
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಮಳೆಗಾಲ ಪ್ರಾರಂಭವಾದಾಗಿನಿಂದ ಪ್ರವಾಸಿಗರ ಹಿತದೃಷ್ಟಿಯಿಂದ ಅಪಾಯಗಳು ಸಂಭವಿಸದಂತೆ ತಾಲೂಕಿನ ವಿವಿಧ ಪ್ರವಾಸಿ ತಾಣಗಳಿಗೆ ಅರಣ್ಯ ಇಲಾಖೆ ನಿರ್ಬಂಧ ಹೇರಲಾಗಿತ್ತು ಇದರ ವಿರುದ್ದ ವಿವಿಧ ಸಂಘ ಸಂಸ್ಥೆಗಳು, ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ಸೇರಿದಂತೆ ಪತ್ರಿಕೆ ಮತ್ತು ದೃಶ್ಯ ಮಾದ್ಯಮಗಳು ಹಾಗು ಯಲ್ಲಾಪುರ ಮಂಡಲ ಬಿಜೆಪಿ ನಿರ್ಬಂಧ ತೆರವುಗೊಳಿಸುತೆ ಆಗ್ರಹಿಸುತ್ತಾ ಬಂದಿತ್ತು ಸದ್ಯ ಅರಣ್ಯ ಇಲಾಖೆ ಇದಕ್ಕೆಲ್ಲಾ ಮಣಿದು ಮಳೆಯುಕಡಿಮೆಯಾದ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳ ನಿರ್ಬಂಧ ತೆರವುಗೊಳಿಸಿ ಆದೇಶ ಹೊರಡಿಸಿದೆ.

ಸಾತೊಡಿ, ಶಿರಲೆ,ಮಾಗೋಡು, ಕಾನೂರು,ಲಾಲಾಗುಳಿ, ಜೇನುಕಲ್ಲು ಗುಡ್ಡ, ಸೂರ್ಯ ಕಲ್ಯಾಣಿ ಗುಡ್ಡ, ಹೆಗ್ಗಾರ ಮನೆ ಗುಡ್ಡ, ಅತ್ತಿವೇರಿ ಪಕ್ಷಿಧಾಮ ಕಾಳಿನದಿ ಶಿವಪುರ ತೂಗು ಸೇತುವೆ ಸೇರಿದಂತೆ ಇತರೆ ಪ್ರೇಕ್ಷಣೀಯ ಸ್ಥಳಗಳಿಗಿದ್ದ ನಿರ್ಬಂಧ ತೆರವುಗೊಳಿಸಿದ್ದು ಪ್ರವಾಸಿಗರು ನಿಯಮಗಳು ಹಾಗು ಸೂಚನೆಗಳನ್ನು ಪಾಲಿಸಿ ಪ್ರಕೃತಿ ಸೌಂದರ್ಯ ಸವಿಯಬಹುದಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಿಂದ ಆದೇಶ ಹೊರಬಿದ್ದಿದೆ.













Prathidvani Yellapura