Breaking News

ಶಾಸಕ ಹೆಬ್ಬಾರ್ ಉದ್ಘಾಟಿಸಿದ ಬ್ರಾಂಡಡ್ ಮೊಬೈಲ್, ಆಕ್ಸಸರೀಸ್ ವಾಚಸ್ ಸನ್ ಗ್ಲಾಸ್ ಮಾರಾಟದ ಮಿರಾಶಿ ಒಡೆತನದ “ಎ.ವಿ.ಎಂ ಗ್ಯಾಲಕ್ಸಿ ಹಬ್ “

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ : ಪಟ್ಟಣದ ಶಾಸಕರ ಕಚೇರಿ ಸಮೀಪದ ಬದ್ದಿ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಬ್ರಾಂಡಡ್ ಮೊಬೈಲ್ಸ್,ಆಕ್ಸಸರೀಸ್,ವಾಚಸ್,ಸನ್ ಗ್ಲಾಸಸ್ ಮಾರಾಟದ ಬೃಹತ್‌ ಮಳಿಗೆ ಸೋಮವಾರ ವಿದ್ಯಯಕ್ತವಾಗಿ ಪ್ರಾರಂಭವಾಯಿತು.

  “ಎವಿಎಂ ಗ್ಯಾಲಕ್ಸಿ ಹಬ್” ಪ್ರಾರಂಭಗೊಂಡಿದ್ದು ಯಲ್ಲಾಪುರ-ಮುಂಡಗೋಡು ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಮತ್ತು ಪತ್ನಿ ವನಜಾಕ್ಷಿ ಹೆಬ್ಬಾರ್  ಜೊತೆಯಾಗಿ ಉದ್ಘಾಟಿಸಿದರು.


    ಜಿಲ್ಲಾ ಪಂಚಾಯತ ಮಜಿ ಸದಸ್ಯ ಕಿರವತ್ತಿ ಮದನೂರು ಭಾಗದ ಪ್ರಭಾವಿ ಮುಖಂಡ ವಿಜಯ್ ಮಿರಾಶಿ ಪುತ್ರ ಅನಿಕೇತ್ ಮಿರಾಶಿ ಒಡೆತನದಲ್ಲಿ ಪ್ರಾರಂಭಿಸಲಾದ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಪ್ರತಿಷ್ಠಿತ ಕಂಪನಿಗಳ ಮೊಬೈಲ್ ಫೋನ್ ಗಳು ಮತ್ತು ಅಂದ ಚಂದ ಗುಣಮಟ್ಟ ಕ್ಕೆ ಹೆಸರಾದ ಸನ್ ಗ್ಲಾಸಸ್ ಮತ್ತು ವಾಚಸ್ ಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ.


    ಮಳಿಗೆ ಉದ್ಘಾಟಿಸಿದ ಶಾಸಕ ಶಿವರಾಮ ಹೆಬ್ಬಾರ್ ವಿಜಯ್ ಮಿರಾಶಿ ಕುಟುಂಬಕ್ಕೆ ವಿಶೇಷವಾಗಿ ಅನಿಕೇತ್ ಮಿರಾಶಿ ವ್ಯಾಪರೋದ್ಯಮದಲ್ಲಿ ತೊಡಗಿಕೊಂಡದ್ದಕ್ಕಾಗಿ ಶುಭ ಕೋರಿದರು.

     ಈ ಸಂದರ್ಭದಲ್ಲಿ ಮಿರಾಶಿ ಕುಟುಂಬಸ್ಥರು, ಅಭಿಮಾನಿಗಳು, ಹೆಬ್ಬಾರ್ ಅಭಿಮಾನಿಗಳು ಸ್ನೇಹಿತರು ಹಿತೈಷಿಗಳು ಊರಿನ ಗಣ್ಯರು ಇನ್ನಿತರರು ಆಗಮಿಸಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಿಸಿಲಿನ ಝಳಕ್ಕೆ ತಂಪೆರೆವ ಸ್ವರ್ಗ  ಯಲ್ಲಾಪುರದ “ಸಾತೊಡ್ಡಿ ಜಲಪಾತ” ಪ್ರವಾಸಿಗರ ಕೈ ಬೀಸಿ ಕರೆಯುತ್ತಿದೆ.

ಕೇಬಲ್ ನಾಗೇಶ್, ಯಲ್ಲಾಪುರ..🖋 ಪ್ರತಿಧ್ವನಿ ಯಲ್ಲಾಪುರ : ಒಂದೆಡೆ ಸಾಗರ ಮತ್ತೊಂದೆಡೆ ಜಲಪಾತಗಳ ಆಗರ  ಹಚ್ಚಹಸಿರಿನ ಮಡಿಲು ಉತ್ತರ ಕನ್ನಡ …

Leave a Reply

Your email address will not be published. Required fields are marked *