Breaking News

ಚುನಾವಣೆ ನಂತರ ಶಾಸಕ ಹೆಬ್ಬಾರ್ ನಡೆಸಿದ ಇಲಾಖೆಗಳ ಪ್ರಗತಿ ಪರಿಶೀಲನ ಸಭೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ಅಧಿಕಾರಿಗಳು ಚುನಾವಣ ನೀತಿ ಸಂಹಿತೆ ಮುಕ್ತಾಯವಾಗಿದೆ ಎಂಬ ವಿಷಯವನ್ನು ತಲೆಗೆ ತುಂಬಿಕೊAಡು ಸಾರ್ವಜನಿಕ ಸೇವಾ ಕಾರ್ಯಕ್ಕೆ ಮುಂದಾಗಬೇಕಿದೆ. ಪ್ರಸ್ತುತ ವರ್ಷದಲ್ಲಿ ಬಿಸಿಲಿನ ತಾಪಕ್ಕೆ ನೀರಿನ ಸಮಸ್ಯೆ ಎದುರಾಗುತ್ತಿದ್ದು ಮುನ್ನೆಚ್ಚರಿಕೆ ವಹಿಸಬೇಕಿದೆ. ದೈವಾನುಗ್ರಹದಿಂದ ಈ ಬಾರಿ ಯಲ್ಲಾಪುರ ತಾಲೂಕಿನಲ್ಲಿ ಇಲ್ಲಿಯವರೆಗೆ ದೊಡ್ಡ ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಎಲ್ಲಾ ಇಲಾಖೆಗಳಿಗು ನನ್ನದೊಂದು ಪ್ರಮುಖ ಸೂಚನೆ ಯಾವುದೆ ಕಾರಣಕ್ಕು ಶಾಲಾ ಕಾಲೇಜು, ಅಂಗನವಾಡಿ, ಆಸ್ಪತ್ರೆ ಗಳಿಗೆ ಪ್ರಮುಖ ಆದ್ಯತೆ ನೀಡಿ ಕುಡಿಯುವ ನೀರಿನ ಸಮರ್ಪಕ ಸೇವೆ ಒದಗಿಸಬೇಕಿದ್ದು ಸಂಪನ್ಮೂಲಗಳ ಕೊರತೆ ಆದಲ್ಲಿ ನನ್ನ ಗಮನಕ್ಕೆ ತನ್ನಿ. ಯಾವುದಾದರು ರೂಪದಲ್ಲಿ ನೀರಿನ ಸಮಸ್ಯೆ ಬರದಂತೆ ಜಾಗ್ರತೆ ವಹಿಸೋಣ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.


ಅವರು ಈ ಬಾರಿಯ ಚುನಾವಣೆ ಮುಗಿದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಐದನೆ ದಿನಕ್ಕೆ ಅಧಿಕಾರಿಗಳ ಸಭೆ ನಡೆಸಿ ಇಲಾಖೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದರು.
ಚುನಾವಣೆ ಸಂದರ್ಭದಲ್ಲಿ ಚುನಾವಣ ಕರ್ತವ್ಯಕ್ಕಾಗಿ ಆಗಮಿಸಿದ್ದ ರಾಜಸ್ಥಾನ ಸೈನಿಕ ಸಿಬ್ಬಂದಿಗಳಲ್ಲಿ ಹತ್ತು ಮಂದಿಗೆ ಕೊವಿಡ್ ಲಕ್ಷಣ ಕಂಡು ಬಂದಿದ್ದು ಪ್ರತ್ಯೇಕ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. ಅದರ ಹೊರತುಪಡಿಸಿ ಯಲ್ಲಾಪುರದ ಯಾರಿಗು ಸೋಂಕು ತಗುಲಿದ ಉದಾಹರಣೆಗಳಿಲ್ಲ. ಕಳಚೆ, ವಜ್ರಳ್ಳಿ, ಮಾಗೋಡು, ತೆಲಂಗಾರ ಸಬ್ ಸೆಂಟರ್ ಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ ಎಂದು ತಾಲೂಕು ಆರೋಗ್ಯಧಿಕಾರಿ ಡಾ,ನರೇಂದ್ರ ಪವಾರ್ ಹೇಳಿದರು.


ಪಶು ಸಂಗೋಪನ ಇಲಾಖೆಯಲ್ಲಿ ಬಹಳಷ್ಟು ಸಿಬ್ಬಂದಿಗಳ ಕೊರತೆ ಇದ್ದು ತಾಲೂಕಿನಲ್ಲಿ ಇತ್ತೀಚೆಗೆ ಯಾವುದೆ ಸಾಂಕ್ರಾಮಿಕ ರೋಗದ ಲಕ್ಷಣಗಳು ಕಂಡುಬರಲಿಲ್ಲ. ಬಹುತೇಕ ಎಲ್ಲಾ ಪ್ರದೇಶದಲ್ಲಿ ಆಸ್ಪತ್ರೆಗೆ ಸ್ವಂತ ಕಟ್ಟಡ ಹೊಂದಿದೆ . ಆದಷ್ಟು ಬೇಗ ಸಿಬ್ಬಂದಿಗಳು ನೇಮಕವಾಗಬೇಕಿದೆ ಎಂದು ಪಶುಸಂಗೋಪನ ಅಧಿಕಾರಿ ಸುಬ್ರಾಯ ಭಟ್ ಹೇಳಿದರು
ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಅಧಿಕಾರಿಗಳಿಗೆ ಕೆಲವು ಸಲಹೆ ಸೂಚನೆ ನೀಡಿದರು.


ಕೆಲವು ವಿಚಾರಗಳಿಗೆ ಜಿಲ್ಲಾ ಪಂಚಾಯತ ಮುಖ್ಯಾಧಿಕಾರಿ ಈಶ್ವರ್ ಕುಮಾರ್ ಖಾಂದೂ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರೊಡನೆ ದೂರವಾಣಿ ಮೂಲಕ ಮಾತನಾಡಿ ಮಾಹಿತಿ ಪಡೆದು ಸಲಹೆ ನೀಡಿದರು.


ಪ್ರಮುಖ ಅಂಶಗಳು
• ತಾಲೂಕಿನಲ್ಲಿ ಕಿರವತ್ತಿ ಮತ್ತು ಮದನೂರು ಪಂಚಾಯತ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬAದಿದ್ದು ಪ್ರತಿ ನಿತ್ಯ ನಾಲ್ಕು ಟ್ಯಾಂಕರ್ ನೀರು ಸರಬರಾಜು ಮಾಡುತ್ತಿದ್ದು ಶಾಸಕರ ಆದೇಶದಂತೆ ಮತ್ತೆ ನಾಲ್ಕು ಲೋಡ್ ನೀರು ಸರಬರಾಜು ಹೆಚ್ಚು ಮಾಡುವಂತೆ ತಿಳಿಸಲಾಯ್ತು
• ಸಾರ್ವಜನಿಕ ಉಪಯೋಗದ ಕೆಲಸಗಳಾಗುವಂತಹ ಸಂದರ್ಭದಲ್ಲಿ ಇಲ್ಲಸಲ್ಲದ ಕಾನೂನುಗಳನ್ನು ಅಡ್ಡ ತಂದು ನೋಟಿಸ್ ನೀಡುವ ಅರಣ್ಯ ಇಲಾಖೆಯ ನಡೆಯನ್ನು ಸಹಿಸುವುದಿಲ್ಲ.
• ಅಧಿಕಾರಿಗಳು ಕೇವಲ ನಿಯಮ ಕಾನೂನು ಎಂದು ಕೆಲಸ ಮಾಡದೆ ಕೊಂಚ ಮಾನವೀಯತೆಯಿಂದಲೂ ಕರ್ತವ್ಯ ಪರಿಪಾಲನೆ ಮಾಡಬೇಕಿದೆ.
• ಅಧಿಕಾರಿಗಳಿಂದ ನನಗೇನು ಆಗಬೇಕಿಲ್ಲ ಆದರೆ ನನ್ನ ಕ್ಷೇತ್ರದ ಒಬ್ಬ ಬಡವನಿಗು ತೊಂದರೆ ಆದರೆ ಸಹಿಸುವ ಪ್ರಶ್ನೆಯೆ ಇಲ್ಲ.
• ತಾಲ್ಲೂಕಿನ ಹದಿನೈದು ಪಂಚಾಯತಕ್ಕೆ ಮಂಜೂರಾದ ಎಸ್.ಸಿ ಮತ್ತು ಎಸ್.ಟಿ ಗಳಿಗಾಗಿಯೆ ಮಂಜುರಾದ ಮನೆಗಳಿಗೆ ಫಲಾನುಭವಿಗಳು ಸಿಗದೆ ಹೋದಲ್ಲಿ ಅಂತಹ ಪಟ್ಟಿಮಾಡಿ ಬೇರೆಡೆಗೆ ವರ್ಗಾಯಿಸಬೇಕಿದೆ.
• ಶಾಲೆಗಳಿಗೆ ಪ್ರವೇಶ ಪಡೆಯುವ ಸಮಯವಾದ್ದರಿಂದ ವಿದ್ಯಾರ್ಥಿಗಳು ಕೆಲವು ದಾಖಲೆಗಳಿಗಾಗಿ ಅಂದರೆ ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣ ಪತ್ರ ತಕ್ಷಣದಲ್ಲಿ ನೀಡಬೇಕೆಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಮೌಕಿಕ ಆದೇಶ ನೀಡಿದರು.


ಸಭೆಗು ಮುನ್ನ ವಿವಿಧ ಇಲಾಖೆಗಳ ವತಿಯಿಂದ ವಿಧಾನಸಭೆ ಶಾಸಕರಾಗಿ ಸತತ ನಾಲ್ಕನೆ ಬಾರಿಗೆ ಆಯ್ಕೆಯಾಗಿರುವುದಕ್ಕೆ ಗೌರವಿಸಿ ಸನ್ಮಾನಿಸಲಾಯಿತು.


ರಾಜ್ಯ ವಿಕೇಂದ್ರೀಕರಣ ಯೋಜನಾ ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ, ತಾಲೂಕು ಪಂಚಾಯತ ಆಡಳಿತಾಧಿಕಾರಿ ನಟರಾಜ್, ತಹಶಿಲ್ದಾರ ಗುರುರಾಜ್, ಶಿಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಪಿ.ಬಸವರಾಜ್ ಉಪಸ್ಥಿತರಿದ್ದರು. ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಜಗದೀಶ್ ಕಮ್ಮಾರ್ ಸ್ವಾಗತಿಸಿ ವಂದಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ.ಭಟ್ ನಿರೂಪಿಸಿದರು.



ಯಲ್ಲಾಪುರ ತಾಲೂಕಿನ ಅಧಿಕಾರಿಗಳು ಉತ್ತಮ ಕೆಲಸ ಕಾರ್ಯ ಮಾಡಿದ್ದು ನಾನು ಮಾಡಿದ ಅಭಿವೃದ್ಧಿ ಕಾರ್ಯಗಳು ಜನರಿಗೆ ತಲುಪುವಲ್ಲಿ ನಿಮ್ಮ ಪಾತ್ರ ದೊಡ್ಡದಿದೆ. ಅಧಿಕಾರಿಗಳು ಮಾಡುವ ತಪ್ಪುಗಳಿಗೆ ನಾನೆ ಹೊಣೆಗಾರನಾಗುತ್ತೇನೆ.ಅವರು ಮಾಡುವ ಉತ್ತಮ ಕೆಲಸಗಳ ಶ್ರೇಯವು ನನಗೆ ಸಲ್ಲುತ್ತದೆ. ಅದಕ್ಕೆ ತಾಜಾ ಉದಾಹರಣೆ ಎಂದರೆ ಮೊನ್ನೆ ತಾನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ತಾಲೂಕಿನ ಮತದಾರರು ಐದು ಸಾವಿರದಷ್ಟು ಅಧಿಕ ಮತಗಳನ್ನು ನೀಡಿ ಆಶಿರ್ವದಿಸಿರುವುದೆ ಆಗಿದೆ ಇದಕ್ಕೆ ಅಧಿಕಾರಿ ವರ್ಗದವರೆಲ್ಲರಿಗು ಶರಣು ಎನುವೆ. ಶಿವರಾಮ ಹೆಬ್ಬಾರ್ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

2025 ನೆ ಸಾಲಿನ ಯಲ್ಲಾಪುರ ಗಣಪತಿಗಳ ದಿವ್ಯ ದರ್ಶನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದಲ್ಲಿ 20 ಕ್ಕು ಅಧಿಕ ಕಡೆಗಳಲ್ಲಿ …

Leave a Reply

Your email address will not be published. Required fields are marked *