Breaking News

ಯಲ್ಲಾಪುರದಲ್ಲಿ ನಡೆದ HESCOM POWER CUP -2026 ಸೌಹಾರ್ದ ಕ್ರಿಕೇಟ್ ಪಂದ್ಯಾವಳಿ

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕಾಳಮ್ಮ ನಗರ ತಾಲೂಕು ಕ್ರೀಡಾಂಗಣದಲ್ಲಿ ಯಲ್ಲಾಪುರ ಹೆಸ್ಕಾಂ ವತಿಯಿಂದಹೆಸ್ಕಾಂ ಪವರ್ ಕಪ್ – 2026 ” ಸೌಹಾರ್ದ ಕ್ರಿಕೇಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಪಂದ್ಯವನ್ನು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಮಾಕಾಂತ ನಾಯ್ಕಉದ್ಘಾಟಿಸಿದರು. ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಛಾಯಪ್ಪ ಮುರಡಿ ಆಟಗಾರರನ್ನುಪರಿಚಯಿಸಿದರು.ಸಹಾಯಕ ಲೆಕ್ಕಾಧಿಕಾರಿ ವಿನಯ್ ಶೇಟ್ ಆಟಗಾರರನ್ನು ಅಭಿನಂದಿಸಿದರು

ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷ ಶೇಖರ್, ಮಂಚಿಕೇರಿ ಶಾಖಾಧಿಕಾರಿ ನಾಗರಾಜ್ ಆಚಾರಿ,ಕಿರುವತ್ತಿ ಶಾಖಾಧಿಕಾರಿ ವಿಶಾಲ್, ಗ್ರಾಮೀಣ ಶಾಖಾಧಿಕಾರಿ ಲಕ್ಷ್ಮಣ ಜೋಗಳೇಕರ, ಲೇಕ್ಕಾಧಿಕಾರಿ ವಿನಾಯಕ ಶೇಟ,ಕಂದಾಯ ಇಲಾಖೆಯ ವಿನಯ ನಾಯ್ಕ, ಹಾಗೂ ನಿರ್ಣಾಯಕರಾಗಿ ನೀಲಕಂಠ, ವಿಕ್ರಮ್, ಸ್ಕೋರರ್ ನವಾಜ್ ಕಾರ್ಯ ನಿರ್ವಹಿಸಿದರು.

ಸೌಹಾರ್ಧಯುತವಾಗಿ ಪ್ರಾರಂಭವಾದ ಕ್ರಿಕೇಟ್ ಪಂದ್ಯಾವಳಿ ಪ್ರತಿ ಪಂದ್ಯಗಳು ರೋಚಕವಾಗಿದ್ದವು. ಕೊನೆಯಲ್ಲಿ ಫೈನಲ್ ಪಂಧ್ಯ ರಾಯಲ್ ರೆವಿನ್ಯೂ ಮತ್ತು ಮಂಚಿಕೇರಿ ಚಾಲೆಂಜರ್ಸ್ ತಂಡಗಳ ನಡುವೆ ಮೈ ನವಿರೇಳಿಸುವಂತಹ ಪ್ರದರ್ಶನಕ್ಕೆ ಸಾಕ್ಷಿಯಾಯಿತು‌ ಅಂತಿಮವಾಗಿ ರಾಯಲ್ ರೆವಿನ್ಯೂ ತಂಡ ಗೆಲುವಿನ ನಗೆ ಬೀರಿ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿತು. ಮಂಚಿಕೇರಿ ಚಾಲೆಂಜರ್ಸ್ ತಂಡ ಕಠಿಣ ಸವಾಲು ಎದುರಿಸಿ ದ್ವಿತೀಯ ಸ್ಥಾನ ಪಡೆಯಿತು.

ಪಂದ್ಯಾವಳಿ ಯಲ್ಲಿ ಒಟ್ಟು 6 ತಂಡಗಳು ಸೆಣೆಸಾಟ ನಡೆಸಿದವು ಕೊನೆಯಲ್ಲಿ ರಾಯಲ್ ರೆವಿನ್ಯೂ ತಂಡ ಜಯಶಾಲಿಯಾಗಿ ಪ್ರಥಮ ಸ್ಥಾನ ಪಡೆದರೆ ರನ್ನರ್ ಅಪ್ ಆಗಿ ಮಂಚಿಕೇರಿ ಚಾಲೆಂಜಸ್೯ ದ್ವಿತೀಯ ಸ್ಥಾನ ಪಡೆದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಹರಳಯ್ಯಸ್ತ್ರೀ ಶಕ್ತಿ ಸಂಘದಿಂದ ಅಂಬೇಡ್ಕರ್ ಜಯಂತಿ  ಆಚರಣೆ.

ಪ್ರತಿಧ್ವನಿ ಯಲ್ಲಾಪುರ :  14.4.2026 ರಂದು ಶಾರದಾಗಲ್ಲಿ ಅಂಬೇಡ್ಕರ್ ಭವನದಲ್ಲಿ ಹರಳಯ್ಯಸ್ತ್ರೀ ಶಕ್ತಿ ಸಂಘದಿಂದ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.    …

Leave a Reply

Your email address will not be published. Required fields are marked *