
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಸ್ವಕ್ಷೇತ್ರ ಯಲ್ಲಾಪುರದಲ್ಲಿ ಮತ ಯಾಚಿಸುವುದಕ್ಕಿಂತ ಮತದಾನ ಮಾಡೇ ಮಾಡುತ್ತಾರೆಂಬ ನಂಬಿಕೆಯೇ ಹೆಚ್ಚು. ಮನೆಯ ಮಗನಾಗಿ , ಕ್ಷೇತ್ರವನ್ನೇ ಕುಟುಂಬವೆAದು ತಿಳಿದ ನಾನು ಸದಾ ಜನರ ಮದ್ಯದಲ್ಲೇ ಇದ್ದೇನೆ, ಕಣ್ಣಿಗೆ ಕಾಣುವಂತಹ ಅಭಿವೃದ್ಧಿಯನ್ನೇ ಮಾಡಿದ್ದೇನೆ. ಸ್ವಜನ ಪಕ್ಷಪಾತ, ಪೊಳ್ಳು ಭರವಸೆ, ಕೋಮು ದ್ವೇಷ, ಧರ್ಮ ಬೇಧ ಇದಾವುದನ್ನೂ ನನ್ನ ಜೀವನದಲ್ಲೇ ಮಾಡಿ ರಾಜಕೀಯದಲ್ಲಿ ಬಂದವನಲ್ಲ. ಬದಲಾಗಿ ಬಡವರ ಕಷ್ಟಸುಖಗಳ ಮದ್ಯೆ ಬೆಳೆದು ಶ್ರಮಿಕರ ಬೆವರಿನ ಬೆಲೆ ತಿಳಿದು ಕೃಷಿಕನಾಗಿ ಭೂಮಿಯಲ್ಲಿ ಉತ್ತಿ ಬಿತ್ತಿ ಬೆಳೆದವನು ನಾನು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸರ್ವರ ಏಳಿಗೆಗಾಗಿ ಶ್ರಮಿಸುತ್ತಿದ್ದೇನೆ. ಹೊಸದಾಗಿ ನಿಮ್ಮ ಮುಂದೆ ಹೇಳಿಕೊಳ್ಳುವಂತಹದ್ದೇನೂ ಇಲ್ಲ, ನಿಮ್ಮ ಮನೆಯ ಮಗನನ್ನು ಆಶೀರ್ವದಿಸಿ ಮೇ 10 ರಂದು ಮತ ಚಲಾಯಿಸಿ ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಬೇಡಿಕೊಳ್ಳುತ್ತೇನೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಹೇಳಿದರು.


ಅವರು ಪಟ್ಟಣದಲ್ಲಿ ಮೇ ೫ರಂದು ನೂತನನಗರ ಜಡ್ಡಿ, ಸಬಗೇರಿ, ಬಾಳಗಿಮನೆ, ಉದ್ಯಮನಗರ, ಶಾರದಾಗಲ್ಲಿ, ಕಾಳಮ್ಮನಗರ, ಗಣಪತಿಗಲ್ಲಿ, ತಿಲಕ ಚೌಕ, ವಲೀಷಾ ಗಲ್ಲಿ, ಅಂಬೇಡ್ಕರ್ ನಗರ, ತಳ್ಳೀಕೇರಿ ಹಾಗೂ ರವೀಂದ್ರನಗರ, ಮಂಜುನಾಥ ನಗರಗಳಲ್ಲಿ ಸಾರ್ವಜನಿಕರಲ್ಲಿ ಮತ ಯಾಚಿಸುತ್ತಾ ಮಂಜುನಾಥನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.











ಪಕ್ಷದ ಪ್ರಚಾರ ಕಾರ್ಯದಲ್ಲಿ ಕ್ಷೇತ್ರಾದ್ಯಂತ ಸಂಚರಿಸುತ್ತಿದ್ದು ವಿಶೇಷವಾಗಿ ಯಲ್ಲಾಪುರ ತಾಲೂಕಿನಾದ್ಯಂತ ಹೆಬ್ಬಾರ್ ಅವರ ಪರವಾದ ದೊಡ್ಡ ಅಲೆ ಇದೆ. ಗೆಲುವು ನಿಶ್ಚಿತವಾದರೂ ವಿರೋಧಿ ಕಾಂಗ್ರೆಸ್ನವರ ಬೋಗಸ್ ಗ್ಯಾರಂಟಿ ಕಾರ್ಡುಗಳು ಮತದಾರರ ದಿಕ್ಕು ತಪ್ಪಿಸುತ್ತಿದ್ದು ಆಯಾ ವಾರ್ಡ್, ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಪೊಳ್ಳು ಗ್ಯಾರಂಟಿ ಕಾರ್ಡುಗಳ ಕುರಿತು ವಿವರಿಸಿ ಹೇಳಬೇಕಿದೆ. ಸುಭದ್ರ ಮತ್ತು ಭ್ರಷ್ಟಾಚಾರ ಮುಕ್ತ , ಕೋಮು ಸೌಹಾರ್ದ ಕಾಪಾಡಲು ನರೇಂದ್ರ ಮೋದಿ ನೇತೃತ್ವದ ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪನವರ ಆಶೀರ್ವಾದದ ಬಸವರಾಜ ಬೊಮ್ಮಾಯಿಯವರ ಮುಂದಾಳತ್ವದಲ್ಲಿ ರಾಜ್ಯಾದ್ಯಂತ ಹೆಸರಾಗಿರುವ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರರ ಕಮಲದ ಗುರುತಿಗೆ ಮತ ನೀಡಿ ಕ್ಷೇತ್ರದ ಅಭಿವೃದ್ಧಿ ವೇಗವನ್ನು ಮತ್ತಷ್ಟು ಹೆಚ್ಚಿಸಬೇಕಿದೆ ಎಂದು ಗೋವಾ ರಾಜ್ಯದ ಸಮಾಜ ಕಲ್ಯಾಣ ಸಚಿವ ಸುಭಾಶ್ ಪಾಲ್ ದೇಸಾಯಿ ಹೇಳಿದರು.
ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶಾಮಿಲಿ ಪಾಟಣಕರ, ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್, ಪ.ಪಂ ಸದಸ್ಯ ಸತೀಶ್ ನಾಯ್ಕ ಉಪಸ್ಥಿತರಿದ್ದರು . ಮತ್ತು ಆಯಾ ವಾರ್ಡ್ ವ್ಯಾಪ್ತಿಯಲ್ಲಿ ನಡೆದ ಸಭೆಗಳಲ್ಲಿ ಅಲ್ಲಿಯ ಪ್ರಮುಖರೊಂದಿಗೆ ಆಯಾ ವಾರ್ಡ್ ವ್ಯಾಪ್ತಿಯ ಪ.ಪಂ ಸದಸ್ಯರು, ಶಕ್ತಿ ಕೇಂದ್ರ , ಮಹಾಶಕ್ತಿ ಕೇಂದ್ರದ ಪ್ರಮುಖರು, ಮಹಿಳಾ ಕಾರ್ಯಕರ್ತರು, ಯುವಮೋರ್ಚಾ ಕಾರ್ಯಕರ್ತರು , ಹಿರಿಯ ಮುಖಂಡರು, ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.
Prathidvani Yellapura