Breaking News

ಅರಣ್ಯ ಇಲಾಖೆ ಕಾಟಕ್ಕೆ ಬೇಸತ್ತ ಡಬ್ಗುಳಿ ರೈತ – ಸ್ಥಳಕ್ಕೆ ಹರಿಪ್ರಕಾಶ್ ಕೋಣೆಮನೆ ನಿಯೋಗ ಭೇಟಿ ಪರಿಶೀಲನೆ.

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಡಬ್ಗುಳಿಯಲ್ಲಿ ಅಧಿಕೃತ ಸೊಪ್ಪಿನ ಬೆಟ್ಟದಲ್ಲಿ ಅರಣ್ಯ ಇಲಾಖೆಯಿಂದ ಮುಳ್ಳು ಬಿದಿರು ನೆಟ್ಟು ಕೃಷಿಕರಿಗೆ ತೊಂದರೆ ಕೊಡುತ್ತಿರುವ ಕುರಿತು ಮಾಹಿತಿ ತಿಳಿದು ಸತ್ಯಾಸತ್ಯತೆ ಅರಿಯಲು ಬಿಜೆಪಿ ರಾಜ್ಯ ವಕ್ತಾರ ಬೆಟ್ಟ ಹೋರಾಟ ಸಮಿತಿಯ ಹರಿಪ್ರಕಾಶ್ ಕೋಣೆಮನೆ ಬೆಟ್ಟ ಹೋರಾಟ ಸಮಿತಿ ನಿಯೋಗದೊಂದಿಗೆ ಶನಿವಾರ ಡಬ್ಗುಳಿ ರೈತ ಗಣಪತಿ ವಿ ಭಟ್ಟ ಎಂಬುವರ ತೋಟಕ್ಕೆ ಭೇಟಿ ಪರಿಶೀಲಿಸಿದ್ದಾರೆ. 

 ಈ ಸಂದರ್ಭದಲ್ಲಿ ರೈತರು ಕೃಷಿಚಟುವಟಿಕೆಗಾಗಿ ಬಳಸುತ್ತಿರುವ ಅಧಿಕೃತ ಸೊಪ್ಪಿನ ಬೆಟ್ಟದಲ್ಲಿ ಬಿದಿರು ನೆಟ್ಟಿರುವುದು ಕಂಡು ಬಂದಿದೆ, ಇದು ದೇಶಕ್ಕೆ ಅನ್ನ ನೀಡುವ ರೈತರಿಗೆ ಅರಣ್ಯ ಇಲಾಖೆಯವರು ಕೊಡುತ್ತಿರುವ ಯಾತನೆಯಾಗಿದ್ದು ಈ ರೀತಿ ದಬ್ಬಾಳಿಕೆ ನಡೆಯದು. ಮುಂದೆ ಇದೇರೀತಿ ರೈತರಿಗೆ ಸಮಸ್ಯೆ ಮಾಡಲು ಮುಂದಾದರೆ  ಇಲಾಖೆಯ ವಿರುದ್ಧ ಅಧಿಕೃತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಿಯೋಗದಲ್ಲಿ ಹರಿಪ್ರಕಾಶ್ ಕೋಣೆಮನೆ,ಬೆಟ್ಟ ಹೋರಾಟ ಸಮಿತಿ ಯಲ್ಲಾಪುರದ ಸಂಚಾಲಕ ಕೆಟಿ ಹೆಗಡೆ,ಸದಸ್ಯರಾದ ವೆಂಕಟರಮಣ ಬೆಳ್ಳಿ, ವಿಶ್ವನಾಥ್ ಹಳೆಮನೆ ಮತ್ತು ಸ್ಥಳೀಯ ರೈತರು ಇದ್ದರು.

ಮತ್ತೆ ಈ ರೀತಿಯಲ್ಲಿ ರೈತರಿಗೆ ಇಲಾಖೆಯಿಂದ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ಮಾಹಿತಿ‌ನೀಡಿದ್ದಾರೆ

ಹಾಸ್ಯಾಸ್ಪದ ಫಲಕ 20 ಹೆಕ್ಟೇರ್ ಇಲ್ಲದ ಜಾಗದಲ್ಲಿ 8 ಸಾವಿರ ಸಸಿಗಳು..!!!

ಇಲ್ಲಿ ಮತ್ತೊಂದು ಚಿತ್ರ ಇದೆ ನೋಡಿ,
ಅದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೇಲಿನ ಫಲಕದ ಪ್ರಕಾರ 20 ಹೆಕ್ಟರ್ ಜಾಗದಲ್ಲಿ 8 ಸಾವಿರ ಸಸಿಗಳನ್ನು ನೆಡಲಾಗಿದೆ.
ವಾಸ್ತವದಲ್ಲಿ ಇಲ್ಲೆಲ್ಲೂ 20 ಹೆಕ್ಟರ ಜಾಗ ಇಲ್ಲ,8 ಸಾವಿರ ಹೋಗಲಿ ಎರಡು ಸಾವಿರ ಗಿಡಗಳನ್ನೂ ನೆಡಲಾಗಿಲ್ಲ.ನೆಟ್ಟಿದ್ದೂ ಕೂಡ ಅಧಿಕೃತ ಸಾಪಿನ ಬೆಟ್ಟದಲ್ಲಿ.
ಇನ್ನು ಅಲ್ಲಲ್ಲಿ ಬೆಳೆಸಿದ ಸಸಿಗಳನ್ನು ನೆಡದೆ ರಾಶಿ ರಾಶಿ ಸಸಿಗಳನ್ನು ಬೇಕಬಿಟ್ಟಿ ಬಿಸಾಡಿ ದ್ದೂ ಕೂಡ ಕಂಡುಬಂತು. ಸಂಬಂಧಿಸಿದವರು ಈ ಬಗ್ಗೆ ಗಮನಹರಿಸುತ್ತಾರೆಯೇ? ಕಾದು ನೋಡೋಣ. ಇದು ಒಂದರ್ಥದಲ್ಲಿ ಅರಣ್ಯ ರೋಧನ ಅಲ್ಲವೆ!!

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ರೈತರ ಸಂಕಷ್ಟ ಹೇಳತೀರದಾಗಿದೆ ನೆಮ್ಮದಿಯಾಗಿ ಕೃಷಿಕಾರ್ಯ ಮಾಡಲು ಆಗುತ್ತಿಲ್ಲ. ಒಂದೆಡೆ ಕಸ್ತೂರಿ ರಂಗನ್ ವರದಿ ತಲೆನೋವು, ಮತ್ತೊಂದೆಡೆ ಪ್ರಾಣಿಗಳ ಕಾಟ, ಪರಿಸರ ಅಸಮತೋಲನದಿಂದ ಸರಿ ಪ್ರಮಾಣದ ಮಳೆ ಕೊರತೆ ಹೆಚ್ಚಾದರೆ ಕೊಳೆ ಎಲ್ಲವನ್ನು ಎದುರಿಸುತ್ತಾ ದೈನಂದಿನ ಕೃಷಿ ಬದುಕು ಸಾಗಿಸಲು ಅರಣ್ಯ ಇಲಾಖೆಯವರ ಕಾಟ ಒಟ್ಟಿನಲ್ಲಿ ರೈತರು ಸಮಸ್ಯೆಗಳನ್ನು ಎದುರಿಸತ್ತಲೆ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ ಇಂತಹ ನೋವಿನ ಬದುಕಿನ ನಡುವೆ ಅರಣ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಮತ್ತಷ್ಟು ನೋಯಿಸುವುದು ಉಚಿತವಲ್ಲ ಮುಂದೆ ಇಂತಹ ಪ್ರಮೇಯ ಬರದಂತೆ ಎಚ್ಚರ ವಹಿಸಿ ಇಲ್ಲವಾದಲ್ಲಿ ಜಿಲ್ಲೆಯ ರೈತರ ತಾಳ್ಮೆಯ ಕಟ್ಟೆ ಒಡೆಯಲಿದೆ. ಹರಿಪ್ರಕಾಶ್ ಕೋಣೆಮನೆ ರಾಜ್ಯ ಬಿಜೆಪಿ ವಕ್ತಾರ,ಬೆಟ್ಟ ಹೋರಾಟ ಸಮಿತಿ ಪ್ರಮುಖ ಯಲ್ಲಾಪುರ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಜನಸ್ನೇಹಿ,ಜನಾನುರಾಗಿ ಎಸಿಎಫ್ ಹಿಮವತಿ ಭಟ್ ಪದೋನ್ನತಿಯೊಂದಿಗೆ ಗೌರವದ ವರ್ಗಾವಣೆ ಬೆಂಗಳೂರಿಗೆ.

ವಿಧಾನಪರಿಷತ್ ಮಾಜಿ ಸದಸ್ಯ “ಶಾಂತಾರಾಮ್ ಸಿದ್ದಿ” ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಯ ಕೆನರಾ ವೃತ್ತದಲ್ಲಿ ಉತ್ತಮ ಕರ್ತವ್ಯ …

Leave a Reply

Your email address will not be published. Required fields are marked *