Breaking News

ಚಿಪಗೇರಿ ಶ್ರೀ ರಾಮ ವನವಾಸಿ ವಿದ್ಯಾರ್ಥಿ ನಿಲಯದ ಆವಾರದಲ್ಲಿ ಮೂರು ದಿನಗಳ ಪರಶುರಾಮ ಸೇವಾ ಯಾತ್ರೆಗೆ ಶಾಂತಾರಾಮ್ ಸಿದ್ದಿ ಚಾಲನೆ

ಸಾರ್ಥಕ ಸಾತ್ವಿಕ ಕಾರ್ಯಕ್ರಮದ ದೀಪ ಬೆಳಗಿದ ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ

ಪ್ರತಿಧ್ವನಿ,ಯಲ್ಲಾಪುರ : ಅನಪೇಕ್ಷಿತ ಜೀವನ ಶೈಲಿಯಿಂದಾಗಿ ಸ್ವಯಂ ನಾಟಿ ವೈದ್ಯರಾಗಿದ್ದ ವನವಾಸಿಗಳಿಗೂ ಇತ್ತೀಚಿನ ದಿನಗಳಲ್ಲಿ ಸ್ವಾಸ್ಥ್ಯಕ್ಕಾಗಿ ಔಷಧಿ-ಚಿಕಿತ್ಸೆಗಳ ಅಗತ್ಯ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸಣ್ಣ-ಪುಟ್ಟ ಖಾಯಿಲೆಗಳಿಗೂ ವೈದ್ಯರನ್ನು ಆಶ್ರಯಿಸಬೇಕಾಗಿದೆ. ವನವಾಸಿ ಕಲ್ಯಾಣದ ಗಂಗೋತ್ರಿ ಎನಿಸಿರುವ ಚಿಪಗೇರಿಯ ವಿದ್ಯಾರ್ಥಿ ನಿಲಯದ ಆವರಣದಲ್ಲಿ ವೈದ್ಯಕೀಯ ರಂಗದ ಹಿರಿ-ಕಿರಿಯರಿಗೆ ಅಧ್ಯಯನ ಮತ್ತು ಅಪೂರ್ವ ಅನುಭವಗಳಿಗೆ ಅವಕಾಶ ನೀಡಿರುವುದು ಸಮಂಜಸವಾಗಿದೆ ಎಂದು ವಿಧಾನಪರಿಷತ್ ಸದಸ್ಯ ವನವಾಸಿ ಕಲ್ಯಾಣದ ರಾಜ್ಯ ಕಾರ್ಯದರ್ಶಿ ಶಾಂತಾರಾಮ ಸಿದ್ಧಿ ಹೇಳಿದರು.


ಅವರು ತಾಲೂಕಿನ ಗಡಿಭಾಗದ ಚಿಪಗೇರಿಯ ಶ್ರೀರಾಮ ವನವಾಸಿ ವಿದ್ಯಾರ್ಥಿ ನಿಲಯದ ಆವಾರದಲ್ಲಿ ವನವಾಸಿ ಕಲ್ಯಾಣ ಕರ್ನಾಟಕ, ಶಿರಸಿ ಜಿಲ್ಲೆ ಹಾಗೂ ರಾಷ್ಟಿçÃಯ ವೈದ್ಯಕೀಯ ಸಂಘಟನೆ (ಎನ್.ಎಂ.ಓ)ಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಮೂರು ದಿನಗಳ ಶ್ರೀ ಭಗವಾನ್ ಪರಶುರಾಮ ಸೇವಾಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ವನವಾಸಿ ಕಲ್ಯಾಣದ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ ಮಾತನಾಡಿ, ವಿಶೇಷವಾಗಿ ಗ್ರಾಮೀಣ ಪ್ರದೇಶದ ಮುಗ್ಧರಿಗೆ ಸೂಕ್ತ ಮತ್ತು ಶಾಶ್ವತ ಪರಿಹಾರ ಕಲ್ಪಿಸುವುದು ನಮ್ಮ ಸಂಘಟನೆಯ ಪ್ರಮುಖ ಗುರಿ ಮತ್ತು ಉದ್ದೇಶವಾಗಿz. ಹಿಂದೂಳಿದ ಸಮುದಾಯದವರ ನಾಯಕ ಅಂಬೇಡ್ಕರ ಜಯಂತಿಯಂದೇ ಈ ಕಾರ್ಯಕ್ರಮ ಇಟ್ಟುಕೊಂಡಿರುವುದು ಅರ್ಥಪೂರ್ಣ ಸಂಘಟಕರು ಗ್ರಾಮೀಣ ಪ್ರದೇಶಗಳಿಗೆ ಸ್ವಯಂ ಭೇಟಿ ನೀಡಿ, ಅಲ್ಲಿನ ನಿವಾಸಿಗಳ ಯೋಗ-ಕ್ಷೇಮ ವಿಚಾರಿಸುವ ಕಾರ್ಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕವೂ, ಉತ್ತೇಜಕವೂ ಆಗಿದ್ದು, ರಾಷ್ಟೀಯ ಚಾರಿತ್ರ ನಿರ್ಮಾಣ ಕಾರ್ಯದಲ್ಲಿ ಎನ್.ಎಂ.ಓ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದೆ ಎಂದರು.
ಏನ್.ಎ.ಓ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ ಡಾ.ಕುಮಾರ ಅಂಗಡಿ ಮಾತನಾಡಿ, ಕಾಶಿಯ ಬನಾರಸ್ ವಿ.ವಿ. ಯಲ್ಲಿ ೧೯೭೭ ರಲ್ಲಿ ಸ್ಥಾಪನೆಯಾದ ನಮ್ಮ ಸಂಘಟನೆ ರಾಷ್ಟಸೇವೆ ಮತ್ತು ಸ್ವಾಸ್ಥ ಸೇವೆಗಳ ಉದ್ದೇಶ ಹೊಂದಿದೆ. ವನವಾಸಿಗಳ ಅನಾರೋಗ್ಯ ಚಿಕಿತ್ಸೆ ಮಾತ್ರವಲ್ಲದೇ, ಅವರ ನಿವಾಸಕ್ಕೆ ತೆರಳಿ ಅವರೊಂದಿಗೆ ಬೆರೆತು ಮಾತನಾಡುವುದೂ ನಮ್ಮ ಕಾರ್ಯಕ್ರಮದ ಭಾಗವೇ ಆಗಿದೆ ಎಂದು ಹೇಳಿ ಸಂಘಟನೆಯ ಕುರಿತು ವಿವರಿಸಿದರು.
ಎನ್.ಎಂ.ಓ ಅ.ಭಾ ಸಹಕಾರ್ಯದರ್ಶಿ ಡಾ||ಗೀತಾ ಉತ್ತೂರು ವೇದಿಕೆಯಲ್ಲಿದ್ದರು.
ವ್ಯಾಸರಾಜ್ ಸ್ವಾಗತಿಸಿ, ನಿರ್ವಹಿಸಿದರು. ವನವಾಸಿ ಕಲ್ಯಾಣ ಶಿರಸಿ ಜಿಲ್ಲಾ ಶೈಕ್ಷಣಿಕ ಪ್ರಮುಖ ಬಾಬು ಕಾತ್ರಾಟ್ ವಂದಿಸಿದರು.
ಯಲ್ಲಾಪುರ, ಮುಂಡಗೋಡು ಹಾಗೂ ಶಿರಸಿ ತಾಲೂಕುಗಳ ೫೩ ವನವಾಸಿ ಗ್ರಾಮಗಳ ಸಿದ್ಧಿ, ದನಗರ ಗೌಳಿ, ಕುಂಬ್ರಿ ಮರಾಠಿ ಮತ್ತು ಕುಣಬಿ ಸಮುದಾಯಗಳ ನಿವಾಸಕ್ಕೆ ಸೇವಾ ಯಾತ್ರೆ ತೆರಳಿದ್ದು ಒಟ್ಟೂ ೧೨೮ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಮೂರು ದಿನಗಳ ಸೇವಾ ಯಾತ್ರೆಯಲ್ಲಿ ಪಾಲ್ಗೊಂಡು ಕಾರ್ಯನಿರ್ವಹಿಸುವರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *