
ಪ್ರತಿಧ್ವನಿ ಯಲ್ಲಾಪುರ : ಬಹು ದೀರ್ಘಕಾಲದಿಂದ ಬೇಡಿಕೆ ಇಡುತ್ತಲೆ ಬಂದಿದ್ದ ಅರಣ್ಯ ಇಲಾಖೆಯಲ್ಲಿನ ಗಸ್ತು ಅರಣ್ಯ ಪಾಲಕ ಮತ್ತು ಅರಣ್ಯ ವೀಕ್ಷಕ ಹುದ್ದೆಗಳಲ್ಲಿ ಸಿದ್ದಿ ಬುಡಕಟ್ಟು ಜನಾಂಗದ ಯುವಕರಿಗೆ ವಿಶೇಷ ಪ್ರಾತಿನಿಧ್ಯ ನೀಡುವ ಕುರಿತು ರಾಜ್ಯದ ಕಾಂಗ್ರೆಸ್ ಸರ್ಕಾರ ಮಹತ್ವದ ಹೆಜ್ಜೆ ಇಟ್ಟು ನೇಮಕಾತಿ ನಿಯಮದಲ್ಲಿ ತಿದ್ದುಪಡಿ ತಂದು ಐತಿಹಾಸಿಕ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದ ದಿಟ್ಟ ನಿರ್ಧಾರಕ್ಕೆ ಸಿದ್ದಿ ಸಮುದಾಯದವರು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಯಾವುದೇ ಸರ್ಕಾರ ಇದ್ದಾಗಲು ಅರಣ್ಯ ಮಂತ್ರಿ ಮತ್ತು ಮುಖ್ಯಮಂತ್ರಿ ಗಳಿಗೆ ಈ ವಿಚಾರದ ಕುರಿತು ಮನವಿ ಮಾಡುತ್ತಲೆ ಬಂದ ಪ್ರಯತ್ನ ಫಲ ನೀಡಿದೆ.

ಇಂತಹ ದೃಡ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಸಿದ್ದಿ ಸಮುದಾಯದ ಪರ ಧ್ವನಿ ಎತ್ತಿದ ಎಲ್ಲಾ ಶಾಸಕರು,ಮಂತ್ರಿಗಳು ಹಾಗು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಸರ್ವರಿಗು ವಿಶೇಷವಾಗಿ ನಾಡಿನ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಸಿದ್ದಿ ಸಮುದಾಯದ ಪರವಾಗಿ ಸಿದ್ದಿ ಯುವ ವೇಧಿಕೆ ಅನಂತಾನಂತ ಧನ್ಯವಾದಗಳನ್ನು ಅರ್ಪಿಸಿದೆ

ಸಿದ್ದಿ ಸಮುದಾಯ ವಿಶೇಷವಾಗಿ ಕಾಡಿನಲ್ಲೆ ವಾಸಿಸುತ್ತಾ ಕಾಡನ್ನೆ ತಮ್ಮ ಜೀವನಾಡಿಯಾಗಿಸಿಕೊಂಡಿದ್ದಾರೆ ಅಲ್ಲದೆ ಕಾಡಿನ ಪ್ರತಿ ಮೂಲೆ ಮೂಲೆಯು ಚಿರಪರಿಚಿತ ಹಾಗು ಪ್ರಾಣಿಗಳೊಂದಿಗೆ ಪ್ರೀತಿ ಸಂಬಂಧವಿದೆ ಇಂತಹ ವನವಾಸಿ ವನಪ್ರೇಮಿ ಸಿದ್ದಿ ಸಮುದಾಯದ ಯುವಕರು ಅರಣ್ಯದೊಳಗಿನ ಕೆಲಸಕ್ಕೆ ಸೂಕ್ತವಾಗಿದ್ದು ಸಮುದಾಯದ ಯುವಕರಿಗೆ ವಿಶೇಷ ಆದ್ಯತೆ ನೀಡಬೇಕೆಂಬ ಕೂಗು ಬಹು ದಶಕಳಿಂದಲು ಕೇಳುತ್ತಾ ಬಂದಿದ್ದೆವು ಆ ಕನಸು ಈಗ ನನಸಾಗಿದೆ ಸಮುದಾಯದ ಪರ ಧ್ವನಿ ಎತ್ತಿದ ಸರ್ವರಿಗು ಧನ್ಯವಾದಗಳು. ರಾಮನಾಥ ಸಿದ್ದಿ ,ಲ್ಯಾಂಪ್ ಸೊಸೈಟಿ ಅಧ್ಯಕ್ಷ,ಯಲ್ಲಾಪುರ












Prathidvani Yellapura