Breaking News

ಭವಿಷ್ಯದ ಜನ ನಾಯಕ ಹೆಬ್ಬಾರ್ ಪುತ್ರ ಯುವ ನಾಯಕ ವಿವೇಕ್ ಹೆಬ್ಬಾರ್ ಗೆ ಜನುಮದಿನ.

.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿದ್ವನಿ,ಯಲ್ಲಾಪುರ-ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಅಭಿವೃದ್ಧಿ ಪರ್ವದ ಸುವರ್ಣದಿನಗಳನ್ನು ಕಾಣಿಸಿದವರೆಂದರೆ ಅದು ಅರಬೈಲ್ ಶಿವರಾಮ ಹೆಬ್ಬಾರ್. ಅವರೊಬ್ಬ ರಾಜಕಾರಣಿ ಅನ್ನುವುದಕ್ಕಿಂತ ಬಡವರ ಬಗ್ಗೆ ಪ್ರೀತಿ  ಅಪ್ಯಾಯತೆ ತೋರುವ ಮಾನವೀಯ ಮೌಲ್ಯದ ಸಾಮಾನ್ಯ ಕಾರ್ಮಿಕ. ಅದಕ್ಕೆಂದೆ ಸತತ ನಾಲ್ಕನೆ ಬಾರಿ ಕ್ಷೇತ್ರದ ಜನರ ಆಶಿರ್ವಾದ ದೊರೆತಿದೆ. ವಿಶೇಷವಾಗಿ ಮೊನ್ನೆ ತಾನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸುನಾಮಿ ಅಲೆಯ ಮದ್ಯೆ ಮತ್ತೆ ಗೆಲುವಿನ ನಗೆ ಬೀರಿದ ಶಿವರಾಮ ಹೆಬ್ಬಾರ್ ಯಶಸ್ಸಿನ ಹಿಂದೆ ಪುತ್ರ ವಿವೇಕ್ ಹೆಬ್ಬಾರ್ ಶ್ರಮವು ಕೂಡ ಅತ್ಯಂತ ಪ್ರಾಮುಖ್ಯತೆ ಪಡೆದಿದೆ.

          ಕಳೆದ ಚುನಾವಣೆಗಳಲ್ಲಿ ಕ್ಷೇತ್ರ ರಾಜಕೀಯದಲ್ಲಿ ಅಷ್ಟೊಂದು ತೊಡಗಿಸಿಕೊಳ್ಳದ ವಿವೇಕ್ ಹೆಬ್ಬಾರ್ ಈ ಬಾರಿ ಚುನಾವಣೆಯಲ್ಲಿ ತಂದೆ ಶಿವರಾಮ ರ ಅರ್ಧ ಬಾರ ಹೆಗಲಮೇಲೆ ಹೊತ್ತು ಹಗಲು ರಾತ್ರಿ ಕಾಲಿಗೆ ಚಕ್ರ ಕಟ್ಟಿಕೊಂಡು ತಮ್ಮ ವ್ಯವಹಾರವನೆಲ್ಲಾ ಬಿಟ್ಟು. ಕ್ಷೇತ್ರಾದ್ಯಂತ ಸಂಚರಿಸಿ ಚುನಾವಣೆಯಲ್ಲಿ ಶ್ರಮಿಸಿದ್ದಾರೆ.

ಇಷ್ಟು ಸಾಕಲ್ಲವೆ ಭವಿಷ್ಯದಲ್ಲಿ ನಾಯಕನಾಗುವ ಎಲ್ಲಾ ಲಕ್ಷಣಗಳನ್ನು ಅಳವಡಿಸಿಕೊಳ್ಳುತ್ತಾ ಸಾಗುತ್ತಿದ್ದಾರೆ.

    ಸದ್ಯ ಹೆಬ್ಬಾರ್ ಗರಡಿಯಲ್ಲಿ ಪಳಗುತ್ತಿರುವ ಯುವ ನಾಯಕ ವಿವೇಕ್ ಹೆಬ್ಬಾರ್ ಅವರಿಗೆ ಇಂದು ಜನುಮ ದಿನದ ಸಂಭ್ರಮ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮತದಾರರು ಅದರಲ್ಲು ಶಾಸಕ ಶಿವರಾಮ ಹೆಬ್ಬಾರ್ ಅಭಿಮಾನಿಗಳು ಭವಿಷ್ಯದ ಜನನಾಯಕ ವಿವೇಕ್ ಹೆಬ್ಬಾರ್ ಗೆ ಶುಭಕೊರಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *