
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ತೋಟದ ಕಲ್ಲಳ್ಳಿ ಗ್ರಾಮದ ಅರಣ್ಯದೊಳಗೆ ರಾತ್ರಿ ವೇಳೆಯಲ್ಲಿ ಮೇಣದ ಬತ್ತಿ ಬೆಳಕಿನಲ್ಲಿ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದ ಗುಂಪೊAದರ ಮೇಲೆ ಯಲ್ಲಾಪುರ ಪೊಲೀಸರು ಧಾಳಿ ನಡೆಸಿ 13,150 ನಗದು ಹಾಗೂ ಆಟಕ್ಕೆ ಬಳಸಿದ ಸಲಕರಣೆಗಳನ್ನು ವಶಪಡಿಸಿಕೊಂಡು ಐವರನ್ನು ಹಿಡಿದಿದ್ದು ಆರುಮಂದಿ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ

ತಾಲೂಕಿನ ಉಮ್ಮಚಗಿಯ ಕೋಟೇಮನೆ ನಿವಾಸಿ ಗಜಾನನ ನಾರಾಯಣ ನಾಯ್ಕ, ಉಮ್ಮಚಗಿಯ ಮೋಹನ ಪುಟ್ಟಯ್ಯಾ ಪೂಜಾರಿ, ಮಂಚೀಕೇರಿ ಸೋಮನಳ್ಳಿಯ ವಿಶ್ವನಾಥ ರಾಮಾ ಕುಣಬಿ, ಆನೆಗುಂಡಿ ಶಿರನಾಳಾದ ಲೋಕೇಶ ಗಣಪತಿ ನಾಯ್ಕ, ಕೆರೆ ಹೊಸಳ್ಳಿಯ ನಾಗೇಶ ಕೃಷ್ಣಾ ಕುಣಬಿ ಸಿಕ್ಕವರಾಗಿದ್ದು ಉಮ್ಮಚಗಿಯ ರಾಮ ಮರ್ಲಾ ಪೂಜಾರಿ, ಲಕ್ಷö್ಮಣ ಮರ್ಲಾ ಪೂಜಾರಿ, ತ್ಯಾಗರಾಜ ಕೃಷ್ಣಾ ಪೂಜಾರಿ, ಕುಂದರಗಿ ಮಾರಿಮಕ್ಕಿಯ ಮಹದೇವ ಗಣಪ ಹೆಗಡೆ, ಮಾವಿನಕಟ್ಟಾದ ಲಂಬೋದರ ದೇವಪ್ಪ ನಾಯ್ಕ, ಉಮ್ಮಚಗಿಯ ಭರತ ಶ್ರೀಕಾಂತ ನಾಯ್ಕ ಪರಾರಿಯಾಗಿದ್ದಾರೆ.
ಈ ಸಂಬAಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.


Prathidvani Yellapura