Breaking News

ತರಕಾರಿ ತುಂಬಾ ದುಬಾರಿ – ಸಂಕಷ್ಟದಲ್ಲಿ ಹೊಟೆಲ್ ಉದ್ಯಮ


ಪ್ರತಿಧ್ವನಿ,ಯಲ್ಲಾಪುರ – ಪಟ್ಟಣದಲ್ಲಿ ನಡೆಯುವ ವಾರದ ಸಂತೆಯಲ್ಲಿ ಮಾರ್ಕೆಟ್ ರಾಣಿಯಾಗಿ ಟೊಮ್ಯಾಟೊ ಮೆರೆಯುತ್ತಿದ್ದರೆ ಇತರೆ ತರಕಾರಿಗಳು ನಾವು ಕಡಿಮೆ ಇಲ್ಲ ಎಂಬಂತೆ ಪೈಪೋಟಿಗೆ ಬಿದ್ದಂತಿದೆ ನಿದಾನವಾಗಿ ಇತರೆ ತರಕಾರಿಗಳು ದುಬಾರಿಯಾಗಿವೆ. ಇದರಿಂದ ಜನ ಸಾಮಾನ್ಯರು ಕಂಗಾಲಾಗಿದ್ದು ಹೊಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.


ಎಣ್ಣೆಬೆಲೆ ಹೆಚ್ಚಾಯ್ತು. ತರಕಾರಿ ಬೆಲೆ ಹೆಚ್ಚಾಯ್ತು. ಗ್ಯಾಸ್ ಬೆಲೆ ಹೆಚ್ಚಾಯ್ತು ಎಂದು ಹೊಟೆಲ್ ತಿಂಡಿತಿನಿಸುಗಳ ಬೆಲೆ ಏಕಾಏಕಿ ಹೆಚ್ಚಿಸಲು ಬರುವುದಿಲ್ಲ. ಹಾಗೆಂದು ನಿತ್ಯ ಲುಕ್ಸಾನ ಅನುಭವಿಸಲು ಸಾದ್ಯವಿಲ್ಲ. ಬೆಲೆ ಕಡಿಮೆಯಾಗುವವರೆಗೆ ಬಾಗಿಲು ಮುಚ್ಚಲು ಬರುವುದಿಲ್ಲ ವ್ಯವಹಾರ ಸಾಗುತ್ತಿರಲೇಬೇಕು ಇಲ್ಲವಾದಲ್ಲಿ ಆರ್ಥಿಕ ವಹಿವಾಟು ಸಂಕಷ್ಟಕ್ಕೆ ಸಿಲುಕುತ್ತದೆ. ಹೊಟೆಲ್ ಉದ್ಯಮದ ಕತೆ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ.


ಟೊಮ್ಯಾಟೊ ಸಾರ್ವಕಾಲಿಕ ದಾಖಲೆ ಬೆರಯುತ್ತ ಮುನ್ನುಗುತ್ತಿದ್ದು ಸದ್ಯ ಯಲ್ಲಾಪುರ ಮಾರುಕಟ್ಟೆಯಲ್ಲಿ ಕೆ.ಜಿ ಟೊಮ್ಯಾಟೊ 120-150 ಇದೆ ಉಳಿದ ತರಕಾರಿಗಳು ಸಹ 80-100 ದುಬಾರಿ ಯಾಗಿದ್ದು ಕೊಳ್ಳುವ ಗ್ರಾಹಕ ತಲೆಮೇಲೆ ಕೈ ಹೊತ್ತು ಮುಂದೇನು ಎಂಬಂತಾಗಿದೆ.


ಬೆಲೆ ಈ ರೀತಿ ಗಗನಕ್ಕೇರುತ್ತಿದ್ದರೆ ಸಾಮಾನ್ಯ ಜನರು ಜೀವನ ಸಗಿಸುವುದೇ ದುಸ್ತರವಾಗಲಿದೆ ಸರ್ಕಾರದ ಉಚಿತ ಯೋಜನೆಗಳ ಜೊತೆಯಲ್ಲಿ ಹೊಸ ಹೊಸ ಸ್ವರೂಪದ ಉಚಿತ ಯೋಜನೆಗಳು ಮತ್ತಷ್ಟು ಜೀವನ ನಿರ್ವಹಣೆಗೆ ಜಾರಿಯಾಗಬೇಕೇನೊ ಎನಿಸುತ್ತಿದೆ ಎನ್ನುತ್ತಿದ್ದಾರೆ ಸಾರ್ವಜನಿಕರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

“ಭಾವಗಳ ಬ್ರಹ್ಮಾಂಡ” ಕವನ ಸಂಕಲನ ಮೇ 1 ಕ್ಕೆ ಅನಾವರಣ..

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಇದೇ ಮೊದಲು AI ತಂತ್ರಜ್ಞಾನ ಬಳಸಿ ಒಂದು ಸುಂದರ ಕವನ ಸಂಕಲನ ರೂಪುಗೊಂಡಿದ್ದು “ಭಾವಗಳ …

Leave a Reply

Your email address will not be published. Required fields are marked *