Breaking News

ಅಕ್ರಮ ಜಾನುವಾರು ಸಾಗಾಟ ಮೂವರ ಬಂಧನ ಜಾನುವಾರು ವಶಕ್ಕೆ

ಪ್ರತಿಧ್ವನಿ,ಯಲ್ಲಾಪುರ : ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ ಅಂದಾಜು 3೦,೦೦೦ರೂ ಮೌಲ್ಯದ ಜಾನುವಾರುಗಳನ್ನು ಯಲ್ಲಾಪುರ ಪೊಲೀಸರು ಧಾಳಿ ಮಾಡಿ ಹಿಡಿದ ಘಟನೆ ತಾಲೂಕಿನ ಗುಳ್ಳಾಪುರ ಗ್ರಾಮದಲ್ಲಿ ಹಾದುಹೋಗಿರುವ ಕಾರವಾರ-ಬಳ್ಳಾರಿ ರಾಷ್ಟೀಯ ಹೆದ್ದಾರಿಯಲ್ಲಿ ನಡೆದಿದೆ.


ತಾಲೂಕಿನ ಕಿರವತ್ತಿ ಗಣಪತಿ ಗಲ್ಲಿ ನಿವಾಸಿ ಜಗದೀಶ ಸುಭಾಷ ದಿಂಡವಾಲ್(37), ಕಲಘಟಗಿ ತಾಲೂಕು ಬಸವೇಶ್ವರರ ನಗರದ ನಿವಾಸಿ ಬಸಪ್ಪ ಸಹದೇವಪ್ಪ ಕೋಟೆ(48), ಕಲಘಟಗಿ ಮಿಶ್ರಿಕೋಟೆಯ ನಿವಾಸಿ ಇಮಾಮ್ ಕಾಶಿಂ ಮಾಬುಸಾಬ ಗುಡಿಹಾಳ ಎಂಬ ಮೂವರೇ ಅಕ್ರಮ ಜಾನುವಾರುಗಳನ್ನು ಸಾಗಿಸುತ್ತಿದ್ದವರಾಗಿದ್ದಾರೆ.


ಜಗದೀಶ ಎಂಬುವನು ತನ್ನ ಮಹೇಂದ್ರ ಪಿಕ್ ಅಪ್ ವಾಹನ ಹಾಗೂ ಬಸಪ್ಪ ಹಾಗೂ ಇಮಾಮ್ ಕಾಶಿಂ ಇಬ್ಬರೂ ತಮ್ಮ ಸೂಪರ್ ಕ್ಯಾರಿ ವಾಹನದ ಹಿಂದಿನ ಇಕ್ಕಟ್ಟಾದ ಬಾಡಿಯಲ್ಲಿ ಅಕ್ರಮವಾಗಿ ರೂ.3೦,೦೦೦ ಮೌಲ್ಯದ ಜಾನುವಾರುಗಳನ್ನು ಯಾವುದೇ ಅನುಮತಿ ಇಲ್ಲದೆ ಹಿಂಸಾತ್ಮಕವಾಗಿ ಗೋಕರ್ಣದಿಂದ ಕಲಘಟಗಿಗೆ ಸಾಗಿಸಲು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತಿವೇಗವಾಗಿ ಚಲಾಯಿಸಿಕೊಂಡು ಬರುವಾಗ ತಾಲೂಕಿನ ಗುಳ್ಳಾಪುರ ಗ್ರಾಮದಲ್ಲಿ ಹಾದುಹೋಗಿರುವ ಕಾರವಾರ-ಬಳ್ಳಾರಿ ರಾಷ್ಟೀಯ ಹೆದ್ದಾರಿಯಲ್ಲಿ ಯಲ್ಲಾಪುರ ಪೊಲೀಸರು ದಾಳಿ ನಡೆಸಿ 3೦,೦೦೦ ಮೌಲ್ಯದ ಎರಡು ಎತ್ತುಗಳು, ಒಂದು ಹೋರಿ, 1೦,೦೦೦ ಮೌಲ್ಯದ ಮೂರು ಹೋರಿ ಕರುಗಳು, 4ಲಕ್ಷ ಮೌಲ್ಯದ ಮಹೇಂದ್ರ ಪಿಕ್ ಅಪ್ ವಾಹನ, 1ಲಕ್ಷ ಮೌಲ್ಯದ ಸೂಪರ್ ಕ್ಯಾರಿ ವಾಹನವನ್ನು ವಶಪಡಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *