Breaking News

ಯಲ್ಲಾಪುರದ ರವೀಂದ್ರ ನಗರ “ಶ್ರೀ ಆಂಜನೇಯ ದೇಗುಲ ” ಅಭಿವೃದ್ಧಿ ಸಹಾಯಾರ್ಥ ನಾಟಕ ಪ್ರದರ್ಶನ.

ಪ್ರತಿಧ್ವನಿ ಯಲ್ಲಾಪುರ : ಕಲೆ ಇರುವುದು ಕಲಾವಿದನಲ್ಲಿ ಸುಂದರ,ಸಾಮಾಜಿಕ,ನಗೆ ನಾಟಕ ಇರುವುದು ಯಲ್ಲಾಪುರದಲ್ಲಿ. ನಾಟಕ ಪ್ರಿಯರಿಗೊಂದು ಕೊನೆಯ ರಸದೌತಣ ಇಂದು ಸಂಜೆ  ” ಶ್ರೀ ಗುರು ಕಾಂತೇಶವಶ್ವರ ನಾಟ್ಯ ಸಂಘ ” ದಿಂದ ಕೆ.ಇ.ಬಿ ಎದರುಗಡೆ ಹಾಕಿರುವ ಭವ್ಯ ರಂಗ ಸಜ್ಜಿಕೆಯಲ್ಲಿ ” ರವೀಂದ್ರನಗರದ ” ಶ್ರೀಆಂಜನೇಯ ದೇವಸ್ಥಾನ ” ಅಭಿವೃದ್ಧಿ ಸಹಾಯಾರ್ಥ ಕೊನೆಯ ದಿನದ ಕೊನೆಯ ನಾಟಕ ” ಮಾಣಿ ಮದುವೆ ” ಎಂಬ ಸುಂದರ ಸಾಮಾಜಿಕ ಮತ್ತು ಪುಲ್ ಕಾಮೆಡಿ ನಾಟಕ ಪ್ರದರ್ಶನಗೊಳ್ಳಲಿದೆ ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ 
ಕಲಾಬಿಮಾನಿಗಳೆ ಕಲಾರಸಿಕರೆ ಕಲಾಭಾಂದವರೇ ಕೊನೆಯದಿನ ಕೊನೆಯ ನಾಟಕ ಕೆವಲ ಒಂದು ದಿನ ಮಾತ್ರ  ಸಂಜೆ 6..45 ಮತ್ತು ರಾತ್ರಿ ನಾಟಕ 9.45 ಕೆ  ಕೇವಲ ಎರಡೇ ಪ್ರದರ್ಶನ  ನಾಟಕ
ಮಾಣಿ ಮದುವೆ..ಮಾಣಿ ಮದುವೆ..ಮಾಣಿ ಮದುವೆ.
ನೀವು ನಾಟಕ ಪ್ರದರ್ಶನ ನೋಡಿ ಆನಂದಿಸುವುದರೊಂದಿಗೆ ಕಲಾವಿದರಿಗೆ ಸಹಾಯವಾಗಲಿದೆ ಮತ್ತು ರವೀಂದ್ರ ನಗರದ ಆಂಜನೇಯ ಸ್ವಾಮಿ ದೇಗುಲದ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸಿದಂತಾಗಲಿದೆ. ಬನ್ನಿ ಇಂತಹ ಸಾರ್ಥಕ ಕಾರ್ಯದಲ್ಲಿ ಎಲ್ಲರು ಪಾಲ್ಗೊಳ್ಳೋಣ. ತಮಗೆಲ್ಲರಿಗು ಆದರದ ಸುಸ್ವಾಗತ….🙏

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *