
ಡೀಜಿ ದುಂಢಿ ವಜ್ರಳ್ಳಿ ಲೇಖನದಲ್ಲಿ
ಪ್ರತಿಧ್ವನಿ ಯಲ್ಲಾಪುರ : ಕೆಲವರು ಹುಟ್ಟಿನಿಂದಲೇ ಪ್ರತಿಭೆಯ ಕಿರೀಟ ಹೊತ್ತೇ ಬರುತ್ತಾರೆ.ಅದರಲ್ಲೂ ಪೂರಕವಾದ ಸಂಸ್ಕಾರವಂತ ಕುಟುಂಬದ ಹಿನ್ನೆಲೆ ಇದ್ದರೆ ವಜ್ರಕ್ಕೆ ಸಾಣೆ ಹಿಡಿದಾಗ ಪ್ರಜ್ವಲಿಸುವಂತೆ ಪ್ರತಿಭಾನ್ವಿತ ಪ್ರಜ್ವಲಿಸುತ್ತಾನೆ.
ಈ ದಿಸೆಯಲ್ಲಿ ನಾನೀಗ ಬರೆಯುತ್ತಿರುವುದು ಸ್ವಯಂ
ಪ್ರತಿಭೆ ಹಾಗೂ ಕುಟುಂಬದ ಹಿನ್ನೆಲೆಯಲ್ಲಿ ಮಿಂಚಿ ರೂಪುಗೊಂಡ ಜಿ ವಿ ಭಟ್ಟ ಅಡಿಕೆಮನೆ ಅವರ
ಬಗ್ಗೆ.
ಜಿವಿ ಭಟ್ ಅವರು ನಮ್ಮ(ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಗುತ್ತಿಗೆಗಿಟ್ಟಿಸಿಕೊಂಡ ) ಓರಿಯಂಟಲ್ ಕಂಪನಿಯಲ್ಲಿ ತನ್ನ ಪ್ರತಿಭೆಯಿಂದಲೇ ಉನ್ನತ ಹುದ್ದೆಗೆ ಸೇರಿಕೊಂಡು ಸಾಕಷ್ಟು ಗೌರವ ಕೈತುಂಬ ವೇತನ ಪಡೆಯುತ್ತಿರುವಾಗಲೇ ಊರಿನ ಸೇವಾ ಸಹಕಾರಿ ಸಂಘದಲ್ಲಿ ಹುದ್ದೆಯೊಂದು ಖಾಲಿ ಆಗಲಿದ್ದು ಒಬ್ಬ ದಕ್ಷ ವ್ಯಕ್ತಿಯ ಹುಡುಕಾಟದಲ್ಲಿ ಕಮಿಟಿಯವರು ಇದ್ದರು.
ರೈತರ ಸಮಸ್ಯೆಗಳ ಬಗ್ಗೆ ಅರಿವು ಇರುವ,ದಯೆ, ಕಾಳಜಿ ಇರುವ ಬಗೆಹರಿಸುವ ಚಾಣಾಕ್ಷ ದಕ್ಷ ವ್ಯಕ್ತಿಯೊಬ್ಬ ಬೇಕೆಂದು ಹುಡುಕುತ್ತಿರುವಾಗ ಹೊಳೆದದ್ದೇ ಜಿ ವಿ ಭಟ್ಟ ಅವರು.
ಅವರೂ ರೈತ ಕುಟುಂಬದಿಂದಲೇ ಬಂದವರಾಗಿದ್ದು ಸಮಸ್ಯೆ
ಅರಿತವರಾಗಿದ್ದರು. ಅವರಾಗಲೇ ಪ್ರಮೋಶನ್ ಹೊಂದಿ ಇನ್ನೂ ಉತ್ತಮ ಬದುಕು ಕಟ್ಟಿಕೊಳ್ಳಲುಬೇರೆ ರಾಜ್ಯದ ದಾರಿ ಹಿಡಿಯಲು ಸಿದ್ಧರಾಗಿದ್ದರು.ಓರಿಯಂಟಲ್ ಕಂಪನಿಯವರು ಒಬ್ಬ ದಕ್ಷ ಆಡಳಿತಗಾರನನ್ನು ಬಿಡಲು ಸಿಧ್ಧರಿರಲಿಲ್ಲ.
ಸಹಕಾರಿ ಸಂಘದವರು ಇವರ ಮನ ಒಲಿಸಲು ಬಂದಾಗ…..
ಒಂದು ಕಡೆ ಕುಟುಂಬ, ಊರು ಸೆಳೆತ ಇನ್ನೊಂದು ಕಡೆ ಉನ್ನತ ಹುದ್ದೆಯ ಆಕರ್ಷಣೆ. ಕೊನೆಗೆ ಹುಟ್ಟಿದ ನೆಲದಲ್ಲೇ ಸೇವೆ ಸಲ್ಲಿಸುವುದೇ ಸರಿ ಎಂದು ವಜ್ರಳ್ಳಿಯ ಸೇವಾ ಸಹಕಾರಿ
ಸಂಘದಲ್ಲಿ ವೃತ್ತಿ ಜೀವನ ಪ್ರಾರಂಭಿಸಿದರು.
ಸಹಕಾರಿ ಸಂಘದಲ್ಲಿ ಮುಖ್ಯ ಕಾರ್ಯ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುವುದು ಅಂದರೆ ತಂತಿಯಮೇಲೆ ನಡೆದಂತೆ.
ಯಾವ ರೈತರೂ ಆರ್ಥಿಕವಾಗಿ ಸಧ್ರಢರು ಅನ್ನುವಂತಿಲ್ಲ. ಎಲ್ಲೋ ಕೈ ಬೆರಳೆಣಿಕೆಯಷ್ಟು ಜನ ಸಾಲ ಮಾಡದೇ ಇರುವವರು ಕಾಣಬಹುದು. ಇಂತಹ ಬಡರೈತರು ಹಿಂದಿನ ಸಾಲವಿದ್ದರೂ ಮತ್ತೆ ಮತ್ತೆ ಸಾಲ ಪಡೆಯಲೇಬೇಕಾದ ಒತ್ತಡ ದಲ್ಲೇ ಇರುತ್ತಾರೆ.
ಕೊಡೋಣವೆಂದರೆ……ಹಿಂದಿನ ಸಾಲ ಬಾಕಿ. ಕೊಡದೇ ಇದ್ದರೆ
ಮನುಷ್ಯತ್ವ ಇಲ್ಲದವ. ವಸೂಲಿಗೆ ಹೋದರೆ ಮತ್ತೆ
ಅದೇ ಮಾತು. ವಸೂಲಿಗೆ – ಮೇಲಧಿಕಾರಿಗಳ , ಆಡಳಿತ
ಸಮಿತಿಯವರ, ಬ್ಯಾಂಕ್ ನವರ ಒತ್ತಡ. ಇಲ್ಲಿ
ರೈತರ ಗೋಳು ಹೀಗೆ ನಿಭಾಯಿಸುವುದು ತುಂಬಾ
ಕಠಿಣ ಕೆಲಸ.ಸಮತೋಲನ ಕಾದುಕೊಂಡು ಹೋಗಲು
ಹರ ಸಾಹಸ ಮಾಡಬೇಕು.ಇದೆಲ್ಲ ಸುಲಲಿತವಾಗಿ ನಡೆಸಿ ರೈತರ ಪ್ರೀತಿ ಗಳಿಸಿ ಅಧಿಕಾರಿಗಳ ಆದೇಶವನ್ನೂ ಮೀರದಂತೆ ಯಶಸ್ವಿಯಾಗಿತಂತಿ ನೆಡಿಗೆ ಪೂರೈಸಿದವರು ಜಿ ವಿ ಭಟ್ಟರು.
ಇವರ ಅನುಭವ, ಸಮಸ್ಯಾ ಪರಿಹಾರದ ಪರಿ ನೋಡಿ
ಸುತ್ತಲಿನ ಹೆಚ್ಚಿನ ಸಹಕಾರಿ ಸಂಘಗಳು ಸಲಹೆ ಪಡೆಯಲು ಬರುವುದನ್ನು ಕಂಡಿದ್ದೇನೆ.ಹಲವು ತರಬೇತಿ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ಅನುಭವ ದಾರೆ ಎರೆದಿದ್ದಾರೆ.ಈಗಾಗಲೇ ಇವರನ್ನು ಹಲವು ಸಂಘ
ಸಂಸ್ಥೆಗಳು ಸಮ್ಮಾನಿಸಿದ್ದು ಈಗ ದಿ.ಜಿ.ಎಸ.ಹೆಗಡೆ
ಅಜ್ಜಿಬಳ ಸ್ಮರಣಾರ್ಥ ಕೆಡಿಸಿಸಿ ಬ್ಯಾಂಕ್ ನವರು
ನೀಡುವ ಉತ್ತಮ ಸಹಕಾರಿ ನೌಕರ ಸಹಕಾರಿ ಪ್ರಶಸ್ತಿಗೆ
ಆಯ್ಕೆ ಆಗಿ ತಮ್ಮ ಕಿರೀಟಕ್ಕೆ ಇನ್ನೊಂದು ಗರಿ ಏರಿಸಿಕೊಂಡಿದ್ದಾರೆ. ನಮ್ಮೂರಿಗೊಂದು ಹೆಮ್ಮೆ
ತಂದ ಬಗ್ಗೆ ನಾವು ಹಾರ್ಧಿಕವಾಗಿ ಅಭಿನಂದಿಸುತ್ತೇವೆ.














Prathidvani Yellapura