
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಬಾರಿ ಸದ್ದು ಮಾಡಿ ಇಂದಿಗೂ ಸುದ್ದಿಯಲ್ಲಿರುವ ಹುಟಕಮನೆ ಗುಡ್ಡ ನೆಲಸಮ ಹಾಗು ಅರಣ್ಯ ನಾಶಕ್ಕೆ ಸಂಬಂಧಿಸಿದ ಜಮೀನು ವಿವಾದ ಬೆಂಗಳೂರಿನ ಭೂ ವ್ಯಾಜ್ಯ ನ್ಯಾಯಾಲಯದಲ್ಲಿರುವಂತೆಯೆ ಖಾತಾ ಬದಲಾವಣೆಗೆ ಅರ್ಜಿ ಸಲ್ಲಿಸಿರುವುದರ ವಿರುದ್ದ ಆಕ್ಷೇಪಣೆ ಸಲ್ಲಿಸಿ ಮತ್ತೆ ಹೋರಾಟಕ್ಕೆ ಸಾಮಾಜಿಕ ಹೋರಾಟಗಾರ ಮಂಜುನಾಥ ವಿ ಹೆಗಡೆ ಬಾಳಗಿಮನೆ ಇಳಿದಿದ್ದಾರೆ.


ಹುಟಕಮನೆ ಗ್ರಾಮದ ಸರ್ವೆ ನಂಬರ್ 61/6 ಈ ಜಾಗದ ಮಾಲಿಕರು ದೀಪಕ್ ಪುಂಡಲೀಕ ನಾಯ್ಕ್ ಎಂಬುವರು ಅರಣ್ಯ ಇಲಾಖೆ ಜಾಗವನ್ನು ಅತಿಕ್ರಮಣ ಮಾಡಿ ಅಪಾರ ಪ್ರಮಾಣದ ಅರಣ್ಯ ಸಂಪತ್ತನ್ನು ನಾಶ ಮಾಡಿ ಬಾರಿ ಪ್ರಮಾಣದ ಮಣ್ಣನ್ನು ಸ್ಲಾಹಿಡಿಂಗ್ ಮಾಡಿ ಅಕ್ರಮ ಎಸಗಿದ್ದಾರೆ. ಈ ಕುರಿತು ಪ್ರಕರಣ ಬೆಂಗಳೂರಿನ ” ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ” ದಲ್ಲಿ ವಿಚಾರಣೆ ಹಂತದಲ್ಲಿರುವಂತೆ ಖಾತಾ ಬದಲಾವಣೆ ಕೋರಿ ಅರ್ಜಿ ಸಲ್ಲಿಸಿರುವುದು ಅಕ್ಷಮ್ಯ ಅಪರಾದವಾಗಲಿದೆ. ಹಾಗು ಭೂ ಕಬಳಿಕೆ ಅಕ್ರಮ ಎಸಗಿದ ವ್ಯಕ್ತಿ ತಪ್ಪಿಸಿ ಕೊಳ್ಳುವ ಸಾದ್ಯತೆ ಇದ್ದು ಖಾತ ಬದಲಾವಣೆಗೆ ನನ್ನ ತಕರಾರಿದೆ ಹಾಗು MR H4 ನನ್ನ ತಕರಾರಿದೆ ಎಂದು ಸಾಮಾಜಿಕ ಹೋರಾಟಗಾರ ಈ ಪ್ರಕರಣದ ನ್ಯಾಯಾಲಯದ ಮೆಟ್ಟಿಲೇರಿದ ಮಂಜುನಾಥ ವಿ.ಹೆಗಡೆ ಬಾಳಗಿಮನೆ ಅವರು ಯಲ್ಲಾಪುರ ತಹಶಿಲ್ದಾರರ ಕಚೇರಿಯಲ್ಲಿರುವ ಭೂಮಿ ಕೇಂದ್ರದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಪ್ರತಿಯನ್ನು ಮಾಹಿತಿ ಹಾಗು ಕಾನೂನು ಕ್ರಮಕ್ಕಾಗಿ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಬೆಂಗಳೂರು, ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ಜಿಲ್ಲಾಧಿಕಾರಿಗಳು ಉತ್ತರ ಕನ್ನಡ, ಪತ್ರಿಕಾ ವರದಿಗಾರರು ಯಲ್ಲಾಪುರ, ಉತ್ತರ ಕನ್ನಡ, ಬೆಂಗಳೂರು ಇವರಿಗೆ ರವಾನಿಸಲಾಗಿದೆ ಎಂದು ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ವ್ಯವಸ್ಥೆಯಲ್ಲೆ ಎಷ್ಟೊಂದು ಲೋಪವಿದೆ ಎಂಬುದು ಮನಸ್ಸಿಗೆ ಬೇಸರವಾಗುತ್ತದೆ. ನೈಸರ್ಗಿಕವಾಗಿ ಬೆಳೆದು ನಿಂತಿದ್ದ ಬೃಹತ್ ಗುಡ್ಡ ,ಅದರಲ್ಲಿರುವ ಬೆಲೆ ಬಾಳುವ ಅರಣ್ಯ ಸಂಪತ್ತು ನಾಶ ಪಡಿಸಿ ಸಾವಿರಾರು ಲೋಡ್ ಮಣ್ಣನ್ನು ಅಕ್ರಮವಾಗಿ ಸಾಗಿಸಿದ್ದು ಜಗಜ್ಜಾಹಿರಾಗಿ ಮಾದ್ಯಮಗಳಲ್ಲೆಲ್ಲಾ ಬಂದರು ಸಂಬಂಧಿಸಿದ ಇಲಾಖೆಗಳು ಕಣ್ಮುಚ್ಚಿ ಕುಳಿತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಇದರಿಂದ ನನಗೆ ವೈಯಕ್ತಿಕವಾಗಿ ಯಾವುದೆ ಪ್ರಯೋಜನವಿಲ್ಲ ಆದರೆ ಸರ್ಕಾರದ ಸ್ವತ್ತನ್ನು ಈ ರೀತಿ ಉಳ್ಳವರು ಕೊಳ್ಳೆ ಹೊಡೆದರೆ ಹೇಳುವವರು ಕೇಳುವವರು ಇಲ್ಲದಂತಾಗಿರುವುದು ದುರ್ದೈವದ ಸಂಗತಿಯಾಗಿದೆ.ಕೇವಲ ವಾಸಕ್ಕಾಗಿ ಸಣ್ಣ ಜಾಗ ಮಾಡಿದರೆ ಬಡವರ ಗುಡಿಸಲು ಕೀಳುವ ಸರ್ಕಾರ ಮೌನವೇಕಿದೆ ಎಂಬುದು ಹೋರಾಟಗಾರನಾದ ನನ್ನ ಪ್ರಶ್ನೆಯಾಗಿದೆ. ಇದರಲ್ಲಿರುವ ಸತ್ಯಾಂಶವನ್ನು ಜನರ ಮುಂದೆ ತರುವವರೆಗೆ ನಾನು ಸೋಲುವುದಿಲ್ಲ ನನ್ನ ಹೋರಾಟ ನಿರಂತರ, ಮಂಜುನಾಥ ವಿ ಹೆಗಡೆ, ಸಾಮಾಜಿಕ ಹೋರಾಟಗಾರ, ಬಾಳಗಿಮನೆ, ಯಲ್ಲಾಪುರ











Prathidvani Yellapura