Breaking News

TV9 ಲೈಫ್ ಸ್ಟೈಲ್ ಆಟೋ ಮೊಬೈಲ್ & ಫರ್ನಿಚರ್ ಎಕ್ಸ್ಪೋಗೆ ಚಾಲನೆ ನೀಡಿದ ನಟಿ‌ ಸಂಜನಾ ಹಾಗೂ ನಟ ಅನಿರುದ್ದ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

Tv9 ಕನ್ನಡ ಆಯೋಜಿಸಿರುವ ಲೈಫ್ ಸ್ಟೈಲ್ ಆಟೋ ಮೊಬೈಲ್ & ಫರ್ನಿಚರ್ ಎಕ್ಸ್ಪೋಗೆ ಚಾಲನೆ‌ ಸಿಕ್ಕಿದೆ. ಬೆಂಗಳೂರಿನಲ್ಲಿ 2023ರಲ್ಲಿ ಭರ್ಜರಿಯಾಗಿ ಸಕ್ಸಸ್ ಕಂಡು ಒಳ್ಳೆಯ ಪ್ರತಿಕ್ರಿಯೆ ಪಡೆದಿದ್ದ ಲೈಫ್ ಸ್ಟೈಲ್ ಆಟೋ ಮೊಬೈಲ್ ಫರ್ನಿಚರ್ ಎಕ್ಸ್ಪೋ ಈಗ ಮತ್ತೊಮ್ಮೆ ನಡೆಯುತ್ತಿದ್ದು, ಸಲಗ ಸುಂದರಿ ನಟಿ ಸಂಜನಾ ಆನಂದ್ ಮತ್ತು ನಟ ಅನಿರುದ್ಧ್ ಉದ್ಘಾಟನೆ ಮಾಡುವ ಮೂಲಕ ಎಕ್ಸ್ಪೋಗೆ ಚಾಲನೆ ನೀಡಿದ್ರು….

ಜನಸಾಮಾನ್ಯರಿಗೆ ಅನುಕೂಲ ವಾಗುವಂತಹ ಮತ್ತು ಭವಿಷ್ಯದ ದೃಷ್ಟಿಯಿಂದ ಉಪಯೋಗವಾಗುವಂತಹ ನಿರಂತರವಾದ ಕಾರ್ಯಕ್ರಮಗಳನ್ನು ಮಾಡುತ್ತಲೇ ತನ್ನ ಸಾಮಾಜಿಕ ಕಳಕಳಿಯ ಕೆಲಸವನ್ನು ಮಾಡುತ್ತಿರುವ ಟಿವಿ9 ಎಕ್ಸ್ಪೋಗೆ, ರಾಯಲ್ ಸಿನಿಮಾ ಸೌಂಡ್ ಮಾಡುತ್ತಿರುವ ಹೊತ್ತಲ್ಲೆ ನಟಿ ಸಂಜನಾ ಹಾಗೂ ನಟ ವಿರಾಟ್ ಒಟ್ಟಿಗೆ ಬಂದು ವಿಸಿಟ್ ಕೊಟ್ಟಿದ್ದು ವಿಶೇಷ… ಇದರ ಜೊತೆ ಜೊತೆಗೆ ನ್ಯೂ ಮಾಡೆಲ್ ಕಾರ್ ಗಳನ್ನ unveil ಮಾಡಿದ್ರು‌‌

ಗ್ರಾಹಕರಿಗೆ ಬೇಕಾರಗಿರುವ ಅಷ್ಟು ವಸ್ತುಗಳು, ಕಾರುಗಳು ಒಂದೇ ಸೂರಿನಡಿ ಲಭ್ಯವಾಗ್ತಿದೆ.. ಅಷ್ಟೇ ಅಲ್ಲ ತ್ರಿಪುರ ವಾಸಿನಿಯಲ್ಲಿ ಪಾರ್ಕಿಂಗ್ಗೆ ಕೂಡ ವ್ಯವಸ್ಥೆ ಮಾಡಲಾಗಿದೆ. ಒಂದು ದಿನ ಪೂರೈಸಿರುವ ಎಕ್ಸ್ಪೋ, ಇನ್ನೂ 5,6 ರಂದು ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇರುತ್ತದೆ… ಮತ್ಯಾಕೆ ತಡ ದಸರಾ ಸಂಭ್ರಮಕ್ಕೆ‌ ಮನೆಗೆ ಹೊಸ ವಸ್ತುಗಳ ಖರೀದಿ ಮಾಡೋ ಪ್ಲ್ಯಾನ್ ಇದ್ರೆ.. Tv9 ಕನ್ನಡ ಆಯೋಜಿಸಿರುವ ಲೈಫ್ ಸ್ಟೈಲ್ ಆಟೋ ಮೊಬೈಲ್ & ಫರ್ನಿಚರ್ ಎಕ್ಸ್ಪೋಗೆ ಒಮ್ಮೆ ಭೇಟಿ ನೀಡಿ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *