
ಪ್ರತಿಧ್ವನಿ ಯಲ್ಲಾಪುರ : ಸೇವಾ ಭಾವದಲ್ಲಿ ಸಮಾಜಕ್ಕಾಗಿ ಶ್ರಮಿಸುವ ಮತ್ತು ಸಮಾಜದ ಒಳಿತಿಗಾಗಿ ಸದಾ ಮಿಡಿವ ಮನಸ್ಸುಗಳಲ್ಲಿ ಯಲ್ಲಾಪುರದ ಹಿಂದು ಸಂಘಟನೆಗಳ ಪ್ರಮುಖ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಸೋಮೇಶ್ವರ ನಾಯ್ಕ ಅವರು ಕೂಡ ಒಬ್ಬರು,
ಒಂದಿಲ್ಲೊಂದು ಸೇವಾ ಕಾರ್ಯದಲ್ಲಿ ಸದಾ ತೊಡಗಿಸಿಕೊಂಡಿರುತ್ತಾರೆ.

ಪಟ್ಟಣದ ಹೊರವಲಯ ಹುಬ್ಬಳ್ಳಿ ಸಾಗುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೆ ಇರುವ ಹಿಂದುಗಳ ಚಿತಾಗಾರದಲ್ಲಿ ರವಿವಾರ ಸ್ವಚ್ಚತಾ ಕಾಯಕದಲ್ಲಿ ತೊಡಗಿಕೊಂಡು ಚಿತಾಗಾರದ ಸ್ಟ್ಯಾಂಡ್ ಮೇಲಿನ ಬೂದಿ, ಕೊಳೆತ ಹಣ್ಣು,ಹೂ ಇನ್ನಿತರ ತ್ಯಾಜ್ಯ ತೆಗೆದು ಶವ ಸುಡುವ ಸ್ಟಾಂಡನ್ನು ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸಿ ಕೆಳಗೆ ಬಿದ್ದ ಇನ್ನಿತರ ಬೇಡದ ವಸ್ತುಗಳನ್ನು ತೆಗೆದು ಸ್ವಚ್ಚಗೊಳಿಸಿದರು.

ಇದು ಮೊದಲೇನಲ್ಲ ಪ್ರತಿ ತಿಂಗಳಲ್ಲಿ ಒಮ್ಮೆ ಆತ್ಮ ತೃಪ್ತಿಗಾಗಿ ಚಿತಾಗಾರ ಸ್ವಚ್ಚತೆ ಮಾಡುವುದನ್ನು ಕಳೆದ ಏಳೆಂಟು ವರ್ಷಗಳಿಂದ ರೂಢಿಸಿಕೊಂಡು ಬಂದಿದ್ದಾರೆ.
ಸಂಘಪರಿವಾರದ ಹಿನ್ನೆಲೆ ಇರುವ ಸೋಮೇಶ್ವರ ನಾಯ್ಕ್ ಎಂದಿಗೂ ಪ್ರಚಾರಕ್ಕಾಗಿ ಚಿತಾಗಾರ ಸ್ವಚ್ಚತಾ ಕಾರ್ಯವನ್ನು ಬಳಸಿಕೊಂಡಿಲ್ಲ ಹಲವು ಬಾರಿ ಬೇರೆಬೇರೆ ಸಂದರ್ಭದಲ್ಲಿ ಸ್ಥಳೀಯ ಕೆಲ ಸಂಘ ಸಂಸ್ಥೆಗಳು ಸ್ವಚ್ಚತಾ ಕಾರ್ಯಕ್ಕೆ ಕರೆ ನೀಡಿದರೆ ಯಾವುದೆ ಹಮ್ಮು ಬಿಮ್ಮು ಇಲ್ಲದೆ ಕೈಜೋಡಿಸುವ ವಿಶಾಲ ಮನಸ್ಸಿನವರು.

ಕೊವಿಡ್ ಸಂದರ್ಭದಲ್ಲಿ ಹಲವು ಶವಸಂಸ್ಕಾರ ಕಾರ್ಯವನ್ನು ಜವಾಬ್ದಾರಿ ಹೊತ್ತು ನೆರವೇರಿಸಿದ ಹೆಗ್ಗಳಿಕೆ ಇವರದ್ದು. ಆ ಸಂದರ್ಭದಲ್ಲಿ ಬಿಜೆಪಿ ಅಡಿಯಲ್ಲಿ ಪ್ರಮುಖರಾದ ಗೋಪಾಲಕೃಷ್ಣ ಎನ್ ಗಾಂವ್ಕರ್ ಸಹ ಜೋತೆಗೂಡಿ ಹಲವು ಕೋವಿಡ್ ಶವಗಳ ಸಂಸ್ಕಾರ ಕಾರ್ಯವನ್ನು ಬದ್ದತೆಯಿಂದ ನೆರವೇರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಸದಾ ಸಮಾಜಸೇವಾ ಕಾರ್ಯದಲ್ಲಿ ತೊಡಗಿಕೊಳ್ಳುವ ಸೋಮೇಶ್ವರ ನಾಯ್ಕ್ ಹಲವು ಅನಾಥ ಶವಗಳ ಅಂತ್ಯ ಸಂಸ್ಕಾರಕ್ಕೆ ಸೇವೆ ಸಲ್ಲಿಸಿ ಕೈಲಾದ ಧನ ಸಹಾಯವನ್ನು ಮಾಡುವರು.ಇವರ ಅನೇಕ ಸಮಾಜ ಮುಖಿ ಉತ್ತಮ ಕಾರ್ಯಗಳಿಗೆ ಬಿಜೆಪಿ ಯುವ ನಾಯಕ ಬಾಲಕೃಷ್ಣ ನಾಯಕ್ ಸಹಕಾರ ಸದಾ ಇವರ ಬೆನ್ನಿಗಿರುತ್ತದೆ ಎನ್ನುತ್ತಾರೆ ಸೋಮೇಶ್ವರ ನಾಯ್ಕ್..

ಚಿತಾಗಾರದ ಸುತ್ತಮುತ್ತಲಿನ ಪರಿಸರ ಮತ್ತು ದಹನ ಕಾರ್ಯ ನಡೆಯುವ ಸ್ಥಳ ಸದಾ ಸ್ವಚ್ಚವಿಡಬೇಕು. ಇಂತಹ ಸ್ವಚ್ಚತಾ ಕಾರ್ಯ ಮನಸ್ಸಿಗೆ ಸಂತಸ ತರುತ್ತದೆ. ದೇವಾಲಯದ ಸುತ್ತಮುತ್ತಲಿನ ಪರಿಸರ ಸ್ವಚ್ಚತಾ ಕಾರ್ಯಕ್ಕೆ ಯಾರು ಬೇಕಾದರು ತೆರಳುತ್ತಾರೆ ಆದರೆ ಅಂತಹದ್ದೆ ಪವಿತ್ರ ಸ್ಥಳ ಈ ಚಿತಾಗಾರ ನಾವೆಲ್ಲರು ಕೊನೆಯದಾಗಿ ತಲುಪಲೇಬೇಕಾದ ಸ್ಥಳ ಅದರ ಸ್ವಚ್ಚತೆ ನಮ್ಮ ಹೊಣೆ. ವಿಶೇಷವಾಗಿ ಸಾರ್ವಜನಿಕರು ಜಾಗೃತ ರಾಗಿ ಈ ಸ್ಥಳವನ್ನು ಸ್ವಚ್ಚವಾಗಿಡಬೇಕಿದೆ ಮತ್ತು ತಿಂಗಳಿಗೆ ಒಮ್ಮೆಯಾದರು ಬಿಡುವು ಮಾಡಿಕೊಂಡು ಸ್ವಚ್ಚತಾ ಸೇವೆ ಮಾಡಿದರೆ ಇತರರಿಗೆ ಉತ್ತಮ ಸಂದೇಶ ರವಾನೆಯಾಗಲಿದೆ. ಅನಾಥ ಶವಗಳನ್ನು ಸಂಸ್ಕಾರ ಮಾಡುವ ಕಾರ್ಯಕ್ಕೆ ಸ್ಪೂರ್ತಿ ತಂದವರು ಹಿರಿಯರಾದ ಶೇಷು ಈರಾ ನಾಯ್ಕ್ ಆಗಿದ್ದಾರೆ. ಚಿತಾಗಾರಕ್ಕೆ ಬೇಕಾದ ಬೆಳಕಿನ ವ್ಯವಸ್ಥೆ, ಕುಳಿತುಕೊಳ್ಳುವ ಮತ್ತು ನೀರಿನ ಹಾಗು ಸ್ನಾನಕ್ಕೆ ಬೇಕಾದ ವ್ಯವಸ್ಥೆ ಅನುಷ್ಟಾನಕ್ಕೆ ಪಟ್ಟಣ ಪಂಚಾಯತ್ ಸಭೆಗಳಲ್ಲಿ ಆಗ್ರಹಿಸುತ್ತಲೆ ಬಂದಿದ್ದೆ. ಸಾಕಷ್ಟು ಕಾಮಗಾರಿ ಆಗಿದೆ ಇಷ್ಟು ಅಚ್ಚುಕಟ್ಟಾದ ವ್ಯವಸ್ಥೆ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕಿದೆ.
ಸೋಮೇಶ್ವರ ನಾಯ್ಕ
ಹಿಂದು ಮುಖಂಡ, ಪಟ್ಟಣ ಪಂಚಾಯತ್ ಮಾಜಿ ಸದಸ್ಯ
ಯಲ್ಲಾಪುರ.




Prathidvani Yellapura