Breaking News

ಯಡಳ್ಳಿ ಶ್ರೀ ರಾಮನಾಥೇಶ್ವರ ದೇವಸ್ಥಾನ ಶಿಲಾಮಯ ದೇಗುಲ ಏ,26,27,28 ರಂದು ಪುನರ್ ಪ್ರತಿಷ್ಟಾಪನೆ.

ಪ್ರತಿಧ್ವನಿ ಯಲ್ಲಾಪುರ : ಇದೇ ಬರುವ ಏಪ್ರಿಲ್ ತಿಂಗಳಿನ 26 ,27 ,28, /2026ರಂದು ಯಡಳ್ಳಿ ಯಲ್ಲಿ ನಡೆಯುವ ಶ್ರೀ ರಾಮನಾಥೇಶ್ವರ ದೇವಸ್ಥಾನದ ಶಿಲಾಮಯ, ನೂತನ ಕಟ್ಟಡದ ಪುನರ್ ಪ್ರತಿಷ್ಠಾಪನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,
ಆಮಂತ್ರಣ ಪತ್ರಿಕೆಯನ್ನ ಊರಿನ ಹಿರಿಯರೆಲ್ಲ ಸೇರಿ ವಿದ್ಯುಕ್ತವಾಗಿ ಬಿಡುಗಡೆಗೊಳಿಸಿದರು.


ಈ ಸಂದರ್ಭದಲ್ಲಿ ,ಎಂ ಕೆ ಭಟ್ ಯಡಳ್ಳಿ, ಶಿವಕುಮಾರ್ ಭಟ್, ಯಡಳ್ಳಿ, ರಾಮಕೃಷ್ಣ ಭಟ್ , ಬಿ ಕೆ ಭಟ್ ಯಡಳ್ಳಿ ಮಂಜುನಾಥ್ ಗೌಡ ಕೃಷ್ಣಮೂರ್ತಿ ಶಾಸ್ತ್ರಿ, ಮಹಾಲಕ್ಷ್ಮಿ ಭಟ್, ಮಧುರ ಶಾಸ್ತ್ರಿ, ನಾಗವೇಣಿ ಭಟ್, ವಿದ್ಯಾ ಭಟ್, ಇನ್ನು ಅನೇಕರು ಹಾಜರಿದ್ದು ಬಿಡುಗಡೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ದಿನಾಂಕ 26, 27, 28ರಂದು ಶ್ರೀ ಗಣಪತಿ ಭಟ್ ಹಿರೇ ಗೋಕರ್ಣ, ಹಾಗೂ, ಶ್ರೀ ಮಾದೇವ ಭಟ ಹಿಟ್ಲಳ್ಳಿ ಇವರ ನೇತೃತ್ವದಲ್ಲಿ, ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ.
ಹಾಗೇನೇ 26ರಂದು ಸಂಸ್ಕೃತಿಕವಾಗಿ ಭಗವದ್ಗೀತಾ ಪಠಣ, ಮತ್ತು ಸ್ಥಳೀಯ ಕಲಾವಿದರುಗಳಿಂದ. ಭಜನಾ ಕಾರ್ಯಕ್ರಮ ಇರುತ್ತದೆ.
27ನೇ ತಾರೀಕಿನಂದು ಮಧ್ಯಾಹ್ನ, ವಿದ್ವಾನ್ ಗೋಪಾಲಕೃಷ್ಣ ಭಟ್ ಹಂಡ್ರಮನೆ ಇವರಿಂದ ಪ್ರವಚನ ಇರುತ್ತದೆ.
ಹಾಗೇನೇ 28 ನೇ ತಾರೀಖಿನಂದು, ಬೆಳಿಗ್ಗೆ 11 ಗಂಟೆಗೆ ,ಶ್ರೀಮದ್, ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಪಾದಪೂಜೆ, ಕುಂಭಾಭಿಷೇಕ, ಮತ್ತು ಮಹಾ ಮಂತ್ರಾಕ್ಷತೆ, ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಲಿದೆ.

ಮಧ್ಯಾಹ್ನ 3:00 ಗಂಟೆಯಿಂದ ಸುದರ್ಶನ ಭಜನಾ ಮಂಡಳಿ ಉಮ್ಮಚ್ಚಗಿ, ಇವರಿಂದ ಭಜನಾ ಕಾರ್ಯಕ್ರಮ.
ನಂತರ 4:00  ರಾಮಕೃಷ್ಣ ಭಟ್ ಮೊಕ್ತೇಸರರು, ಶ್ರೀ ರಾಮನಾಥೇಶ್ವರ ದೇವಸ್ಥಾನ, ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ.
ಶಿವರಾಮ್ ಹೆಬ್ಬಾರ್ ಶಾಸಕರು ಯಲ್ಲಾಪುರ ವಿಧಾನಸಭಾ ಕ್ಷೇತ್ರ, ಹಾಗೂ  ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದರು ಭಾರತ ಸರ್ಕಾರ, ಹಾಗೂ ಶಾಂತರಾಮ್ ಸಿದ್ದಿ ವಿಧಾನಪರಿಷತ್ ಸದಸ್ಯರು,  ಪ್ರಮೋದ್ ಹೆಗಡೆ, ಅಧ್ಯಕ್ಷರು ಸಂಕಲ್ಪ ಸೇವಾ ಸಂಸ್ಥೆ, ಮತ್ತು ಭರತಹಳ್ಳಿ ಸೀಮಾ ಪರಿಷತ್ತಿನ ಉಪಾಧ್ಯಕ್ಷರಾದ ಜಿ ಎಸ್ ಹೆಗಡೆ ಇವರೆಲ್ಲರೂ ಆಗಮಿಸುತ್ತಿದ್ದು, ಅಂದು  ಜಿ. ಎನ್ ಹೆಗಡೆ ಹಿರೇಸರ, ಹಾಗೂ ಆರ್ ಎನ್ ಹೆಗಡೆ ಗೋರ್ಸಗದ್ದೆ, ತಿಮ್ಮಪ್ಪ ಭಟ್ ಕೋಟೆ ಮನೆ, ಡಿ ಜಿ ಭಟ್ ಹುಬ್ಬಳ್ಳಿ ಇವರನ್ನು ಸನ್ಮಾನಿಸಲಾಗುವುದು. ಸಂಜೆ 6:00 ಯಿಂದ ನಾರಾಯಣ ದಾಸ್ ಹಿಪನಹಳ್ಳಿ ಇವರಿಂದ ಕೀರ್ತನೆ.
ಹಾರ್ಮೋನಿಯಂ ನಲ್ಲಿ ಕೆ ಪಿ ಹೆಗಡೆ ದಾಸನಕೊಪ್ಪ, ತಬಲಾದಲ್ಲಿ, ಕಿರಣ್ ಹೆಗಡೆ ಕಾನ್ಗೋಡ್, ಇವರುಗಳು ಭಾಗವಹಿಸಲಿದ್ದಾರೆ.
ಎಲ್ಲರಿಗೂ ಆಮಂತ್ರಣ ತಲುಪುವಂತ ವ್ಯವಸ್ಥೆಯಾಗಬೇಕೆಂದು ಕಟ್ಟಡ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ,ಎಂ ಕೆ ಭಟ್ ಯಡಳ್ಳಿ ಅವರು ಕರೆ ನೀಡಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಿಜೆಪಿ ವತಿಯಿಂದ ಸಂವಿಧಾನ ಶಿಲ್ಪಿ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ..

ಪ್ರತಿಧ್ವನಿ ಯಲ್ಲಾಪುರ: ಭಾರತದ ಸಂವಿಧಾನ ಶಿಲ್ಪಿ,ಸಾಮಾಜಿಕ ನ್ಯಾಯದ ಹರಿಕಾರರು,ಶೋಷಿತರ ದ್ವನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಭಾರತೀಯ ಜನತಾ ಪಾರ್ಟಿ …

Leave a Reply

Your email address will not be published. Required fields are marked *