Breaking News

ದಲಿತ ಸಂಘರ್ಷ ಸಮಿತಿ ಕೆರೆಹೊಸಳ್ಳಿ ಘಟಕ ನೂತನ ಪದಾಧಿಕಾರಿ ಮಂಡಳಿ ಅಸ್ತಿತ್ವಕ್ಕೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ : ತಾಲೂಕಿನ ಕಂಪ್ಲಿ ಪಂಚಾಯತ ವ್ಯಾಪ್ತಿಯ ಕೆರೆಹೊಸಳ್ಳಿ ಗ್ರಾಮದಲ್ಲಿ ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೂತನ ಪದಾಧಿಕಾರಿ ಮಂಡಳಿ ಏ.16ರಂದು ಅಸ್ತಿತ್ವಕ್ಕೆ ಬಂದಿತು.


ದಲಿತ ಪರ ಹೋರಾಟಕ್ಕೆ , ಸಮಾಜದಲ್ಲಿ ತುಳಿತಕ್ಕೊಳಗಾದವರ ಸಹಾಯಕ್ಕೆ ಧಾವಿಸಲು ಸಮಿತಿ ಕಟಿಬದ್ಧವಾಗಿದ್ದು ನೂತನ ಪದಾಧಿಕಾರಿ ಮಂಡಳಿಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಜಿಲ್ಲಾ ಸಂಘಟನೆಯ ಸಂಚಾಲಕ ಕಲ್ಲಪ್ಪ ಹೋಳಿ ಹೇಳಿದರು.


ಅಧ್ಯಕ್ಷರಾಗಿ ಸುರೇಶ ಅನಂತ ಸಿದ್ದಿ, ಉಪಾಧ್ಯಕ್ಷರಾಗಿ ಉಮೇಶ ಜಿ ಸಿದ್ದಿ, ಮಾದೇವ ಜಿ ಸಿದ್ದಿ, ಮಹಿಳಾ ವಿಭಾಗದಲ್ಲಿ ನಾಗರತ್ನ ಎಂ ಸಿದ್ದಿ, ಕಾರ್ಯದರ್ಶಿ ಚಂದ್ರಶೇಖರ ಜಿ ಸಿದ್ದಿ, ಖಜಾಂಚಿಯಾಗಿ ನಾಗೇಶ ಕೃಷ್ಣ ಕುಣಬಿ, ಸಂಚಾಲಕರಾಗಿ ರಾಮಚಂದ್ರ ಜಾನು ಕುಣಬಿ ಹಾಗೂ 29 ಮಂದಿ ಸದಸ್ಯರನ್ನೊಳಗೊಂಡ ನೂತನ ಮಂಡಳಿಯನ್ನು ಅಸ್ತಿತ್ವಕ್ಕೆ ತರಲಾಯಿತು.


ರಾಜ್ಯ ಸಂಘಟನೆಯ ಸಂಚಾಲಕ ಎಸ್ ಫಕೀರಪ್ಪ ನೇತೃತ್ವದಲ್ಲಿ ಪದಗ್ರಹಣ ಸಮಾರಂಭ ಕೆರೆಹೊಸಳ್ಳಿಯ ಶಾಲಾ ಆವರಣದಲ್ಲಿ ನಡೆದಿದ್ದು ಜಿಲ್ಲಾಧ್ಯಕ್ಷ ಗೋಪಾಲ ನಡುಕಿನಮನೆ, ತಾಲೂಕಾಧ್ಯಕ್ಷ ಶೇಖರ ಸಿದ್ದಿ, ಮುಂಡಗೋಡ ಅಧ್ಯಕ್ಷ ಜ್ಯೂಜೆ ಸಿದ್ದಿ ಹಾಗೂ ಪ್ರಮುಖರಾದ ಅಜಿತ್ ಕಾಂಬ್ಳೆ, ಮಹಾಂತೇಶ ಹರಿಜನ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *