Breaking News

ಭಕ್ತಿಯೊಂದಿಗೆ ಜಾಗೃತಿ  ಅರಣ್ಯ ಇಲಾಖೆ ಆವರಣದ ಗಣಪನ ಅರ್ಥಪೂರ್ಣ ಆಚರಣೆ..

ಪ್ರತಿಧ್ವನಿ ಯಲ್ಲಾಪುರ : ಪ್ರತಿ ವರ್ಷದಂತೆ ಈ ವರ್ಷವು ಅರಣ್ಯ ಇಲಾಖೆ ಆವರಣದಲ್ಲಿ ಪರಿಸರ ಸ್ನೇಹಿ ಮತ್ತು ಪರಿಸರ ಜಾಗೃತಿ ಗಣಪನನ್ನು ಪ್ರತಿಷ್ಟಾಪಿಸಿ ಆರಾಧಿಸುತ್ತಿದ್ದು ಭಕ್ತಿಯೊಂದಿಗೆ ಜಾಗೃತಿ ಮೂಡಿಸುತ್ತಿರುವ ಗಣಪನನ್ನು ಕಾಣಲು ಯಲ್ಲಾಪುರ ಪಟ್ಟಣ ಮತ್ತು ಅಕ್ಕಪಕ್ಕದ ಹಳ್ಳಿಗಳಿಂದಲು ಭಕ್ತರು ಆಗಮಿಸಿ ಗಣಪನನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಅರಣ್ಯ ಇಲಾಖೆ ಗಜಾನನೋತ್ಸವ ಸಮಿತಿ ಯಲ್ಲಾಪುರ ವತಿಯಿಂದ ಸತತವಾಗಿ ಐದು ದಿನಗಳ ಕಾಲ
” ಮಾನವ-ವನ್ಯಜೀವಿ ಸಂಘರ್ಷ ತಡೆಯೋಣ,ಸಹಬಾಳ್ವೆಯ ಭವಿಷ್ಯ ಬಾಳೋಣ “ -ಎಂಬ ಧ್ಯೇಯ ವ್ಯಾಖ್ಯಾನಡಿ ಗಣಪತಿಯ ಆರಾಧನೆ ಜರುಗುತ್ತಿದೆ.

ವಿಭಾಗೀಯ ಕಚೇರಿಯ ಆವರಣದಲ್ಲಿ ಪ್ರವೇಶ ದ್ವಾರದಿಂದ ಗಣೇಶನ ಮಂಟಪದವರೆಗೂ ದಾರಿಯುದ್ಧಕ್ಕೂ ಜನಜಾಗೃತಿ ಮೂಡಿಸುವ ಫಲಕಗಳು ಅಳವಡಿಸಿ ಜನರಿಗೆ ಜಾಗೃತಿ ಮೂಡಿಸಲಾಗಿದೆ.

ಗಣೇಶನ ವೇದಿಕೆಗೆ ಮಾನವ – ವನ್ಯಜೀವಿ ಸಂಘರ್ಷದ ಕುರಿತು ಜನಜಾಗೃತಿ ಮೂಡಿಸುವ ಹಿನ್ನೆಲೆಯನ್ನು ಅಳವಡಿಸಿ ಸಾರ್ವಜನಿಕ ಭಕ್ತಾದಿಗಳಲ್ಲಿ ಅರಿವು ಮೂಡಿಸಿ ತುಂಬಾ ಅರ್ಥಪೂರ್ಣವಾಗಿ ಗಣೇಶೋತ್ಸವ ಆಚರಿಸಲಾಗುತ್ತಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಆರೋಗ್ಯ ಪ್ರಗತಿ ಪರಿಶೀಲನ ಸಭೆ.

ಪ್ರತಿಧ್ವನಿ ಯಲ್ಲಾಪುರ : ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬರೂ ಕಾಯ,ವಾಚ,ಮನಸಾ ಪರಿಶುದ್ದರಾಗಿ ಆತ್ಮ ಒಪ್ಪುವಂತೆ ಸೇವೆ ಸಲ್ಲಿಸ ಬೇಕಿದೆ, …

Leave a Reply

Your email address will not be published. Required fields are marked *