Breaking News

ಗೋಡೆ ಉದುರುತ್ತಿದೆ ಪಾಠ ನಡೆಯುತ್ತಿದೆ ಮಾಡೆಲ್ ಶಾಲೆ ಮಕ್ಕಳ ಸ್ಥಿತಿ ದೇವರಿಗೆ ಪ್ರೀತಿ.

ಯಲ್ಲಾಪುರ ಗ್ರಾಮದೇವಿ‌ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಅತ್ಯಂತ ಹಳೆಯ ಶಾಲೆಗಳಲ್ಲಿ ಒಂದಾದ ಪಟ್ಟಣದಲ್ಲಿರುವ ಮಾದರಿ ಶಾಲೆ ಈಗಾಗಲೆ 100 ವರ್ಷ ಕ್ಕು ಅಧಿಕ ಕಾಲ ಗತಿಸಿದ್ದು ಕಟ್ಟಡದ ಗೋಡೆ ಶಿಥಿಲಾವಸ್ಥೆಯಲ್ಲಿದೆ ಮಂಗಳವಾರ ರಾತ್ರಿ ಸುರಿದ ಬಾರಿ ಮಳೆಗೆ ಗೋಡೆಯ ಮೇಲ್ಬಾಗದ ಮಣ್ಣು ಉದುರುತ್ತಿದ್ದು ಬೆಳಗ್ಗೆ ಮಕ್ಕಳು ಶಾಲೆಯೋಳಗೆ ಇರುವಾಗಲು ಗೋಡೆಯ ಮೇಲ್ಪದರ ಉದುರುತ್ತಿದೆ.


ಇಂತಹ ಸಂಕಷ್ಟದಲ್ಲು ಮಕ್ಕಳಿಗೆ ಪಾಠಪ್ರವಚನ ನಡೆಯುತ್ತಿದೆ ಸದ್ಯ ಗೋಡೆ ಉದುರುತ್ತಿರುವ ರೂಮ್ ಹೊರತು ಪಡಿಸಿ ಬೇರೆಡೆಯಲ್ಲಿ ಮಕ್ಕಳ ಪಾಠ ಸಾಗುತ್ತಿದೆ ಆದರು ಆ ಸ್ಥಳಗಳು ಸಹ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಅಷ್ಟೊಂದು ಸುರಕ್ಷಿತವಲ್ಲ.


ಶಾಲೆಯ ಸ್ಥಿಗತಿಯ ಬಗ್ಗೆ ಶಾಸಕ ಶಿವರಾಮ ಹೆಬ್ಬಾರ್ ಗಮನಕ್ಕೆ ತಂದಾಗಲೆಲ್ಲಾ ಸಾಧ್ಯವಾದಷ್ಟು ಸರ್ಕಾರದ ಅನುದಾನದಲ್ಲಿ ಮತ್ತು ಹೆಚ್ಚಿನ ಪ್ರಯತ್ನದಲ್ಲಿ ಖಾಸಗಿ ಉದ್ದಿಮೆದಾರರಲ್ಲಿ ಪ್ರಯತ್ನಿಸಿ ಸಿ.ಎಸ್.ಆರ್ ಫಂಡ್ ಮೂಲಕ ಹೆಚ್ಚಿನ ಕೊಠಡಿಗಳನ್ನು, ಸಲಕರಣೆಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.

ಸದ್ಯ ಬಾಕಿ ಉಳಿದಿರುವ ಶಿಥಿಲಾವಸ್ಥೆಯ ಕಟ್ಟಡಗಳ ಬಗ್ಗೆ ಸರ್ಕಾರ ಗಂಭೀರವಾಗಿ ಗಮನ ಹರಿಸಬೇಕಿದೆ.

ಈ ಸುದ್ದಿಯ ವಿಡಿಯೋ ನೋಡಬೇಕಾ ಹಾಗಾದರೆ ಇಲ್ಲಿ ಕ್ಲಿಕ್ ಮಾಡಿ

ಪಟ್ಟಣದಲ್ಲಿರುವ ಮಾದರಿಶಾಲೆ ನೂರಾರು ವರ್ಷಗಳ ಇತಿಹಾಸವಿದೆ. ಇಲ್ಲಿ ಕಲಿತವರಲ್ಲಿ ಅನೇಕರು ಉನ್ನತ ಹುದ್ದೆ ಅಲಂಕರಿಸಿ ನಿವೃತ್ತಿಹೊಂದಿದ್ದಾರೆ ಮತ್ತೆ ಕೆಲವರು ಈಗಲು ವೃತ್ತಿಯಲ್ಲಿದ್ದಾರೆ. ಮತ್ತಷ್ಟು ಮಂದಿ ಸಮಾಜದಲ್ಲಿ ಗಣ್ಯರು ಉದ್ಯಮಿಗಳು ವ್ಯಾಪಾರಸ್ಥರಾಗಿ ತೋಟಗಳ ಮಾಲಿಕರಾಗಿ ಹಲವು ಸ್ಥರಗಳಲ್ಲಿದ್ದಾರೆ ಅವರೆಲ್ಲರ ಗಮನಕ್ಕೆ ಪ್ರತಿಧ್ವನಿ ಕಳಕಳಿ ನಿಮಗೆ ವಿದ್ಯಾದಾನ ನೀಡಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನಾಗಿಸಿದ ನಿಮ್ಮದೆ ವಿದ್ಯ ದೇಗುಲ ಶಿಥಿಲಾವಸ್ಥೆ ತಕುಪಿದೆ‌ ಸರ್ಕಾರದ ಅನುದಾನಕ್ಕಾಗಿ ಕಾಯುತ್ತ ಕುಳಿತರೆ ಆಗದು ಕನಿಷ್ಠ ನಿಮ್ಮೆಲ್ಲರ ಇಚ್ಚಾ ಶಕ್ತಿಯಿಂದ ನೆರವಾಗಿ ಉತ್ತಮ ಗುಣಮಟ್ಟದ ನಾಲ್ಕೈದು ಕೊಠಡಿಗಳನ್ನು, ಮೂಲಭೂತ ಸೌಕರ್ಯಗಳನ್ನು ಅನುಷ್ಟಾನಗೊಳಿಸಿದರೆ ವಿದ್ಯೆ ನೀಡಿದ ದೇಗುಲದ ಋಣ ತೀರಿಸಿದ ಸಂತೃಪ್ತ ಭಾವ ನಿಮ್ಮದಾಗಲಿದೆ.

. ಹಣ ಅಂತಸ್ತು ಸೌಕರ್ಯಗಳಿರುವ ಕುಟುಂಬದ ಮಕ್ಕಳಿಗೆ ಹಣಕಟ್ಟಿ ಓದುವ ಶಕ್ತಿ ಇರುವವರಿಗೆ ಸಾಕಷ್ಟು ವ್ಯವಸ್ಥೆ ಇರುವ ಶಾಲೆಗಳಿವೆ ಆದರೆ ಬಡ ಮದ್ಯಮ ವರ್ಗದ ಮಕ್ಕಳ ವಿದ್ಯಾರ್ಜನೆಗಿರುವ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಿ ಅಂತಹ ಮಕ್ಕಳ ಭವಿಷ್ಯ ಉತ್ತಮವಾಗಿಸಲು ನಾವಿದ್ದೇವೆ ಬ ಸಂದೇಶ ಸಮಾಜದಿಂದ ಹೊರಡಬೇಕಿದೆ. ಏಕೆಂದರೆ ಇದು ನಮ್ಮ ಶಾಲೆ


ಮೊದಲೇ ಸರ್ಕಾರಿ ಶಾಲೆಗಳ ವ್ಯವಸ್ಥೆ ಬಗ್ಗೆ ಇಲ್ಲಸಲ್ಲದ ಮಾತುಗಳು ಕೇಳಿಬರುತ್ತಿರುವಾಗ ಮಕ್ಕಳ ಭದ್ರತೆ ವಿಚಾರ ಬಂದಾಗ ಪೋಷಕರು ಭಾವನಾತ್ಮಕವಾಗಿ ಬಿಡುತ್ತಾರೆ ಈ ಸೂಕ್ಷ್ಮ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಯಾವುದಾದರು ಹಣದ ಮೂಲದಿಂದ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಆಗಬಾರದ ಅವಘಡ ನಡೆದು ಪಶ್ಚಾತ್ತಾಪ ಪಡಬೇಕಾಗುತ್ತದೆ.


ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್,ಆರ್,ಹೆಗಡೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಕ್ಕಳ ಸುರಕ್ಷತೆ ಬಗ್ಗೆ ಶಿಕ್ಷಕರಿಗೆ ಮತ್ತು ಎಸ್.ಡಿ.ಎಂ.ಸಿ ಅವರಿಗೆ ಸಲಹೆ ಸೂಚನೆ ನೀಡಿದ್ದು ದುರಸ್ತಿ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಾದ್ಯಾಪಕರು, ಶಾಲಾಭಿವೃದ್ದಿ ಸಮಿತಿಯ ಪ್ರಮುಖರು ಶಿಕ್ಷಕರು ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *