
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ವೆಂಕಟರಮಣ ಸಭಾಭವನದಲ್ಲಿ ಸ್ವರ್ಣ ಸಂಸ್ಥೆಯವರು ಹಮ್ಮಿಕೊಂಡ ಬಂಗಾರದ ಆಭರಣಗಳು ಮತ್ತು ವಜ್ರದ ಆಭರಣಗಳ ಪ್ರದರ್ಶನ ಹಾಗು ಮಾರಾಟ ಮೇಳವನ್ನು ಯುವ ಉದ್ಯಮಿ ಬಾಲಕೃಷ್ಣ ನಾಯಕ್ ಉದ್ಘಾಟಿಸಿ ಶುಭಕೋರಿದರು.


11 ರ ರವಿವಾರದಿಂದ 14 ರ ಬುಧವಾರದ ವರೆಗೆ ಉತ್ತಮ ಗುಣಮಟ್ಟದ ಮತ್ತು ನವೀನ ಶೈಲಿಯ ಬಂಗಾರದ ಆಭರಣಗಳು ಮತ್ತು ಡೈಮಂಡ್ ಆಭರಣಗಳ ಪ್ರದರ್ಶನ ಹಾಗು ಮಾರಾಟ ನಡೆಯಲಿದ್ದು ಯಲ್ಲಾಪುರ ತಾಲೂಕಿನ ಸುತ್ತಮುತ್ತಲಿನ ಆಭರಣ ಪ್ರಿಯರು ಭೇಟಿ ನೀಡಬಹುದಾಗಿದೆ ಎಂದು ಸಂಘಟಕರು ಕೋರಿದ್ದಾರೆ.


ಈ ಸಂದರ್ಭದಲ್ಲಿ ಮೇಳದ ಮಾಲಿಕ ಹಾಗು ಆಯೋಜಕ ಅವಿನಾಶ್ ಗೋಪಾಲಕೃಷ್ಣ ನಾಯಕ್ ಗುಜ್ಜಾಡಿ, ರಾಮ ಸ್ಟೋಸ್೯ ಮಾಲಿಕ ಮಾರುತಿ ನಾಯಕ,ವಿಭಾ ನಾಯಕ್ ಹುಬ್ಬಳ್ಳಿ ಹಾಗು ದೇವಸ್ಥಾನದ ಅರ್ಚಕ ಪ್ರಮೋದ್ ಭಟ್ ಉಪಸ್ಥಿತರಿದ್ದರು.















Prathidvani Yellapura