Breaking News

ಕಿರವತ್ತಿ ಡಿಪೋದಲ್ಲಿ ಆಗಸ್ಟ್ 11,12,13,14 ರಂದು ಟಿಂಬರ್ ಹರಾಜು.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ : ಯಲ್ಲಾಪುರ ವಿಭಾಗದ ಕಿರವತ್ತಿ ಡಿಪೋದಲ್ಲಿ 2025ನೇ ಅಗಸ್ಟ್ 11, 12,13 ಮತ್ತು 14, ರಂದು ಮರದ ದಿಮ್ಮೆಗಳು, ಸಾಗ ಎಳೆ, ಬಿಲ್ಲೇಟ್ಸ ಹಾಗೂ ಜಲಾವುಗಳ ಇ-ಹರಾಜು ಕಮ್ ಟೆಂಡರ್ ಮೂಲಕ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುವುದು.

ಉತ್ತಮ ಗುಣಮಟ್ಟದ ಸಾಗ, ಸಿಸಂ, ಹೊನ್ನೆ, ಕಿಂದಳ ಕಲಂ, ಹೆದ್ದಿ, ನಂದಿ, ಜಂಗ್ಲಿ ಸಾಫ್ಟ, ಜಂಗ್ಲಿ ಹಾರ್ಡ ಅಕೇಶಿಯಾ ಮತ್ತಿ ಜಂಬಾ ಧಾಮಣ ನೇರಲ, ಕರಿಮುತ್ತಲ ದಿಮ್ಮೆಗಳನ್ನು ಮತ್ತು ಎಳೆ, ಬಿಲ್ಲೇಟ್ಸ, ಜಲಾವುಗಳನ್ನು ಇ-ಹರಾಜು ಮತ್ತು ಟೆಂಡರ್ ಪ್ರಕ್ರೀಯೆಯ ಮೂಲಕ ಖರೀದಿಸಬಹುದಾಗಿದೆ.


ಇ-ಹರಾಜಿನಲ್ಲಿ ಭಾಗವಹಿಸುವ ಬಿಡ್‌ದಾರರು ಬಿಡ್‌ಗಳನ್ನು ಸಲ್ಲಿಸುವ ಮೊದಲು ಲಾಟುಗಳ ಗುಣಮಟ್ಟದ ಬಗ್ಗೆ ಸ್ಥಾನಿಕವಾಗಿ ಪರಿಶೀಲಿಸಬಹುದಾಗಿದೆ.

ಖರೀದಿದಾರರು ಎಂಎಸ್‌ಟಿಸಿ ಹರಾಜು ಪೋರ್ಟಲ್ https://www.mstcecommerce.com/auctionhome/kafd/index.jsp ಮೂಲಕ ಭಾಗವಹಿಸಬಹುದಾಗಿದೆ. ಹರಾಜಿಗೆ ಸಂಬಂಧಿಸಿದ ಮಾಹಿತಿಯನ್ನು ಪೋರ್ಟಲ್ ಮೂಲಕ ಪಡೆಯಬಹುದು.

ಹೆಚ್ಚಿನ ವಿವರಗಳಿಗಾಗಿ ಕಿರವತ್ತಿ ಡಿಪೋ ಅಧಿಕಾರಿಗಳ ಮೊಬೈಲ್ ಸಂಖ್ಯೆ:9448723044, 9741887022 ಮತ್ತು ಕಛೇರಿ ದೂರವಾಣಿ ಸಂಖ್ಯೆ:08419-238534 ರ ಮೂಲಕ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *