Breaking News

ಸೆಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪ್ ಸೊಸೈಟಿಯಿಂದ ಬುದ್ಧಿಮಾಂದ್ಯರು ಮತ್ತು ವೃದ್ಧರಿಗೆ ಚಾದರ ವಿತರಣೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : 76 ನೇ ವರ್ಷದ ಸ್ವಾತಂತ್ರೊತ್ಸವದ ನಿಮಿತ್ತ ಸೆಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪ್ ಸೊಸೈಟಿ ವತಿಯಿಂದ ಬುದ್ಧಿಮಾಂದ್ಯರು ಹಾಗೂ ಹಿರಿಯರಿಗೆ ಸಿಹಿ ಹಾಗೂ ಚಾದರ ನೀಡುವ ಕಾರ್ಯಕ್ರಮ ಸಾರ್ಥಕವಾಗಿದೆ. ಎಲ್ಲೆಲ್ಲಿಯೋ ಯಾವುದಕ್ಕೋ ವೃಥಾ ಖರ್ಚು ಮಾಡುವ ಬದಲು ಇಂತಹ ಸದ್ದುದ್ದೇಶದ ಕಾರ್ಯ ಮಾಡಿದಾಗ ಸಮಾಜಕ್ಕೆ ಉತ್ತಮ ಸಂದೇಶ ಮತ್ತು ಮಾನಸಿಕ ತೃಪ್ತಿ ಹೊಂದುವುದಲ್ಲದೇ ತಮ್ಮ ಸಂಸ್ಥೆಯ ಬದ್ಧತೆಯನ್ನು ತೋರಿದಂತಾಗುತ್ತದೆ ಎಂದು ಪಿಎಸ್‌ಐ ನಿರಂಜನ ಹೆಗಡೆ ಹೇಳಿದರು.


ಅವರು ಪಟ್ಟಣದ ನಾಯ್ಕನಕೆರೆಯಲ್ಲಿರುವ ಶ್ರೀರಾಘವೇಂದ್ರ ಬುದ್ಧಿಮಾಂದ್ಯರ ಮತ್ತು ವೃದ್ಧರ ಆಶ್ರಮದಲ್ಲಿ ಸ್ವಾತಂತ್ರೊತ್ಸವದ ನಿಮಿತ್ತ ಸೆಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪ್ ಸೊಸೈಟಿ ಹಮ್ಮಿಕೊಂಡಿದ್ದ 50 ಕ್ಕೂ ಹೆಚ್ಚು ಜನರಿಗೆ ಚಾದರ್ ಹಾಗೂ ಸಿಹಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ಜಿಲ್ಲೆಯಲ್ಲಿ ಕೇವಲ ಆರ್ಥಿಕ ವ್ಯವಹಾರವೊಂದನ್ನೇ ಗುರಿಯಾಗಿರಿಸಿಕೊಳ್ಳದೇ ಸಮಾಜದೊಂದಿಗೆ ಬೆರೆತು ಕಷ್ಟಸುಖಗಳಿಗೆ ಸ್ಪಂದಿಸುವ ಸಂಸ್ಥೆ ಸೆಂಟ್ ಮಿಲಾಗ್ರಿಸ್ ಆಗಿದೆ. ಕೋವಿಡ್ ಸಂದರ್ಭದಲ್ಲಿ, ಪ್ರವಾಹ ಪರಿಸ್ಥಿತಿಯಲ್ಲಿ ಸೇವಾ ಮನೋಭಾವದೊಂದಿಗೆ ಜನರೊಂದಿಗೆ ಬೆರೆತು ಶ್ಲಾಘನೆಗೆ ಅರ್ಹವಾದ ಸಂಸ್ಥೆ ಎನಿಸಿಕೊಂಡಿದೆ. ಇಂತಹ ಸಾರ್ಥಕ ಕಾರ್ಯ ಸದಾ ಮುಂದುವರೆಯಲಿ ಎಂದು ಪತ್ರಕರ್ತ ಕೇಬಲ್ ನಾಗೇಶ್ ಹೇಳಿದರು.


ಸ್ವಾತಂತ್ರೋತ್ಸವ ಸಂಭ್ರಮ ಇಂತಹ ಕಾರ್ಯಗಳೊಂದಿಗೆ ಮುಂದುವರೆಯಬೇಕಿದೆ , ಸಂಸ್ಥೆಯ ಉತ್ತಮ ಕಾರ್ಯವನ್ನು ಪ್ರಶಂಶಿಸಿ ವಕೀಲ ಪ್ರಕಾಶ ಭಟ್ಟ, ಸೆಂಟ್ ಮಿಲಾಗ್ರಿಸ್ ಸಂಸ್ಥೆಯ ಯಲ್ಲಾಪುರ ಶಾಖೆಯ ಚೇರ್‌ಮನ್ ದಾಸಿಂತ್ ಫರ್ನಾಂಡಿಸ್ , ಬುದ್ಧಿಮಾಂದ್ಯ ಶಾಲೆಯ ಪ್ರಾಂಶುಪಾಲ ಚಂದ್ರು ಅಭಿಪ್ರಾಯಪಟ್ಟರು. ಯಲ್ಲಾಪುರ ಶಾಖೆಯ ವಸಂತ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಕೋರಿದರು.


ಸೆಂಟ್ ಮಿಲಾಗ್ರಿಸ್ ಸಂಸ್ಥೆಯ ಸಿಬ್ಬಂದಿಗಳಾದ ಪ್ರಿಯಾಂಕಾ ಪೂಜಾರಿ ಸ್ವಾಗತಿಸಿದರು. ಸ್ಪೂರ್ತಿ ಆಚಾರಿ ನಿರೂಪಿಸಿದರು. ವಿಜಯ್ ಕುಮಟೇಕರ್ ವಂದಿಸಿದರು. ಇನ್ನಿತರ ಸಿಬ್ಬಂದಿಗಳು, ಬುದ್ಧಿಮಾಂದ್ಯ ಆಶ್ರಮದ ಸಿಬ್ಬಂದಿಗಳು ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

“ಭಾವಗಳ ಬ್ರಹ್ಮಾಂಡ” ಕವನ ಸಂಕಲನ ಮೇ 1 ಕ್ಕೆ ಅನಾವರಣ..

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಇದೇ ಮೊದಲು AI ತಂತ್ರಜ್ಞಾನ ಬಳಸಿ ಒಂದು ಸುಂದರ ಕವನ ಸಂಕಲನ ರೂಪುಗೊಂಡಿದ್ದು “ಭಾವಗಳ …

Leave a Reply

Your email address will not be published. Required fields are marked *