
ಪ್ರತಿಧ್ವನಿ ಯಲ್ಲಾಪುರ : ಹಿರಿಯ ಶಾಸಕರೇ ತಮ್ಮ ಕ್ಷೇತ್ರ ವನ್ನು ಬರಗಾಲ ಪೀಡಿತ ಘೋಷಣೆ ಮಾಡದೇ ಇದ್ದರೇ ರಾಜಿನಾಮೆ ನೀಡುತ್ತೇನೆಂದು ಹೇಳುತ್ತಾರೆ,ಹಾಗಿದ್ದಲ್ಲಿ ಶೇಕಡಾ 70% ಮತದಾರರೇ ಸರಕಾರದ ಈಗಿನ ಸುತ್ತೋಲೆಯ ಸಮಸ್ಯೆ ಎದುರಿಸುತ್ತಿರುವಾಗ ಶಾಸಕರು ವಿಧಾನ ಸಭೆ ಯಲ್ಲಿ ತನ್ನ ರಾಜೀನಾಮೆ ಪ್ರಕಟಿಸಬೇಕಿತ್ತು ಆಗ ಶಾಸಕರ ಜನಸ್ಪಂದನೆ ಬಗ್ಗೆ ಕ್ಷೇತ್ರಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿತ್ತು.ಆದರೆ ಶಾಸಕರು ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿ ಆ ವಿಷಯ ಅಲ್ಲೇ ಬಿಟ್ಟಿರುವುದು ಮತದಾರರಿಗೆ ಮಾಡಿದ ಅನ್ಯಾಯ ಎಂದು ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಹೇಳಿದರು.

ಹಿರಿಯ ನಾಯಕ ಉಮೇಶ್ ಭಾಗ್ವತ್ ಮಾತು.
ಮಾತನಾಡಿ ಅತಿಕ್ರಮಣ ದಾರರನ್ನು ಒಕ್ಕೆಲೆಬ್ಬಿಸುವ ಪ್ರಯತ್ನ ಈ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಇದಕ್ಕೆ ಯಲ್ಲಾಪುರ ದ ಶಾಸಕರು ಸಂಪೂರ್ಣ ಹೊಣೆ ಹೊತ್ತು ಈ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿದರು.

ಬಿಜೆಪಿ ಪ್ರಮುಖ ಗಣಪತಿ ಮಾನಿಗದ್ದೆ ಮಾತು
ಸರಕಾರದ ಪ್ರತಿ ಆದೇಶಗಳು ಜನರಿಗೆ ಉರುಳಾಗುತ್ತಿದೆ.ಒಂದು ದಿನ ಗುಟ್ಕಾ ನಿಷೇಧ, ಒಂದು ದಿನ ಕರ ಸ್ವೀಕರಿಸಬಾರದೆಂಬ ಸರಕಾರದ ಆದೇಶಗಳು ಜನಸಾಮಾನ್ಯರ ಬಾಳಿನ ಜೊತೆಗೆ ಚೆಲ್ಲಾಟ ವಾಡುತ್ತಿವೆ ಎಂದು ಹೇಳಿದರು.

ಹಿರಿಯ ಮುಖಂಡ ಗಣಪತಿ ಮುದ್ದೇಪಾಲ ಮಾತು.
ಕಾಂಗ್ರೆಸ್ ನಮಗೆಲ್ಲರಿಗೂ ಮಾರಕ,ಜನಸಾಮಾನ್ಯರ ಆಶೋತ್ತರಗಳನ್ನು ದಿಕ್ಕರಿಸಿ ತಮಗೆ ಮನಸ್ಸಿಗೆ ಬಂದ ಹಾಗೆ ಆಡಳಿತ ನಡೆಸುತ್ತಿರುವುದು ಮುಂದಿನ ದಿನಗಳಲ್ಲಿ ಜನಸಾಮಾನ್ಯರು ದಂಗೆ ಏಳಲು ಕಾರಣವಾಗುತ್ತದೆ ಎಂದು ಹೇಳಿದರು

ಬಿಜೆಪಿ ಪ್ರಮುಖ ವಿಶ್ವನಾಥ ಹಳೇಮನೆ ಮಾತು
ಕಸ್ತೂರಿ ರಂಗನ ವರದಿ ಸಮಸ್ಯೆ ಬಗ್ಗೆ ಮಾತನಾಡಿ,ಗಾಂವಠಾಣ ಸಮಸ್ಯೆ,ಇ ಸ್ವತ್ತು, ಸಮಸ್ಯೆ ಗಳ ಬಗ್ಗೆ ಬೆಳಕು ಚೆಲ್ಲಿದರು.
ಶ್ರೀಪತಿ ಮುದ್ದೇಪಾಲ,ರಾಮಣ್ಣ ಚಿಕ್ಯಾನಮನೆ,ರಾಮಕ್ರಷ್ಣ ಅಳ್ವಗದ್ದೆಮಾತನಾಡಿದರು
ಈ ಸಂದರ್ಭದಲ್ಲಿ ಜಿಲ್ಲಾ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನವರಮಠ, ಸತ್ಯನಾರಾಯಣ ಹೆಗಡೆ, ಕೆ.ಟಿ.ಹೆಗಡೆ, ರಾಮಕೃಷ್ಣ ಅಳ್ವಗದ್ದೆ,ಗಣಪತಿ ಕೊಂಬೆ,ದತ್ತಣ್ಣ ಬೋಳಗುಡ್ಡೆ,ಕೀರ್ತಿರಾಜ ಕೋಟೆಮನೆ,ಮಹೇಶ ಕುಣಬಿ,ಕುಸುಮಾ ಸಿದ್ದಿ, ಉಪಸ್ಥಿತರಿದ್ದರು.











Prathidvani Yellapura