
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಮದನೂರ ಗ್ರಾಮ ಪಂಚಾಯತ ವ್ಯಾಪ್ತಿಯ ಹುಣಶೆಟ್ಟಿಕೋಪ್ಪ ಮಜರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತ ಬಂದಿದ್ದು ಕಳೆದ ಬೇಸಿಗೆಯಲ್ಲಿ ಹಿಂದಿನ ಗ್ರಾಮ ಪಂಚಾಯತ ಆಡಳಿತ ಕಮಿಟಿ ಅವಧಿಯಲ್ಲಿ 2 ಬೋರವೆಲ್ ಕೊರೆದರು ಯಾವುದೇ ನೀರಿನ ಜಲ ಬಿಳದಿರುವುದು ಗ್ರಾಮಸ್ಥರ ನಿರಾಶೆಗೆ ಕಾರಣವಾಗಿತ್ತು.

ಈ ಸಮಸ್ಯೆಯನ್ನು ಸ್ಥಳೀಯ ಮುಖಂಡರುಗಳಾದ ವಿನಾಯಕ್ ತಿನ್ನೇಕರ, ಸಂಜಯ್ ತಿನ್ನೇಕರ, ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರು ರಾಜೇಶ್ ತಿನ್ನೇಕರ್, ಪಾಂಡು ಶಿಂದೆ, ಮಾರುತಿ ಕಳಸೂರಕರ, ಬಸವರಾಜ ಕಳಸೂರಕರ,ರೀಗನ್ ಡಿಸೋಜ ಹಾಗೂ ಊರಿನ ಹಿರಿಯರು ಶಾಸಕ ಶಿವರಾಮ ಹೆಬ್ಬಾರ್ ಮತ್ತು ಸ್ಥಳೀಯ ನಾಯಕ ವಿಜಯ್ ಮಿರಾಶಿ ಅವರ ಗಮನಕ್ಕೆ ತಂದ ಕೂಡಲೇ ಕುಡಿಯುವ ನೀರಿಗಾಗಿ ಬೋರ್ ಕೊರೆಸಿದ್ದು ಗಂಗಾ ಮಾತೆಯ ದಯೆಯಿಂದ 3 ಇಂಚು ನೀರು ಬಿದ್ದಿದ್ದು ಗ್ರಾಮಸ್ಥರ ಆನಂದಕ್ಕೆ ಪಾರವೆ ಇಲ್ಲದಂತಾಗಿದೆ.

ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿಕೊಟ್ಟ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಜಿಲ್ಲಾ ಪಂಚಾಯತ ಮಾಜಿ ಸದಸ್ಯರು ಸ್ಥಳೀಯ ಮುಖಂಡ ವಿಜಯ್ ಮೀರಾಶಿ ರವರಿಗೆ ಹುಣಶೆಟ್ಟಿಕೋಪ್ಪದ ಸರ್ವ ಗ್ರಾಮಸ್ತರು ಕೃತಜ್ಞತೆ ಸಲ್ಲಸಿದ್ದಾರೆ.











Prathidvani Yellapura