


ಪ್ರತಿಧ್ವನಿ ಯಲ್ಲಾಪುರ : ಸರ್ಕಾರ ಆರೋಗ್ಯ ವಿಚಾರವನ್ನು ಲಾಭದಾಯಕ ದೃಷ್ಟಿಯಿಂದ ಆಲೋಚಿಸದೆ ಇದೊಂದು ಬದ್ದತೆಯ ಸೇವೆ ಎಂಬ ನಿಟ್ಟಿನಲ್ಲಿ ನೋಡಿದಾಗ ಆಯುಷ್ಮಾನ್ ಆರೋಗ್ಯ ಕೇಂದ್ರಗಳು ಹೊರೆ ಎನಿಸದೆ ಬಡ ಜನತೆಗೆ ವರವೆನಿಸಲಿದೆ ಈ ನಿಟ್ಟಿನಲ್ಲಿ ಸರ್ಕಾರ ಮುಚ್ಚಲು ಹೊರಟಿರುವ ಆಯುಷ್ಮಾನ್ ಆರೋಗ್ಯ ಕೇಂದ್ರ ಮುಚ್ಷದಿರುವಂತೆ ಈಗಾಗಲೆ ಸಂಬಂಧಿಸಿದ ಇಲಾಖೆ ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದರು ಮುಚ್ಚಲು ಮುಂದಾಗಿರುವುದು ಅಕ್ಷಮ್ಯವಾಗಿದೆ ಎಂದು ರವೀಂದ್ರ ನಗರದ ಮಾಜಿ ಪಟ್ಟಣ ಪಂಚಾಯತ್ ಸದಸ್ಯ ಸೋಮೇಶ್ವರ ನಾಯ್ಕ್ ಆಕ್ರೋಶ ವ್ಯಕ್ತಪಡಿಸಿದರು.

ಅವರು ಶನಿವಾರ ಪಟ್ಟಣದ ರವೀಂದ್ರ ನಗರದ ಆಯುಷ್ಮಾನ್ ಆರೋಗ್ಯ ಕೇಂದ್ರದ ಎದುರು ಸ್ಥಳೀಯ ಸಾರ್ವಜನಿಕರೊಂದಿಗೆ ಆರೋಗ್ಯ ಇಲಾಖೆ ಆಯುಷ್ಮಾನ್ ಆರೋಗ್ಯ ಕೇಂದ್ರ ಮುಚ್ಚಲು ಹೊರಟಿರುವ ನಿರ್ಧಾರದ ವಿರುದ್ಧ ಸಾಂಕೇತಿಕವಾಗಿ ಪ್ರತಿಭಟಿಸಿ ಮಾತನಾಡಿದರು.

ಕಳೆದ ಹಲವು ವರ್ಷಗಳಿಂದ ರವೀಂದ್ರ ನಗರದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು ಜನತೆಗೆ ಅನುಕೂಲ ಆಗಿದೆ. ಹೇಳಿಕೇಳಿ ರವೀಂದ್ರ ನಗರ ಸ್ಲಂ ವ್ಯಾಪ್ತಿಯಲ್ಲಿ ಬರುತ್ತಿದ್ದು ನಿತ್ಯವು ದುಡಿದು ಬದುಕುವ ಬಡಕುಟುಂಬಗಳೆ ಹೆಚ್ಚು ಇದೆ. ಪಟ್ಟಣದ ಖಾಸಗಿ ಆಸ್ಪತ್ರೆಗೆ ಹೋಗುವಷ್ಟು ಶಕ್ತರಲ್ಲ ಮತ್ತು ಪಟ್ಟಣದ ಸರ್ಕಾರಿ ತಾಲೂಕು ಆಸ್ಪತ್ರೆ ಸಹ ಬಹಳಷ್ಟು ದೂರ ಇರುವುದರಿಂದ ವಯೋವೃದ್ದರು,ಗರ್ಭಿಣಿ ಮಹಿಳೆಯರು, ಅಂಗವಿಕಲರು, ಪುಟ್ಟ ಮಕ್ಜಳಿಗೆ ರವೀಂದ್ರ ನಗರದ ಆಯುಷ್ಮಾನ್ ಆರೋಗ್ಯ ಕೇಂದ್ರ ವರವಾಗಿದೆ ಎಂದು ವಿವರಿಸಿದರು


ಇದನ್ನು ಮುಚ್ಚುತ್ತಾರೆ ಎಂಬ ಮಾಹಿತಿ ತಿಳಿಯುತ್ತಲೆ ತಾಲೂಕು ದಂಡಾಧಿಕಾರಿಗಳಿಗೆ, ತಾಲೂಕು ಆರೋಗ್ಯಾಧಿಕಾರಿಗಳಿಗೆ ಲಿಖಿತ ಮನವಿ ಮೂಲಕ ಮುಚ್ಚದಂತೆ ಕೋರಲಾಗಿತ್ತು. ಆದರು ಮತ್ತೆ ಮಾದ್ಯಮಗಳಲ್ಲಿ ಮುಚ್ಚಲಿದ್ದಾರೆಂಬ ಮಾಹಿತಿ ಕೇಳಿ ಬರುತ್ತಿದ್ದು ಇದನ್ನು ಖಂಡಿಸುತ್ತೇವೆ ಎಂದು ಆಕ್ರೋಶ ಹೊರ ಹಾಕಿದರು.
















Prathidvani Yellapura