Breaking News

ಖರ್ಗೆ ಕೋಮು ಪ್ರಚೋದನೆ ಭಾಷಣಕ್ಕೆ ಬಿಜೆಪಿ ಕೆಂಡಾಮಂಡಲ   ಎಫ್ ಐ ಆರ್ ದಾಖಲಿಸಲು ಆಗ್ರಹ.

ಪ್ರತಿಧ್ವನಿ ಯಲ್ಲಾಪುರ : ಇತ್ತೀಚಿನ ಕೆಲ ದಿ‌ಗಳ ಹಿಂದೆ ಅಸ್ಸಾಂ ಚುನಾವಣ ಪ್ರಚಾರ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಯವರು ಕೋಮು ಪ್ರಚೋದನೆ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಯಲ್ಲಾಪುರ ಬಿಜೆಪಿ ಯುವಮೋರ್ಚಾ ವತಿಯಿಂದ ಯಲ್ಲಾಪುರ ಪೋಲಿಸ್ ಠಾಣೆಗೆ ತೆರಳಿ ಎಫ್.ಐ.ಆರ್ ಹಾಕುವಂತೆ ಆಗ್ರಹಿಸಲಾಯಿತು.


ಕುರಾನ್ ನಲ್ಲಿ ಬರೆದಿರುವಂತೆ ” ನಮಾಝ್ ಮಾಡುವ ವೇಳೆ ವಿಷಸರ್ಪ ಬಂದರೆ ಕೊಲ್ಲಬೇಕು ಆರ್.ಎಸ್.ಎಸ್ ಮತ್ತು ಬಿಜೆಪಿ ಆದೇ ರೀತಿಯ ವಿಷಸರ್ಪಗಳು ಅದನ್ನು ಕೊಲ್ಲಬೇಕು ಎಂಬುದಾಗಿ ಹೇಳುವ ಮೂಲಕ ಬಿಜೆಪಿ ಮತ್ತು ಆರ್ ಎಸ್ ಎಸ್ ಸದಸ್ಯರ ಜೀವಲ್ಕೆ ಅಪಾಯ ತಂದೊಡ್ಡಿದ್ದಾರೆ ಈ ಕುರಿತಾದ ಪ್ರಚೋದನಕಾರಿ ಭಾಷಣ ಮಾಡಿದ ಮೇಲೆ ಪೊಲೀಸರು ಔಪಚಾರಿಕ ದೂರು ದಾಖಲೆಗಾಗಿ ಕಾಯದೆ ಸುಮೊಟೊ ಮೂಲಕ ಎಫ್.ಐ.ಆರ್ ದಾಖಲಿಸಲು ಅವಕಾಶವಿದೆ. ಆದರು ಏಕಿನ್ನು ಎಫ್.ಐ.ಆರ್ ಹಾಕಿಲ್ಲ ಎಂಬುದು ಯುವಮೋರ್ಚ  ಪ್ರಶ್ನೆಯಾಗಿದೆ.


ಮಲ್ಲಿಕಾರ್ಜುನ ಖರ್ಗೆ ಅವರು ಒಂದು ರಾಷ್ಟ್ರೀಯ ಪಕ್ಷದ ಪ್ರಮುಖ ಸ್ಥಾನದಲಿದ್ದು ಇಂತಹ ಕೋಮು ಪ್ರಚೋದನ ಹೇಳಿಕೆ ಸಾಧುವಲ್ಲ. ಇದರಿಂದ ದೇಶದಲ್ಲಿ ಅಶಾಂತಿ ಮನೆ ಮಾಡಲಿದೆ ಈ ಎಲ್ಲಾ ಕಾರಣಗಳಿಂದ ಕ್ರಮ ಜರುಗಿಸಲೇಬೇಕಿದೆ ಎಂದು ಆಗ್ರಹಿಸಿ ಮನವಿ ಪತ್ರವನ್ನು ಯಲ್ಲಾಪುರ ಠಾಣೆಗೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಯಲ್ಲಾಪುರ ಮಂಡಲಾಧ್ಯಕ್ಷ ಪ್ರಸಾದ್ ಹೆಗಡೆ, ಯುವಮೋರ್ಚ ಅಧ್ಯಕ್ಷ ರಜತ್ ಬದ್ದಿ, ನಿಕಟಪೂರ್ವ ಅಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್,
ಪದಾಧಿಕಾರಿಗಳಾದ ಸೋಮೇಶ್ವರ ನಾಯ್ಕ,ವಿನೋದ ತಳೇಕರ, ರವಿ ದೇವಡಿಗ, ವಿಠ್ಠು ಶೆಲ್ಕೆ,ಹಿರಿಯ ವಕೀಲರಾದ ಗಣೇಶ ಪಾಟಣಕರ, ಅರುಣ ಶೆಟ್ಟಿ,ರಾಜೇಷ ಭಟ್ಟ,ಸುಧೀರ ಆಚಾರಿ,ನಾಗಾರ್ಜುನ ಬದ್ದಿ,ಉದಯ ಮಂಡಗೋಡ್ಲಿ,ವಿಜು ಅಂಕೋಲೆಕರ ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಸೃಜನಶೀಲತೆಯು ವಿದ್ಯಾರ್ಥಿಗಳ ಸಾಧನೆಯ ಪ್ರತಿಬಿಂಬವಾಗಿದೆ – ರೇಖಾ ನಾಯ್ಕ್.ಬಿ.ಇ.ಒ

ಪ್ರತಿಧ್ವನಿ ಯಲ್ಲಾಪುರ : ಗ್ರಾಮೀಣ ಪ್ರದೇಶದಲ್ಲಿನ ಕಲಿಕೆ ಅನನ್ಯವಾದ ಅನುಭವ ನೀಡುತ್ತದೆ.ಶಿಕ್ಷಕ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಿ …

Leave a Reply

Your email address will not be published. Required fields are marked *