
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ನಂದೊಳ್ಳಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಕ್ಕೆ ನೂತನ ಆಡಳಿತ ಕಮಿಟಿ ಆಯ್ಕೆ ನಡೆದಿದ್ದು ಎರಡನೇ ಬಾರಿಗೆ ಅಧ್ಯಕ್ಷರಾಗಿ ತಿಮ್ಮಣ್ಣ ವಿ ಭಾಗ್ವತ ಹಾಗೂ ಉಪಾಧ್ಯಕ್ಷರಾಗಿ ನಾರಾಯಣ ಭಟ್ಟ ಭಟ್ರಕೇರಿ ಅವರು ಎಲ್ಲಾ ನಿರ್ದೇಶಕರ ಒಮ್ಮತದ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದಾರೆ.

ನೂತನ ನಿರ್ದೇಶಕರಾಗಿ ಎಮ್ ಅರ್. ಭಟ್ಟ , ಯು.ಕೆ ಬ್ಯಾಂಕ್ ನಿರ್ದೇಶಕ ತಮ್ಮಣ್ಣ ಭಟ್ಟ ಕವಡಿಕೆರೆ ಸಂಘದ ಬೆಳವಣಿಗೆ, ಮುಂದಿನ ಸಂಘದ ಅಭಿವ್ರದ್ದಿ ಕುರಿತಾಗಿ ಮಾತನಾಡಿದರು.

ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷ ಮಾತನಾಡಿ ಮತ್ತೊಮ್ಮೆ ಸೇವೆ ಮಾಡಲು ಅವಕಾಶ ನೀಡಿದ ಸಂಘದ ನಿರ್ದೇಶಕರಿಗೆ, ಸದಾ ಸಂಘದ ಏಳ್ಗೆಗೆ ಸಹಕರಿಸಿ ಮಾರ್ಗದರ್ಶನ ನೀಡಿದ ಡಿ. ಸಿ.ಸಿ ಬ್ಯಾಂಕ್ ಅಧ್ಯಕ್ಷರು ಶಾಸಕರಾದ ಶಿವರಾಮ್ ಹೆಬ್ಬಾರ್ ಅವರಿಗೆ ಹಾಗೂ ಸಮಸ್ತ ಸಂಘದ ಸದಸ್ಯರಿಗೂ ಧನ್ಯವಾದ ಹೇಳಿದರು. ಸಂಘವನ್ನು ಇನ್ನೂ ಹೆಚ್ಚು ಯಶಸ್ವಿ ಗೋಳಿಸುವಲ್ಲಿ.ಎಲ್ಲ ಸದಸ್ಯರಿಗೂ ಇನ್ನೂ ಹೆಚ್ಛು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಯು ಕೆ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ತಮ್ಮಣ್ಣ ಭಟ್ಟ ಕವಡಿಕೆರೆ , ಸಿವಿಲ್ ಗುತ್ತಿಗೆ ದಾರ ಗಜಾನನ ಭಟ್ಟ ಕುಂಕಿ.ತಿಮ್ಮಣ್ಣ ಎಸ್ ಭಟ್ಟ ತಟ್ಟಿಗದ್ದೆ , ನಾಗೇಶ್ ನಾಯ್ಕ್ ಇತರರು ಉಪಸ್ಥಿತರಿದ್ದು ಆಯ್ಕೆಯಾದ ಕಮಿಟಿಗೆ , ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭಾಶಯ ಕೋರಿದರು.


ಸಂಘದ ಮುಖ್ಯ ಕಾರ್ಯನಿರ್ವಾಹಕರು ಶ್ರೀ ಗುರುಪ್ರಸಾದ್ ಹೆಗಡೆ ಎಲ್ಲರನ್ನು ಸ್ವಾಗತಿಸಿದರು. ಶ್ರೀ ನಾರಾಯಣ ಭಟ್ಟ ಭಟ್ರಕೇರಿ ವಂದನಾರ್ಪಣೆ ನಿರ್ವಹಿಸಿದರು. ಚುನಾವಣಾ ಅಧಿಕಾರಿಯಾಗಿ ಭಾಸ್ಕರ್ ನಾಯ್ಕ್ ಕಾರ್ಯ ನಿರ್ವಹಿಸಿದರು.

















Prathidvani Yellapura