Breaking News

ಜಿಲ್ಲೆಯ ಅಸ್ಮಿತೆಗಾಗಿ ಬಡವರಿಗಾಗಿ ಸದಾ ಮಿಡಿವ ಹೃದಯ ಕಸ್ತೂರಿ ರಂಗನ್ ವರದಿ ತಿರಸ್ಕಾರ – ಮನೆ ಕಂದಾಯ ನಿರಾಕರಣೆ ವಿರುದ್ದ ಸದನದಲ್ಲಿ ಧ್ವನಿ ಎತ್ತಿದ ನಮ್ಮ ಹೆಮ್ಮೆಯ ಶಾಸಕರು‌ ಹೆಬ್ಬಾರ್- ದ್ಯಾಮಣ್ಣ.


ಪ್ರತಿಧ್ವನಿ ಯಲ್ಲಾಪುರ : ಜಿಲ್ಲೆಯ ಮರಣ ಶಾಸನ ಎಂದೇ ಭಾವಿಸಿರುವ ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ ಅತಿಕ್ರಮಣ ಭೂಮಿಯಲ್ಲಿ ವಾಸಿಸುವವರ ಮನೆ ಕಂದಾಯ ನಿರಾಕರಿಸುತ್ತಿರುವ ಸರ್ಕಾರದ ನಡೆ ವಿರುದ್ದ ಸದನದಲ್ಲಿ ಧ್ವನಿ ಎತ್ತಿದ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಧೀಮಂತ ಶಾಸಕ ಶಿವರಾಮ ಹೆಬ್ಬಾರ್ ಜನ ಸಾಮನ್ಯರ ಜನನಾಯಕ ಎನ್ನುವುದಕ್ಕೆ ಜ್ವಲಂತ ನಿದರ್ಶನವಾಗಿದೆ ಎಂದು ಅಖಿಲ ಕರ್ನಾಟಕ ಅಹಿಂದ ವೇಧಿಕೆ ಸ್ಥಾಪಕಾಧ್ಯಕ್ಷ ದ್ಯಾಮಣ್ಣ ಬೋವಿ ವಡ್ಡರ್ ಪ್ರತಿಧ್ವನಿಗೆ ಮಾಹಿತಿ ನೀಡಿದ್ದಾರೆ.


ಶಾಸಕ ಶಿವರಾಮ ಹೆಬ್ಬಾರ್ ಶಾಸಕರಾದ ಯಾವುದೇ ಅವಧಿಯಲ್ಲಿ ಅಧಿಕಾರದಲಿದ್ದ ಯಾವುದೆ ಪಕ್ಷದ ನಾಯಕರೊಂದಿಗೆ ಆತ್ಮಿಯತೆಯಿಂದ‌ ಕ್ಷೇತ್ರದ ಕೆಲಸ ಕಾರ್ಯಗಳನ್ನು ಮಾಡಿಸುವುದು, ದೊಡ್ಡ ಪ್ರಮಾಣದ ಯೋಜನೆಗೆ ಅನುದಾನ ತರುವುದು ಅವರ ಉತ್ತಮ ರಾಜಕಾರಣದ ನಡೆಗಳಾಗಿವೆ.

ಈಗಲು ಸಹ ಅಧಿಕಾರದಲ್ಲಿರುವ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಆದಿಯಾಗಿ ಮಂತ್ರಿಗಳು ಹಾಗು ಶಾಸಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಜಿಲ್ಲೆಯ ಅಸ್ಮಿತೆ,ಪ್ರಗತಿ,ಅಭಿವೃದ್ಧಿ ವಿಚಾರದಲ್ಲಿ ಎಂದಿಗು ರಾಜಿಯಾದವರಲ್ಲ.


ಸದನದಲ್ಲಿ ಕಸ್ತೂರಿ ರಂಗನ್ ವರದಿ ನಮ್ಮ ಜಿಲ್ಲೆಗೆ ಎಷ್ಟು ಮಾರಕ ಎಂಬುದನ್ನು ಮನಮುಟ್ಟುವಂತೆ ಬಿಡಿಸಿಟ್ಟಿದ್ದಾರೆ, ಇಲ್ಲಿನ ವಾಸಿಗಳಿಗೆ ನೆಲದೊಂದಿಗಿನ ಭಾವನಾತ್ಮಕ ಸಂಬಂಧವನ್ನು ಹೃದಯಕ್ಕೆ ಮುಟ್ಟುವಂತೆ ಹೇಳಿದ್ದಾರೆ ಜೊತೆಯಲ್ಲಿ ಇಂತಹ ವಿಚಾರಗಳು ಬಂದಾಗ ನಮ್ಮ ಜಿಲ್ಲೆಯ ಎಲ್ಲಾ ಪಕ್ಷದ ಜನ ಪ್ರತಿನಿಧಿಗಳು ಒಂದೇ ಕುಟುಂಬ ಎಂಬುದನ್ನು ರಾಜ್ಯ ಶಕ್ತಿಸೌದಕ್ಕೆ ಮನದಟ್ಟಾಗುವಂತೆ ಹೇಳಿದ್ದಾರೆ.


ಅದಕ್ಕಾಗಿಯೇ ಕ್ಷೇತ್ರದ ಜನತೆ ಶಾಸಕ ಹೆಬ್ಬಾರ್ ಅವರನ್ನು ಅಷ್ಟೊಂದು ಪ್ರೀತಿಸುವುದು, ಅವರು ಯಾವುದೇ ಪಕ್ಷದಲಿದ್ದರು ಅವರನ್ನೆ ಬೆಂಬಲಿಸುವುದು, ಹೆಬ್ಬಾರ್ ಎಂದರೆ ಬಡಜನರ ಮನದಾಳ ಅರಿತ ನಾಯಕ ಅವರ ಇಂತಹ ಜನಪರ ನಡೆಯ ಪರವಾಗಿ ನಮ್ಮ ಅಹಿಂದಾ ವೇಧಿಕೆ ಬೆಂಬಲಿಸುತ್ತದೆ ಎಂದು ದ್ಯಾಮಣ್ಣ ಬೊವಿ ವಡ್ಡರ್ ಹೇಳಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಜನಸ್ನೇಹಿ,ಜನಾನುರಾಗಿ ಎಸಿಎಫ್ ಹಿಮವತಿ ಭಟ್ ಪದೋನ್ನತಿಯೊಂದಿಗೆ ಗೌರವದ ವರ್ಗಾವಣೆ ಬೆಂಗಳೂರಿಗೆ.

ವಿಧಾನಪರಿಷತ್ ಮಾಜಿ ಸದಸ್ಯ “ಶಾಂತಾರಾಮ್ ಸಿದ್ದಿ” ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಯ ಕೆನರಾ ವೃತ್ತದಲ್ಲಿ ಉತ್ತಮ ಕರ್ತವ್ಯ …

Leave a Reply

Your email address will not be published. Required fields are marked *