್ನು  ಉಚ್ಚ ನ್ಯಾಲಯಾಲಯದ ನ್ಯಾಯವಾದಿಗಳಾದ  ಜಯರಾಮ್ ಸಿದ್ದಿಯವರು ಉದ್ಘಾಟಿಸಿ ಕಾನೂನು ಪ್ರಕಾರದ ಹಲವು ಮಾಹಿತಿಗಳನ್ನು ನೀಡಿದರು.ಭಾಸ್ಕರ ಸಿದ್ದಿ ಮಂಚಿಕೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕುಟುಂಬ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಶಂಕರ ಸಿದ್ದಿ ಮಾದನಸರ ವಹಿಸಿದ್ದರು,ಖಜಾಂಚಿ  ರವಿ ಸಿದ್ದಿ ಭರಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು ಕಾರ್ಯದರ್ಶಿ  ಲೋಕೇಶ ಸಿದ್ದಿ ನಿರೂಪಿಸಿದರು,

ಸಮಿತಿಯ ಉಪಾಧ್ಯಕ್ಷರಾದ  ಫಿರ್ಮಾಬಿ,ರಾಮಾ ಸಿದ್ದಿ ಉಚಗೇರಿ ಉಪಸ್ಥಿತರಿದ್ದರು.
ಸಭೆಯಲ್ಲಿ ಪೋಕ್ಸೊ ಕಾಯಿದೆ,ಅಲ್ಟ್ರಾಸಿಟಿ ಹಾಗೂ ಇನ್ನಿತರ ದೌರ್ಜನ್ಯಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಜನಸ್ನೇಹಿ,ಜನಾನುರಾಗಿ ಎಸಿಎಫ್ ಹಿಮವತಿ ಭಟ್ ಪದೋನ್ನತಿಯೊಂದಿಗೆ ಗೌರವದ ವರ್ಗಾವಣೆ ಬೆಂಗಳೂರಿಗೆ.

ವಿಧಾನಪರಿಷತ್ ಮಾಜಿ ಸದಸ್ಯ “ಶಾಂತಾರಾಮ್ ಸಿದ್ದಿ” ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಯ ಕೆನರಾ ವೃತ್ತದಲ್ಲಿ ಉತ್ತಮ ಕರ್ತವ್ಯ …

Leave a Reply

Your email address will not be published. Required fields are marked *