
ಪ್ರತಿಧ್ವನಿ ಯಲ್ಲಾಪುರ -: ಕರ್ನಾಟಕ ಸಿದ್ದಿ ಸಮುದಾಯ ಸಮಿತಿ ಮಂಚಿಕೇರಿ ವಿಭಾಗದಿಂದ ಕುಂದರಗಿ ಪಂಚಾಯತದ ಮಾವಿನಕಟ್ಟಾ ಶ್ರೀ ಶಕ್ತಿ ಸಮುದಾಯಭವನದಲ್ಲಿ ಸಿದ್ದಿ ಜನಾಂಗದವರಿಗೆ ಕಾನೂನು ಅರಿವು,ದಾಖಲೆಗಳನ್ನು ಸರಿ ಪಡಿಸಿ ಕೊಳ್ಳುವಿಕೆ ಹಾಗೂ ಸಿದ್ದಿ ಪೌಷ್ಠಿಕ ಆಹಾರದ ಕುರಿತು ಮಾಹಿತಿ ನೀಡಲು ಸಭೆಯನ್ನು ಆಯೋಜಿಸಲಾಗಿತ್ತು .


ಕಾರ್ಯಕ್ರಮವನ್ನು ಉಚ್ಚ ನ್ಯಾಲಯಾಲಯದ ನ್ಯಾಯವಾದಿಗಳಾದ ಜಯರಾಮ್ ಸಿದ್ದಿಯವರು ಉದ್ಘಾಟಿಸಿ ಕಾನೂನು ಪ್ರಕಾರದ ಹಲವು ಮಾಹಿತಿಗಳನ್ನು ನೀಡಿದರು.ಭಾಸ್ಕರ ಸಿದ್ದಿ ಮಂಚಿಕೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕುಟುಂಬ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಶಂಕರ ಸಿದ್ದಿ ಮಾದನಸರ ವಹಿಸಿದ್ದರು,ಖಜಾಂಚಿ ರವಿ ಸಿದ್ದಿ ಭರಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು ಕಾರ್ಯದರ್ಶಿ ಲೋಕೇಶ ಸಿದ್ದಿ ನಿರೂಪಿಸಿದರು,

ಸಮಿತಿಯ ಉಪಾಧ್ಯಕ್ಷರಾದ ಫಿರ್ಮಾಬಿ,ರಾಮಾ ಸಿದ್ದಿ ಉಚಗೇರಿ ಉಪಸ್ಥಿತರಿದ್ದರು.
ಸಭೆಯಲ್ಲಿ ಪೋಕ್ಸೊ ಕಾಯಿದೆ,ಅಲ್ಟ್ರಾಸಿಟಿ ಹಾಗೂ ಇನ್ನಿತರ ದೌರ್ಜನ್ಯಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.















Prathidvani Yellapura