ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಯ ಕಾಮಗಾರಿ ಟೆಂಡರ್ ನಲ್ಲಿ ಎಸ್.ಸಿ/ಎಸ್.ಟಿ ವರ್ಗಕ್ಕೆ ಕಾಮಗಾರಿಯಲ್ಲಿ ಮೀಸಲಿಡದ ಕುರಿತು ಆಕ್ಷೇಪಿಸಿ ಬುಧವಾರ ಯಲ್ಲಾಪುರ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ಅಡಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಲ್ಲಾಪುರ ಉಪ ವಿಭಾಗದ ಹರ್ಷಾಬಾನು ಐ.ಎಫ್.ಎಸ್ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಸತ್ಯನ್.ಬಿ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಹಾಗು ಸದಸ್ಯರನ್ನೊಡಗೂಡಿ ಟೆಂಡರ್ ಪ್ರಕ್ರಿಯೆಯಲ್ಲಿನ …
Read More »ಕೊಳಗೇರಿಗೆ ಭಾವನಾತ್ಮಕ ಬೀಳ್ಕೊಡುಗೆ- ಚೀಲಗಳು ತುಂಬುವಷ್ಟು ಕೊಡುಗೆ ಎದೆ ತುಂಬುವಷ್ಟು ಪ್ರೀತಿ…
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ತಮ್ಮ ಶಿಕ್ಷಕ ವೃತ್ತಿ ಜೀವನದಲ್ಲಿ ತಪ್ಪೇ ಮಾಡಿಲ್ಲದ ಒರ್ವ ಪ್ರಬುದ್ದ ಶಿಕ್ಷಕರೆಂದರೆ ಅದು ಸಂತೋಷ್ ಕೊಳಗೇರಿಯವರು ಎನ್ನಲು ಹೆಮ್ಮೆ ಎನಿಸುತ್ತದೆ.ಸಮಾಜದ ಶಿಲ್ಪಿಯಾಗಿ ಸಹಸ್ರಾರು ಸಂಸ್ಕಾರವಂತ ವಿದ್ಯಾರ್ಥಿ ಶಿಲ್ಪಗಳನ್ಬು ಸಮಾಜಕ್ಕೆ ನೀಡಿದ್ದಾರೆ. ಅವರ ನಿವೃತ್ತಿ ಜೀವನ ಸುಖ ಸಂತೋಷದಿಂದ ಕೂಡಿರಲಿ ಎಂದು ಮಲವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಕುಂಟೆಕಳಿ ಹೇಳಿದರು. ಅವರು ತಾಲೂಕಿನ ಮಲವಳ್ಳಿ …
Read More »ನಿವೃತ್ತಿ ಹೊಂದಿದ ಅಜಾತಶತ್ರು, ಶಿಕ್ಷಣ ಪ್ರೇಮಿ ಮುಖ್ಯ ಶಿಕ್ಷಕ “ಸಂತೋಷ ಹೊನ್ನಪ್ಪ ಕೊಳಗೇರಿ” ಅವರಿಗೆ ಇಂದು ಬೀಳ್ಕೊಡುಗೆ.
ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಸುಧೀರ್ಘ 40 ವರ್ಷಗಳ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದುತ್ತಿರುವ ಸಂತೋಷ ಹೊನ್ನಪ್ಪ ಕೊಳಗೇರಿ ಹುಟ್ಟಿದ್ದು ಕುಮಟಾ ತಾಲೂಕಿನ ಹನೇಹಳ್ಳಿಯ ಬಡಕುಟುಂಬದಲ್ಲಿ. ಶ್ರೀಮಂತಿಕೆ ಇಲ್ಲದಿದ್ದರೂ ಜ್ಞಾನ ಸಂಪತ್ತಿನಲ್ಲಿ ಆಗರ್ಭ ಶ್ರೀಮಂತರು. ಅಜಾತಶತ್ರು, ಸರ್ವರನ್ನೂ ಅತ್ಯಾಪ್ತರಾಗಿ ಕಂಡು ಶಿಕ್ಷಣ ವಲಯವಲ್ಲದೇ ಸಾಮಾಜಿಕ , ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿ ಜನಮಾನಸದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. 1985ರಲ್ಲಿ ಶಿಕ್ಷಣ ಇಲಾಖೆಯಲ್ಲಿ …
Read More »ಯಲ್ಲಾಪುರ ತಾಲೂಕು ವಿಶ್ವ ಹಿಂದೂ ಪರಿಷತ್ ಗೆ ನೂತನ ಸಾರಥಿಯಾಗಿ ಗಜಾನನ ನಾಯ್ಕ್ ತಳ್ಳೀಕೆರೆ ಆಯ್ಕೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಬಹು ದೀರ್ಘ ಕಾಲದ ನಂತರ ಯಲ್ಲಾಪುರ ತಾಲೂಕು ವಿಶ್ವ ಹಿಂದೂ ಪರಿಷತ್ ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು ಪ್ರಖರ ಹಿಂದುತ್ವವಾದಿ ತಳ್ಳೀಕೆರೆ ಗಜಾನನ ನಾಯ್ಕ್ ಅಧ್ಯಕ್ಷರಾಗಿ ಮತ್ತು ಉತ್ಸಾಹಿ ಯುವಕ ಗ್ರಾಮದೇವಿ ಕನ್ಸಟ್ರಕ್ಷನ್ ಮಾಲಿಕ ವಿಶಾಲ್ ವಾಳಂಬಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.ವಿ.ಹಿಂ.ಪ ಸಂಚಾಲಕ ಗಣಪತಿ ಭಟ್ ಅಧ್ಯಕ್ಷತೆಯಲ್ಲಿ ರಾಜ್ಯ ಉಪಾಧ್ಯಕ್ಷ ಗಂಗಾಧರ ಭಟ್ ಹಾಗು …
Read More »ಶಿಕ್ಷಕಿ ಸುನಂದಗೆ ವೃತ್ತಿಯಿಂದ ನಿವೃತ್ತಿ ಭಾವನಾತ್ಮಕ ಬೀಳ್ಕೊಡುಗೆ – ಸಿ.ಆರ್.ಪಿ ಶಿವಾನಂದ ವರ್ಣೇಕರ್ ಅವರಿಗು ಸಂದ ಗೌರವ…
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಸರ್ಕಾರಿ ವೃತ್ತಿಗೆ ಸೇರಿದ ದಿನದಂದೇ ನಿವೃತ್ತಿಯ ದಿನಾಂಕ ನಿಗಧಿಯಾಗಿರುತ್ತದೆ. ಈ ಮಧ್ಯೆ ಯಾವುದೇ ಕ್ಷೇತ್ರದ ಸೇವಾ ಅವಧಿಯಲ್ಲಿ ಸಮಾಜದೊಂದಿಗೆ ಬದುಕಿದ ರೀತಿ, ವೃತ್ತಿಯೊಂದಿಗಿನ ಬದ್ಧತೆ , ಜನರೊಂದಿಗಿನ ಒಡನಾಟ ನಮ್ಮೊಂದಿಗೆ ಬರಲಿದೆ. ಈ ದಿಸೆಯಲ್ಲಿ ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ವಿಶೇಷವಾಗಿ ೪೦ವರ್ಷಗಳ ವೃತ್ತಿ ಪಯಣಿಸಿದ ಪದೋನ್ನತಿ ಮುಖ್ಯಾಧ್ಯಾಪಕಿ ಸುನಂದಾ ವೈ ಪಾಟಣಕರ ಅವರ …
Read More »ಮಕ್ಕಳಿಗೆ ಆನಂದ ತಂದ ಶಿಕ್ಷಕಿ ಸುನಂದಾ ಪಾಟಣ್ಕರ್ ವೃತ್ತಿಯಿಂದ ನಿವೃತ್ತಿ..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಶಿಕ್ಷಣ ನೀಡುವುದು ಅತ್ಯಂತ ಪವಿತ್ರ ಕಾರ್ಯ. ಮನುಷ್ಯನ ಬದುಕಿನ ಪಥ ನಿರ್ಧರಿಸುವುದು ತಾನು ಪಡೆದ ಸಂಸ್ಕರಾವಂತ ಶಿಕ್ಷಣದಿಂದ ಮಾತ್ರ ಸಾಧ್ಯ. ಇಂತಹ ಶಿಕ್ಷಣ ನೀಡುವ ಶಿಕ್ಷಕ ವೃತ್ತಿಯನ್ನು ಬದುಕಿನ ಧ್ಯೇಯವಾಗಿಸಿಕೊಂಡು ಗುತ್ತಿಗೆ ಆಧಾರದಲ್ಲಿ ಶಿಕ್ಷಕ ವೃತ್ತಿಯಲ್ಲಿ ಪ್ರಾರಂಭಿಸಿದ ಬದುಕು ವರ್ಷಗಳ ಸಾರ್ಥಕ ಸೇವೆಯೊಂದಿಗೆ ನಿವೃತ್ತಿ ಹೊಂದುತ್ತಿರುವ ಶಿಕ್ಷಕಿ ಸುನಂದಾ ಮಕ್ಕಳಲ್ಲಿ ಆನಂದ ತುಂಬುತ್ತಾ ಸದಾ …
Read More »ಮದರ್ ಥೆರೆಸಾ ಆಂಗ್ಲಮಾಧ್ಯಮ ಶಾಲೆಯಲ್ಲಿ ಯಶಸ್ವಿಯಾಗಿ ನಡೆದ “ಸ್ಕೂಲ್ ಎಕ್ಸ್ ಪೋ” ಯಶಸ್ವಿ ಪ್ರದರ್ಶನ..
ಒಫ ಯಲ್ಲಾಪುರದ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಮದರ್ ಥೆರೆಸಾ ಆಂಗ್ಲಮಾಧ್ಯಮ ಶಾಲೆಯಲ್ಲಿ ಮಕ್ಕಳ ಬುದ್ದಿಮತ್ತೆ ಮತ್ತು ಕೈಚಳಕದಲ್ಲಿ ವಿವಿಧ ವಿನ್ಯಾಸದ ವಸ್ತು ಪ್ರದರ್ಶನ “ಸ್ಕೂಲ್ ಎಕ್ಸ್ ಪೋ” ಏರ್ಪಡಿಸಲಾಗಿತ್ತು. ಶಾಲೆಯ ಮುಖ್ಯೋಪಾಧ್ಯಾಯ ಫಾ. ರಾಯ್ ಸ್ಟನ್ ಗೊನ್ಸಾಲ್ವಿಸ್ ನೇತೃತ್ವದಲ್ಲಿ ಕೆಡಿಇಎಸ್ ಸೆಕ್ರೆಟರಿ ಡಾ. ವಲೇರಿಯನ್ ಸೆಕ್ವೇರಿಯಾ ಮತ್ತು ಶಾಲಾ ಮೇಲ್ವಿಚಾರಕರಾದ ಫಾ.ಪೀಟರ್ ರ‍್ನೆರಿಯೋ ಉಪಸ್ಥಿತಿಯಲ್ಲಿ ವಸ್ತುಪ್ರದರ್ಶನ ಯಶಸ್ವಿಯಾಗಿ ನಡೆಯಿತು. …
Read More »ಟ್ರೀ ಗಾಡ್೯ ಕಂಠವೆ ಬೆಳೆದ ಗಿಡಗಳಿಗೆ ಕಂಟಕವಾಗಿದೆ – ಅರಣ್ಯ ಇಲಾಖೆ ಪರಿಶೀಲಿಸಬೇಕಿದೆ.
ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ಜೋಡುಕೆರೆ ದಡದಲ್ಲಿ ಅರಣ್ಯ ಇಲಾಖೆ ವತಿಯಿಂದ ಕೆಲ ವರ್ಷಗಳ ಹಿಂದೆ ವನಮಹೋತ್ಸವ ಸಂದರ್ಭದಲ್ಲಿ ನೆಟ್ಟ ಗಿಡಗಳು ಸ್ವಚ್ಚಂದವಾಗಿ ಬೆಳೆಯುತ್ತಿದ್ದು ಭವಿಷ್ಯದಲ್ಲಿ ಕೆರೆಯ ಅಂದ ಹೆಚ್ಚಿಸಲಿದೆ ಎನ್ನುವಷ್ಟರಲ್ಲಿ ಬೆಳೆದ ಗಿಡಗಳು ಅರ್ಧ ಭಾಗಕ್ಕೆ ತುಂಡಾಗಿ ಬೀಳುತ್ತಿದ್ದು ಬೇಸಿಗೆಯಲ್ಲಿ ನೀರುಣಿಸಿ ಮಕ್ಕಳಂತೆ ಗಿಡಗಳ ಪೋಷಣೆಯಲಿದ್ದ ಜೋಡುಕೆರೆ ಪ್ರೇಮಿಗಳಿಗೆ ನೋವುಂಟಾಗಿದೆ. ಕೆರೆಯ ದಡದಲ್ಲಿರುವ ಇಪ್ಪತ್ತಕ್ಕು ಹೆಚ್ಚು ಗಿಡಗಳಿಗೆ ಅರಣ್ಯ ಇಲಾಖೆಯವರು ವನಮಹೋತ್ಸವದ ಸಂದರ್ಭದಲ್ಲಿ ” ಟ್ರೀ ಗಾಡ್೯ …
Read More »42 ವರ್ಷಗಳ ಹಿಂದಿನ ಪ್ರಕರಣ ಬೇಧಿಸಿ ತಾರ್ಕಿಕ ಅಂತ್ಯ ಹಾಡಿದ ಯಲ್ಲಾಪುರ ಪೊಲೀಸರು
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : 1982ರಲ್ಲಿ ದಾಖಲಾಗಿದ್ದ ಕಳ್ಳತನದ ಪ್ರಕರಣವೊಂದು 42 ವರ್ಷಗಳ ನಂತರ ಆನಗೋಡು ಜನಸ್ನೇಹಿ ವಾಟ್ಸಪ್ ಗುಂಪಿನ ಸಹಾಯದಿಂದ ತಾರ್ಕಿಕ ಅಂತ್ಯ ಕಂಡಿದ್ದು ಪ್ರಕರಣ ಹಳೆಯದಾದರೂ ಕಾನೂನು ತನ್ನ ಕಾರ್ಯ ನಿರ್ವಹಿಸದೇ ಬಿಡುವುದಿಲ್ಲ ಎಂಬುದಕ್ಕೆ ಯಲ್ಲಾಪುರ ಪೊಲೀಸರ ಕಾರ್ಯಾಚರಣೆ ಸಾಕ್ಷಿಯಾಗಿದೆ. ವಿವರ : ತಾಲೂಕಿನ ತಟಗಾರ ನಿವಾಸಿ ನಾರಾಯಣ ವೆಂಕಟರಮಣ ಭಟ್ಟ ಎಂಬುವರು 01-04-1982 ರಲ್ಲಿ ತಮ್ಮ …
Read More »ತಿನ್ನುವ ಅನ್ನದ ಮಹತ್ವ – ಬೆಳೆವ ರೈತನ ಶ್ರಮ ಅರಿತ ಕಳಸೂರು ಶಾಲಾ ವಿದ್ಯಾರ್ಥಿಗಳು.
ಯಲ್ಲಾಪುರದ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕಳಸೂರು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಂಭ್ರಮ ಶನಿವಾರವನ್ನು ಕೃಷಿ ಕಾಯಕದಲ್ಲಿ ತೊಡಗಿ ರೈತರ ಶ್ರಮದ ಮಹತ್ವವನ್ನು ಅರಿತರು. ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷಿ ಕಾರ್ಯಕ್ರಮದಲ್ಲಿ ಒಂದಾದ ಸಂಭ್ರಮ ಶನಿವಾರದಲ್ಲಿ ವಿವಿಧ ಕಾರ್ಯ ಚಟುವಟಿಕೆಗಳನ್ನು (ಪಠ್ಯೇತರ) ವಿದ್ಯಾರ್ಥಿಗಳು ಅರಿತುಕೊಳ್ಳುವುದು, ತೊಡಗಿಕೊಳ್ಳುವುದು ಇದರ ಉದ್ದೇಶವಾಗಿದೆ. ಆ ಹಿನ್ನಲೆಯಲ್ಲಿ ಕಳಸೂರು ಶಾಲೆಯ 1 …
Read More »
Prathidvani Yellapura