

ಕೇಬಲ್ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ ಯಲ್ಲಾಪುರ : ದಿನಾಂಕ 19 ಗುರುವಾರ ಯಲ್ಲಾಪುರದಲ್ಲಿ ಯುಗಾದಿ ಉತ್ಸವ ಸಮಿತಿ ಅಡಿಯಲ್ಲಿ ಭವ್ಯವಾದ ಶೋಭಾಯಾತ್ರೆ ಜರುಗಲಿದ್ದು ಸಮಸ್ತ ಹಿಂದುಗಳು ಮಹಿಳೆಯರಾದಿಯಾಗಿ ಪಾಲ್ಗೊಂಡು ಸಂಭ್ರಮಿಸಬೇಕಿದೆ.

ಈ ಹಿನ್ನೆಲೆಯಲ್ಲಿ ಉತ್ಸವದ ಜಾಗೃತಿಗಾಗಿ ದಿನಾಂಕ 17 ರ ಮಂಗಳವಾರದಂದು ಬೃಹತ್ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದು ತಾಲೂಕಿನ ಸಮಸ್ತ ಹಿಂದು ಬಂಧುಗಳು ತಮ್ಮ ಬೈಕ್ ರ‍್ಯಾಲಿಯಲ್ಲಿ ತೊಡಗಿಸುವುದರೊಂದಿಗೆ ಯಶಸ್ವಿಯಾಗಿಸಬೇಕಿದೆ.

ಇತ್ತೀಚಿನ ದಿನಗಳಲ್ಲಿ ಹಿಂದು ಧಾರ್ಮಿಕ ಉತ್ಸವಗಳು ಕಳೆಗುಂದುತ್ತಿದ್ದು ಇದಕ್ಕೆ ಹಲವು ಕಾರಣಗಳಿದ್ದರು ಪ್ರಮುಖ ಕಾರಣ ಹಿಂದು ಬಂಧುಗಳ ಭಾಗವಹಿಸುವಿಕೆ ಕೊರತೆಯಾಗಿರುವುದಾಗಿದೆ.
19 ನೆ ತಾರೀಖು ನಡೆಯಲಿರುವ ಯುಗಾದಿ ಶೋಭಾಯಾತ್ರೆಯಲ್ಲಿ ಹಿಂದು ಬಾಂಧವರು ಕಟಿಬದ್ದರಾಗಿ ಪಾಲ್ಗೊಂಡರೆ ಯಲ್ಲಾಪುರದ ರಸ್ತೆಯಲ್ಲಿ ನಿಲ್ಲಲು ಸ್ಥಳವಿಲ್ಲದಂತಾಗಲಿದೆ ಆದರೆ ಯಾರಲ್ಲು ಭಾಗವಹಿಸಲೇಬೇಕೆಂಬ ಬದ್ದತೆಯಾಗಲಿ ನಮ್ಮ ಧಾರ್ಮಿಕ ಉತ್ಸವ ಎಂಬ ಪ್ರೀತಿಯಾಗಲಿ ಇಲ್ಲದಂತಾಗಿರುವುದು ದುರಂತವಾಗಿದೆ.

ಉತ್ಸವ,ಮೆರವಣಿಗೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯುವಾಗ ದೂರದಲ್ಲಿ ನಿಂತು ಜನರೇ ಇರಲಿಲ್ಲ, ಇನ್ನೂ ಹೆಚ್ಚಾಗಿ ಸೇರಬೇಕಿತ್ತು, ಇತ್ತೀಚೆಗೆ ಉತ್ಸಾಹ ಕಡಿಮೆಯಾಗುತ್ತಿದೆ, ಮಹಿಳೆಯರು ಧಾರವಾಹಿ ನೋಡುತ್ತ ಟಿವಿ ಮುಂದೆ ಕೂತಿರುತ್ತಾರೆ, ಮಕ್ಕಳು ಯುವಕರು ಮೊಬೈಲ್ ನಲ್ಲಿ ಬಿಝಿಯಾಗಿದ್ದಾರೆ ಎಂದು ಹದ ಹೇಳುತ್ತ ಕೊಂಕು ಮಾತನಾಡುತ್ತ ಕಷ್ಟಪಟ್ಟು ಸಂಘಟಿಸಿ ಧರ್ಮಸೇವೆಗೆ ಏನನ್ನು ಬಯಸದೆ ಶ್ರಮದ ಸೇವೆ ಸಲ್ಲಿಸುತ್ತಿರುವವರ ಪ್ರಯತ್ನಕ್ಕೆ ತಣ್ಣೀರೆರಚುವ ಬದಲು ಬನ್ನಿ ಮೈ ಚಳಿಬಿಟ್ಟು, ಆಲಸ್ಯ ಭಾವ ಬಿಟ್ಟು, ಕೊಂಕು ನುಡಿಗಳ ಬಿಟ್ಟು, ನನ್ನ ಕಾರ್ಯವಲ್ಲ ಮತ್ತಾರದ್ದೊ ಎಂಬ ನುಣುಚಿಕೊಳ್ಳುವ ಬುದ್ದಿ ಬಿಟ್ಟು ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಮೇಲೆ ಹೇಳಿದ ಎಲ್ಲಾ ವಿಚಾರಕ್ಕು ಉತ್ತರವಾಗಿ ಧರ್ಮ ಕಾರ್ಯಕ್ಕೆ ಹೆಗಲಾಗಿ ಭವಿಷ್ಯದ ಪೀಳಿಗೆಗೆ ಮಾದರಿಯಾಗಿ ಯಲ್ಲಾಪುರದ ಹಿಂದು ಸಮಾಜೋತ್ಸವ ಪರ ಊರುಗಳಿಗೆ ಪ್ರೇರಣೆಯಾಗುವಂತೆ ಸಂಭ್ರಮದಲ್ಲಿ ಪಾಲ್ಗೊಳ್ಳೋಣ ಏನಂತೀರ…..ಹಿಂದು ಬಂಧುಗಳೆ.
ನಾವೆಲ್ಲರೂ ಸಮುದಾಯಗಳಾಗಿ ಒಡೆದು ಕುಳಿತಿರುವುದು ಧರ್ಮವೆಂಬ ಗಟ್ಟಿತನಕ್ಕೆ ದಕ್ಕೆಯಾಗಿದೆ. ತಮ್ಮ ತಮ್ಮ ಸಮಾಜದ ಸಮುದಾಯದ ಕಾರ್ಯಕ್ರಮಗಳಲ್ಲಿರುವಂತಹ ಶ್ರದ್ದೆ,ಬದ್ದತೆ ,ಪಾಲ್ಗೊಳ್ಳುವಿಕೆ ಹಿಂದು ಸಮಾಜೋತ್ಸವಗಳಲ್ಲಿ ಕಾಣಿಸುವುದಿಲ್ಲ ಇದು ಅತ್ಯಂತ ಅಪಾಯಕಾರಿ ನಡೆಯಾಗಿದೆ. ಇದನ್ನು ಬದಲಿಸಲೇಬೇಕಿದೆ ನಮಗಲ್ಲದಿದ್ದರು ಭವಿಷ್ಯದ ಪೀಳಿಗೆಯ ದೃಷ್ಟಿಯಿಂದ ಹಿಂದು ಸಮಾಜೋತ್ಸವಗಳಲ್ಲಿ ಕಟಿಬದ್ದರಾಗಿ ಪಾಲ್ಗೊಳ್ಳಲೇಬೇಕಿದೆ. ಯುಗಾದಿ ಉತ್ಸವ ಸಮಿತಿ

” ದೃಷ್ಟಿ ಬದಲಾದರೆ ದೃಶ್ಯ ಬದಲಾದೀತು “
ಯಾರು ಏನೆ ಅಂದುಕೊಂಡರು ನನಗೆ ಬೇಸರವಿಲ್ಲ ನನ್ನ ಧರ್ಮದ ಸಂಕಷ್ಟ ನಾ ಹೇಳಲೇಬೇಕಿದೆ ಹೇಳಿದ್ದೇನೆ..ಉತ್ತರ ನಮ್ಮಲ್ಲೆ ಇದೆ ಹುಡುಕುವ ಅವಶ್ಯಕತೆ ಇಲ್ಲ ತೊಡಗಿಕೊಳ್ಳುವ ಅನಿವಾರ್ಯತೆ ಇದೆ ಬನ್ನಿ ಯುಗಾದಿ ಉತ್ಸವದ ಜಾಗೃತಿ ಬೈಕ್ ರ‍್ಯಾಲಿ ಮತ್ತು ಶೋಭಾಯಾತ್ರೆಯಲ್ಲಿ ಯಲ್ಲಾಪುರ ತಾಲೂಕಿನ ಸಮಸ್ತ ಹಿಂದುಗಳು ಪಾಲ್ಗೊಳ್ಳೋಣ ಯಶಸ್ವಿಗೊಳಿಸೋಣ ಇದು ” ನಮ್ಮೆಲ್ಲರ ಕರ್ತವ್ಯ ” ಎಂದುಕೊಳ್ಳೋಣ
ಸಮಸ್ತರಿಗು ಮತ್ತೊಮ್ಮೆ ಬರಲಿರುವ ಯುಗಾದಿ ನೂತನ ಸಂವತ್ಸರದ ಶುಭಾಶಯಗಳು.ಕೇಬಲ್ ನಾಗೇಶ್, ವರದಿಗಾರ


Prathidvani Yellapura