
ಪ್ರತಿಧ್ವನಿ ಯಲ್ಲಾಪುರ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷ ಹಾಗೂ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜನ್ಮದಿನದ ಅಂಗವಾಗಿ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಪಟ್ಟಣದ ಗ್ರಾಮದೇವಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ರಾಜ್ಯಾದ್ಯಂತ ಅತ್ಯಂತ ಕ್ರಿಯಾಶೀಲವಾಗಿ ನಡೆಯುತ್ತಿದ್ದು, ಉಪ ಮುಖ್ಯಮಂತ್ರಿಗಳಾಗಿ ಜನಪರ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಅಲ್ಲದೆ, ಡಿ.ಕೆ.ಶಿವಕುಮಾರ್ ಅವರು ಶೀಘ್ರದಲ್ಲೇ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆ ಮಾಡುವ ಭಾಗ್ಯವನ್ನು ಭಗವಂತ ಕರುಣಿಸಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಭಟ್, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ ಮಿರಾಶಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎನ್.ಕೆ.ಭಟ್, ನಗರ ಘಟಕದ ಅಧ್ಯಕ್ಷ ಸತೀಶ್ ಶಿವಾನಂದ ನಾಯ್ಕ, ಪ್ರಮುಖರಾದ ಶಿರೀಷ್ ಪ್ರಭು, ಎಮ್.ಡಿ.ಮುಲ್ಲಾ, ಫೈರೋಜ್ ಶೇಖ್, ಗಣೇಶ ಪಾಟಣಕರ್, ಅನಿಲ್ ಮರಾಠೆ, ಸಂತೋಷ ನಾಯ್ಕ, ಫಕ್ಕೀರ್ ಹರಿಜನ, ಮಣಿಕಂಠ ನಾಯ್ಕ, ಯುವ ಕಾಂಗ್ರೆಸ್ ತಾಲೂಕಾಧ್ಯಕ್ಷ ಗಣೇಶ ಹೆಗಡೆ ಪಣಸಗೇರಿ, ಪ.ಪಂ ಮಾಜಿ ಸದಸ್ಯರಾದ ಅಮಿತ ಅಂಗಡಿ, ರಾಜು ನಾಯ್ಕ, ನರ್ಮದಾ ನಾಯ್ಕ, ಸುನಂದಾ ದಾಸ್, ಮಹಿಳಾ ಕಾಂಗ್ರೆಸ್ ನ ಪೂಜಾ ನೇತ್ರೆಕರ್ ರೂಪಾ ಪಾಟಣಕರ್, ಸರಸ್ವತಿ ಗುನಗಾ, ಮುಶರತ್ ಖಾನ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.







Prathidvani Yellapura