
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ನೂತನನಗರ ಜಡ್ಡಿಯಲ್ಲಿ ಕೆಲ ವರ್ಷಗಳಿಂದ “ಆಯುಷ್ಮಾನ್ ಆರೋಗ್ಯ ಕೇಂದ್ರ ಬಡ,ಮದ್ಯಮ,ಕಾರ್ಮಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡುತ್ತಾ ಬಂದಿದ್ದು ಇತ್ತೀಚೆಗೆ ಮಾದ್ಯಮಗಳಲ್ಲಿ ಕೇಂದ್ರಗಳನ್ನು ಮುಚ್ಚುತ್ತಾರೆ ಎಂಬ ಮಾಹಿತಿ ಹರಿದಾಡುತ್ತಿದೆ ಹಾಗೊಂದು ವೇಳೆ ಸರ್ಕಾರ ಆಯುಷ್ಮಾನ್ ಆರೋಗ್ಯ ಕೇಂದ್ರಗಳನ್ನು ಮುಚ್ಚುವ ನಿರ್ಧಾರ ಮಾಡಿದರೆ ಅದನ್ನು ಪ್ರಭಲವಾಗಿ ವಿರೋದಿಸುತ್ತೇವೆ ಎಂದು ನೂತನ ನಗರ ಜಡ್ಡಿ ವಾಡ್೯ ಮಾಜಿ ಸದಸ್ಯ ಅಲಿ ಹೇಳಿದರು.

ಅವರು ಪಟ್ಟಣದ ನೂತನನಗರ ಜಡ್ಡಿ ಆಯುಷ್ಮಾನ್ ಆರೋಗ್ಯ ಕೇಂದ್ರ ದ ಮುಂದೆ ಸ್ಥಳೀಯ ನಾಗರಿಕರ ಜೊತೆಗೂಡಿ ಆರೋಗ್ಯ ಕೇಂದ್ರ ಮುಚ್ಚುವ ನಿರ್ಧಾರದ ವಿರುದ್ದ ಸಾಂಕೇತಿಕವಾಗಿ ಪ್ರತಿಭಟಿಸಿ ಮಾದ್ಯಮಕ್ಕೆ ಮಾಹಿತಿ ನೀಡಿದರು

ನೂತನನಗರ ಜಡ್ಡಿಯಲ್ಲಿ 95% ಕುಟುಂಬಗಳು ಬಡ ಮದ್ಯಮವರ್ಗದ ಕುಟುಂಬಗಳಾಗಿದ್ದು ನಿತ್ಯವು ದುಡಿದು ಬದುಕಬೇಕಿದೆ. ಈ ಮದ್ಯೆ ಸಣ್ಣ ಪುಟ್ಟ ಆರೋಗ್ಯ ವ್ಯತ್ಯಾಸವನ್ನು ಪರೀಕ್ಷೆ ಮಾಡಿಸಿಕೊಳ್ಳಲು ಸಮೀಪದ ಆಯುಷ್ಮಾನ್ ಆರೋಗ್ಯ ಕೇಂದ್ರ ಅನುಕೂಲ ಆಗಿದ್ದು ಸರ್ಕಾರಿ ಆಸ್ಪತ್ರೆಗೆ ಹೋಗಿಬರಲು ಆಟೋ ಅಥವ ವಾಹನದ ವ್ಯವಸ್ಥೆ ಅನಿವಾರ್ಯ ಆಗುತ್ತದೆ ಮತ್ತು ಅಷ್ಟು ದೂರ ಕ್ರಮಿಸಲು ವಯೋವೃದ್ದರು,ಅಂಗವಿಕಲರಿಗೆ ಬಾರಿ ಸಮಸ್ಯೆ ಆಗಲಿದ್ದು ಸರ್ಕಾರ ಜನರ ಆರೋಗ್ಯದ ಹಿತದೃಷ್ಟಿಯಿಂದ ತೆರೆದ ಆಯುಷ್ಮಾನ್ ಆರೋಗ್ಯ ಕೇಂದ್ರದಿಂದ ಅನುಕೂಲ ಆಗಿದೆ ಇದನ್ನು ಮುಚ್ಚುವ ನಿರ್ದಾರಮಾಡುವುದು ಜನವಿರೋದಿ ನಡೆಯಾಗಲಿದೆ ಇದರ ವಿರುದ್ದ ಪ್ರಭಲವಾದ ಪ್ರತಿಭಟನೆಗೆ ಸಿದ್ದವಿದ್ದೇವೆ ಹಾಗಾಗಿ ಹಿರಿಯ ಆರೋಗ್ಯ ಅಧಿಕಾರಿಗಳು ಆಲೋಚಿಸಿ ನಿರ್ಧಾರ ಮಾಡಬೇಕಿದೆ.
ಅಲಿ
ಮಾಜಿ ಪಟ್ಟಣ ಪಂಚಾಯತ್ ಸದಸ್ಯ, ನೂತನನಗರ ವಾಡ್೯
ಯಲ್ಲಾಪುರ
















Prathidvani Yellapura