
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಗಣಪತಿ ಗಲ್ಲಿ ಸರ್ಕಾರಿ ಶಾಲೆಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷರು ಸೇರಿದಂತೆ ಸಂಘದ ಇತರರು ಹಾಗು ಶಾಲಾ ಶಿಕ್ಷವೃಂದ ಮತ್ತು ಸ್ಥಳೀಯ ಪೋಷಕರು ನಾಗರಿಕರು ಗೌರವಿಸಿ ಸನ್ಮಾನಿಸಿದರು.

ಗಣಪತಿ ಗಲ್ಲಿ ಶಾಲೆಗು ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಾಮಚಂದ್ರ ನಾಯ್ಕ್ ಅವರಿಗು ಅವಿನಭಾವ ಸಂಬಂಧ. ಹಿಂದೆ ಇದೇ ಶಾಲೆಯಲ್ಲಿ ಸ್ಥಳೀಯ ಗೊಸಾವಿ ಸಮುದಾಯದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಣ ತೊಟ್ಟವರು ರಾಮಚಂದ್ರ ನಾಯ್ಕ ಅವರು ಶಾಲೆಯಲ್ಲಿನ ಪ್ರತಿ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತ ಬಿಸಿ ಊಟದ ಕಲ್ಪನೆ ಇಲ್ಲದ ಸಮಯದಲ್ಲಿ ಬೆಳಗ್ಗೆ ಉಪಹಾರ, ಮದ್ಯಾಹ್ನ ಊಟ, ಸಂಜೆ ಹಣ್ಣು ಹಂಪಲು ನೀಡುತ್ತಾ ಬಡ ಮಕ್ಕಳ ಹಸಿವು ನೀಗಿಸಿ ತಲೆಗೆ ವಿದ್ಯೆ ತುಂಬಿದ ಮಹಾ ಶಿಕ್ಷಕ. ಪ್ರತಿ ಹಬ್ಬ ಹರಿದಿನಗಳು, ಜಾತ್ರೆ, ಪ್ರವಾಸ ಸೇರಿದಂತೆ ಇತರೆ ಚಟುವಟಿಕೆಗಳಿಗೆ ಬಡ ವಿದ್ಯಾರ್ಥಿಗಳ ಪಾಲಕರಿಂದ ಹಣ ನಿರೀಕ್ಷಿಸದೆ ತಮ್ಮ ಸಂಬಳದ ಹಣವನ್ನೆ ಧಾರೆ ಎರೆದು ಇತರೆ ಮಕ್ಕಳಿಗೆ ಸಿಗುವ ಸಂತೋಷ ಈ ಬಡ ಮಕ್ಕಳಿಗೆ ಸಿಗಬೇಕೆಂದು ನಿಸ್ವಾರ್ಥ ಸೇವೆ ಸಲ್ಲಿಸಿದ ಮಹಾಗುರು. ತನ್ನ ಸ್ವಂತ ಹಣದಲ್ಲಿ ಸುಂದರ ವೇದಿಕೆ ಕಲ್ಪಿಸಿ ಕೊಟ್ಟು ತನ್ನ ಬದ್ದತೆ ತೋರಿದ ಶಿಕ್ಷಕ ರಾಮಚಂದ್ರ ನಾಯ್ಕ್ ಅವರ ಸೇವೆ ಅನಂತವಾದದು ಅಲ್ಲದೆ ಪ್ರಶಸ್ತಿಗೆ ಒಂದು ಗೌರವ ಬಂದಂತಾಗಿದೆ ಅವರನ್ನು ಗೌರವಿಸುವುದು ನಮ್ಮ ಶಾಲೆಗೆ ಸಂದ ಮಹಾ ಭಾಗ್ಯ ಎಂದು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸುನಿಲ್ ಯಲ್ಲಾಪುರಕರ್ ಮಾದ್ಯಮಕ್ಕೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಬಾಗ್, ಶಾಲೆಯ ಮುಖ್ಯೋಪಾಧ್ಯಾಯ, ಶಿಕ್ಷಕ ಶಿಕ್ಷಕಿಯರು, ಪೋಷಕರು,ಸಾರ್ವಜನಿಕರು ಉಪಸ್ಥಿತರಿದ್ದರು














Prathidvani Yellapura