Breaking News

ಒಲ್ಲದ ಮದುವೆಗೆ ಮನೆ ಬಿಟ್ಟ ಅಣ್ಣ – ಹುಡುಕಿ ಕೊಡುವಂತೆ ಕಂಪ್ಲೇಂಟ್ ಕೊಟ್ಟ ತಮ್ಮ!!.

ಪ್ರತಿಧ್ವನಿ ಯಲ್ಲಾಪುರ : ಅವನದು ಕಾರ್ಪೆಂಟರ್ ವೃತ್ತಿ ತಾಲ್ಲೂಕಿನ ವಡೇಹುಕ್ಕಳಿ ಸಮೀಪ ಕನ್ನಡಗಲ್ ಚಿನ್ನೆಹುಕ್ಕಳ್ಳಿ ಗ್ರಾಮದವನು ಮದುವೆ ಒಲ್ಲೆ ಎಂದು ಮನೆಯಿಂದ ಕಾಲ್ಕಿತ್ತಿದ್ದಾನೆ ಅಣ್ಣನನ್ನು ಹುಡುಕಿಕೊಡಿ ಎಂದು ಕಾಣೆಯಾದವನ ತಮ್ಮ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಸತೀಶ ರಮೇಶ ಮಳಿಕ (26) ಎಂಬ ಯುವಕನೆ ಕಾಣೆಯಾದವನಾಗಿದ್ದು ತನ್ನ ತಮ್ಮವಿಷ್ಣು ಮಳಿಕನ ಮೊಬೈಲ್ ಗೆ ನನಗೆ ಮದುವೆ ಇಷ್ಟವಿಲ್ಲ ಎಂಬ ಮೆಸೇಜ್ ಒಂದನ್ನು ಮಾ,28 ರಂದು ಕಳಿಸಿ ಮನೆಯಿಂದ ಹೊರ ನಡೆದವನು ನೆಂಟರಿಷ್ಟರ ಮನೆಗು ಹೋಗದೆ, ಮರಳಿ ಮನೆಗು ಬಾರದೆ ಕಾಣೆಯಾಗಿದ್ದಾನೆ ಈ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ವ್ಯಕ್ತಿ ಕಾಣೆಯಾದ ಕಲಂ ಅಡಿಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದು ಕಾಣೆಯಾದ ವ್ಯಕ್ತಿಯ ವಿವರಗಳನ್ನು ಮಾದ್ಯಮಕ್ಕೆ ಬಿಡುಗಡೆ ಮಾಡಿ ತಿಳಿದವರು ಕರೆ ಮಾಡುವಂತೆ ಕೋರಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *