
ಪ್ರತಿಧ್ವನಿ ಯಲ್ಲಾಪುರ : ಜಿ+2 ಮನೆಗಳ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ದ ಬಡವರಿಗಾಗಿ ನೀಡಬೇಕಾದ ಮನೆಗಳನ್ನು ಶ್ರೀಮಂತರು, ಸ್ವಂತ ಮನೆಗಳನ್ನು ಉಳ್ಳವರು,ಬಾಡಿಗೆಗೆ ಮನೆಗಳನ್ಬು ನೀಡಿದವರು ಆರ್ಥಿಕವಾಗಿ ಶಕ್ತಿಶಾಲಿಗಳಿಗೆ ನೀಡಿದ್ದಾರೆ ಹೊರತು ಕೇವಲ ಬೆರಳೆಣಿಕೆಯಷ್ಟು ಬಡವರಿಗೆ ಮಾತ್ರ ಜಿ+2 ಮನೆ ಸಿಕ್ಕಿದೆ ಇದಕ್ಕೆ ಬೇಕಾದ ದಾಖಲೆ ಪುರಾವೆಗಳನ್ನು ಮುಂದಿಟ್ಟುಕೊಂಡು ಬಹಿರಂಗ ಚರ್ಚೆಗೆ ನಾವು ಸಿದ್ದರಿದ್ದೇವೆ ಹಿಂಬಾಲಕರ ಮೂಲಕ ಹೇಳಿಸುವ ಬದಲು ಸ್ವತಃ ಶಾಸಕರೆ ಚರ್ಚೆಗೆ ಬರಲಿ, ಅಲ್ಲದೆ ನದಿ ಜೋಡಣೆ ವಿಚಾರದಲ್ಲಿ ತಮ್ಮ ದ್ವಂದ್ವ ನಿಲುವಿನಿಂದ ಹೊರಬಂದು ಜಿಲ್ಲೆಯ ಜನತೆಗೆ ತಮ್ಮ ನಿಲುವನ್ನು ಸ್ಪಷ್ಟ ಪಡಿಸಲಿ ಎಂದು ಯಲ್ಲಾಪುರ ಮಂಡಲ ಬಿಜೆಪಿ ಅಧ್ಯಕ್ಷ ಪ್ರಸಾದ್ ಹೆಗಡೆ ಸವಾಲು ಹಾಕಿದರು.

ಅವರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು.
ಶಾಸಕ ಶಿವರಾಮ ಹೆಬ್ಬಾರ್ ಅವರ ವೈಯ್ಯಕ್ತಿಕ ವಿಚಾರಗಳವಬಗ್ಗೆ ನಾವು ಯಾರು ಪ್ರಶ್ನೆ ಮಾಡಿಲ್ಲ ಆದರೆ ಹರಿಪ್ರಕಾಶ ಕೋಣೆಮನೆ ಶಿಕ್ಷಣ ಸಂಸ್ಥೆ ಮೂಲಕ ಹೆಚ್ಚಿನ ಹಣ ಮಾಡುತ್ತಿದ್ದಾರೆ’ ಎಂಬ ಆಪಾದನೆ ಸರಿಯಲ್ಲ ಅದರ ಬದಲು ಪಾಲಕರಿಗೆ ಕೋಟ್ಯಾಂತರ ಗಣ ಉಳಿಯುತ್ತಿದೆ’ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಬಿಜೆಪಿ ಮುಖಂಡ ರಾಘವೇಂದ್ರ ಭಟ್ಟ ಹೇಳಿದರು.
ಮಾದ್ಯಗಳಲ್ಲಿ ಮೊನ್ನೆದಿನ ಪ್ರಕಟವಾದಂತೆ ಹಗಲಿನಲ್ಲಿ ವಿರೋಧಿಸಿ ಮಾತನಾಡುವುದು,ರಾತ್ರಿ ಕಾಲಿಗೆ ಬಿದ್ದು ಕ್ಷಮೆ ಕೇಳುವುದು ಎಂಬ ವಿಚಾರದಕುರಿತು ಆಕ್ರೋಶ ವ್ಯಕ್ತಪಡಿಸಿ ಅಂತಹವರ ಹೆಸರನ್ನು ಬಹಿರಂಗ ಪಡಿಸಲಿ ಮತ್ತು ತಮ್ಮ ಕಾಂಗ್ರೆಸ್ ಕಚೇರಿ ಮುಂಬಾಗ ಬಿಜೆಪಿಗರಿಗೆ ಪ್ರವೇಶವಿಲ್ಲ ಎಂದು ಬೋಡ್೯ ಹಾಕಿಸಲಿ, ಅವರು ಕ್ಷೇತ್ರದ ಸರ್ವರಿಗು ಶಾಸಕರೆ ಅವರ ಬಳಿ ಹೋಗಿದ್ದರು ತಪ್ಪೇನಿದೆ.???

ಈ ಸಂದರ್ಭದಲ್ಲಿ ಪ್ರಮುಖರಾದ ಗಣಪತಿ ಮಾನಿಗದ್ದೆ,ಸೋಮೇಶ್ವರ ನಾಯ್ಕ್,ಕೆ.ಟಿ.ಹೆಗಡೆ ಗಣೇಶ ಪಾಠಣಕರ್ ಉಪಸ್ಥಿತರಿದ್ದರು.
`


















Prathidvani Yellapura