Breaking News

ಮುಂದುವರಿದ ಅರಣ್ಯಾಧಿಕಾರಿಗಳ ದಬ್ಬಾಳಿಕೆ – ಅರ್ಧ ಎಕರೆ ಅಡಕೆ ಗಿಡಗಳನ್ನು ಕಿತ್ತು ಧ್ವಂಸ – ರೈತ ಕಂಗಾಲು.!!!

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲೂಕಿನ ಶೀಗೆಪಾಲ ಗ್ರಾಮದ ರೈತ ಗುಡೇಪಾಲ ಶ್ರೀ ರಾಮಚಂದ್ರ ಭಟ್ಟರಿಗೆ ಸೇರಿದ ಸುಮಾರು ಅರ್ಧ ಎಕರೆ ಅಡಕೆ ತೋಟವನ್ನು ಸ್ಥಳೀಯ ಅರಣ್ಯ ಇಲಾಖೆ ಫಾರೆಸ್ಟರ್ ಮತ್ತು ಗಾರ್ಡ್ ಗಿಡಗಳನ್ನು ಕಡಿದು,ಕಿತ್ತು ಧ್ವಂಸ ಮಾಡಿದ್ದಾರೆ.

ರಾಮ್ ಭಟ್ಟರ ಜಮೀನಿಗೆ ಜಿಪಿಎಸ್ ಮ್ಯಾಪ್ ಮತ್ತು ಸರಕಾರದ ಆದೇಶ ಪತ್ರ ಎಲ್ಲವೂ ಇದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ದುಂಡಾವರ್ತನೆ ಮೆರೆದಿದ್ದಾರೆ. ತಮ್ಮ ಜಮೀನಿಗೆ ಹೊಂದಿಕೊಂಡಿರುವ ಸ್ಥಳವಾಗಿದ್ದು ಅಲ್ಲದೆ ಯಾವುದೆ ಮರಗಳನ್ನು ಸಹ ಕಡಿಯದೆ ಕೃಷಿಗಾಗಿಯೆ ಬಳಕೆ ಮಾಡಿಕೊಂಡ ಜಾಗವಾಗಿದೆ.ಆದರು ಈ ರೀತಿ ನಡೆದುಕೊಂಡಿರುವುದು ಅಕ್ಷಮ್ಯವಾಗಿದೆ ಎಂಬುದು ನೊಂದ ರೈತರ ಅಳಲಾಗಿದೆ.

ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ ಸೇರಿದಂತೆ ಪ್ರಮುಖರು ಹಾಗು ಸ್ಥಳೀಯ ರೈತರೊಂದಿಗಗೆ ಭೇಟಿನೀಡಿ ವಸ್ತುಸ್ಥಿತಿ ಅರಿತು ಸಂತ್ರಸ್ತ ರೈತರು ಮತ್ತು ಅನ್ಯಾಯಕ್ಕೊಳಗಾದ ರೈತರಿಗೆ ಧೈರ್ಯ ತುಂಬಲಾಯಿತು.

ಈ ಪ್ರಕಾರಣದ ಸಂಬಂಧ ಇಲಾಖೆಯ ಮೇಲಾಧಿಕಾರಿಗಳೊಂದಿಗೆ ದೂರವಾಣಿ ಕರೆಯ ಮೂಲಕ ಮಾತನಾಡಿ ಕಾಲಮಿತಿಯಲ್ಲಿ ಅಗತ್ಯ ಕ್ರಮಕ್ಕೆ ಆಗ್ರಹಿಸಲಾಯಿತು.

ಇಷ್ಟರಲ್ಲೇ ಊರಿನವರೊಂದಿಗೆ ಮತ್ತೊಂದು ಸುತ್ತು ಸಭೆ ನಡೆಸಿ ಅರಣ್ಯ ಇಲಾಖೆ ನೌಕರರು ತಾಲೂಕಿನಲ್ಲಿ ಬಡ ರೈತರ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ವಿರುದ್ಧ ಮುಂದಿನ ಹೋರಾಟ ರೂಪಿಸಲು ತೀರ್ಮಾನಿಸಲಾಯಿತು.

ಪ್ರಮುಖರಾದ  ಕೆಟಿ ಹೆಗಡೆ, ಎಂಜಿ ಭಟ್ ಶೀಗೆಪಾಲ, ನರಸಿಂಹ ಹಂಗಾರಿ, ನಾರಾಯಣ ಭಟ್ ಕಲ್ಲಬ್ಬಿ, ನಾರಾಯಣ ಭಟ್ ಶೀಗೆಪಾಲ, ರಾಮಚಂದ್ರ ಭಟ್ ಶೀಗೆಪಾಲ ಇದ್ದರು.

ಎಕರೆಗಟ್ಟಲೆ ಕಾಡನ್ನು ಕಡಿದು ಅತಿಕ್ರಮಣ ಮಾಡಿ ಅಕ್ರಮವಾಗಿ ಪರರಿಗೆ ಮಾರಾಟ ಮಾಡುವವರಿಗೆ ಇಂತಹ ಕಾನೂನು ಲಾಗು ಆಗುವುದಿಲ್ಲ ಸಣ್ಣಪುಟ್ಟ ಒತ್ತುವರಿ ಮಾಡಿದ ರೈತರಮೇಲೆ ಇಲಾಖೆ ಪ್ರಹಾರ ಮಾಡುವುದು ಎಷ್ಟರ ಮಟ್ಟಿಗೆ ನ್ಯಾಯ ಹೀಗೆ ಮುಂದುವರೆದರೆ ರೈತರು ತಿರುಗಿ ಬೀಳುವ ಕಾಲ ದೂರವಿಲ್ಲ. ನೊಂದ ರೈತರು

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಅಧಿಕಾರಿಗಳೆ ತಡೆದಿದ್ದ ಷರತ್ತು ಅವಧಿ ಮುಗಿಯದ ಭೂಮಿ ಮಾರಾಟ – ಅಧಿಕಾರಿಗಳಿಂದಲೆ ಖಾತೆ ಬದಲಾವಣೆಗೆ ಹುನ್ನಾರ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ತಟಗಾರ ಕ್ರಾಸ್ ಸಮೀಪದಲ್ಲಿ ಸರ್ಕಾರದ ಷರತ್ತು ಅವಧಿ ಮುಗಿಯದ ಭೂಮಿ ಮಾರಟಕ್ಕೆ ಆಕ್ಷೇಪಣೆ ಸಲ್ಲಿಸಲಾಗಿದ್ದ …

Leave a Reply

Your email address will not be published. Required fields are marked *