Breaking News

ಹೆದ್ದಾರಿ ಬದಿಯಲ್ಲಿ ಸಾಲುಗಟ್ಟಿ ನಿಂತ ಲಾರಿ – ಅಪಘಾತಕ್ಕೆ ರಹದಾರಿ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಹಾದು ಹೋಗಿರುವ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಬಹುತೇಕ ಭಾಗಗಳಲ್ಲಿ ಹಗಲು ರಾತ್ರಿ ಎನ್ನದೆ ದೊಡ್ಡ ಗಾತ್ರದ ಕಂಟೈನರ್ ಲಾರಿಗಳು ಇನ್ನಿತರೆ ವಾಹನಗಳು ನಿಲ್ಲಿಸುವುದರಿಂದ ವಾಹನ ಸವಾರರಿಗೆ ಮತ್ತೊಂದು ಬದಿಯಲ್ಲಿ ಬರುವ ವಾಹನಗಳು ಕಾಣದೆ ಅಪಘಾತವಾಗುವ ಸಂಭವ ಹೆಚ್ಚಿದೆ.


ವಿಶೇಷವಾಗಿ ಹುಬ್ಬಳ್ಳಿ ಮಾರ್ಗದ ಟಿ.ಎಂ.ಎಸ್ ಪೆಟ್ರೋಲ್ ಪಂಪ್, ಜೋಡುಕೆರೆ ಸಮೀಪ ಸರ್ಕಾರಿ ಆಸ್ಪತ್ರೆ ಸಾಗುವ ತಿರುವು ಗಳಲ್ಲಿ ಸದಾ ವಾಹನಗಳು ನಿಂತಿದ್ದು ಎದುರು ಬರುವ ವಾಹನಗಳು ಕಾಣದೆ ಅದೆಷ್ಟೋ ಅಪಘಾತಗಳು ಸಂಭವಿಸಿವೆ ಆದರು ವಾಹನ ನಿಲ್ಲಿಸುವ ಪ್ರಕ್ರಿಯೆ ನಿಂತಿಲ್ಲ.


ರಾತ್ರಿ ವೇಳೆಯಲ್ಲಿ ಮಾತ್ರ ಅಪಘಾತ ಸಂಭವಿಸುವ ಸಾದ್ಯತೆ ಹೆಚ್ಚಿರುತ್ತದೆ ಅದರಲ್ಲು ಮಹಿಳೆಯರು ಅಥವ ಹಿರಿಯ ನಾಗರಿಕರು ದ್ವಿಚಕ್ರ ವಾಹನದಲ್ಲಿ ಸಾಗುವುದಕ್ಕೆ ಹರಸಾಹಸ ಪಡಬೇಕಿದೆ. ಈ ಕುರಿತು ಪೊಲೀಸ್ ಇಲಾಖೆ ಹೈವೆ ಪೆಟ್ರೋಲ್ ವಾಹನ ಗಂಭೀರವಾಗಿ ಗಮನಹರಿಸಿ ಪಟ್ಟಣ ವ್ಯಾಪ್ತಿಯ ಹೆದ್ದಾರಿ ಬದಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡದಂತೆ ಜಾಗ್ರತೆ ವಹಿಸಬೇಕಿದೆ ಇಲ್ಲವಾದಲ್ಲಿ ಈ ಸಮಸ್ಯೆಯಿಂದಲೆ ಅಪಘಾತ ಸಂಭವಿಸಿ ಪ್ರಾಣಹಾನಿಯಾದರೆ ಅದಕ್ಕೆ ನೀವೆ ಹೊಣೆಗಾರರಾಗಬೇಕಾಗಲಿದೆ ಎಂಬುದು ವಾಹನ ಸವಾರರ ಆಗ್ರಹವಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಿಸಿಲಿನ ಝಳಕ್ಕೆ ತಂಪೆರೆವ ಸ್ವರ್ಗ  ಯಲ್ಲಾಪುರದ “ಸಾತೊಡ್ಡಿ ಜಲಪಾತ” ಪ್ರವಾಸಿಗರ ಕೈ ಬೀಸಿ ಕರೆಯುತ್ತಿದೆ.

ಕೇಬಲ್ ನಾಗೇಶ್, ಯಲ್ಲಾಪುರ..🖋 ಪ್ರತಿಧ್ವನಿ ಯಲ್ಲಾಪುರ : ಒಂದೆಡೆ ಸಾಗರ ಮತ್ತೊಂದೆಡೆ ಜಲಪಾತಗಳ ಆಗರ  ಹಚ್ಚಹಸಿರಿನ ಮಡಿಲು ಉತ್ತರ ಕನ್ನಡ …

Leave a Reply

Your email address will not be published. Required fields are marked *