Breaking News

ಕ್ಷೇತ್ರಕ್ಕೆ ವ್ಯಾಪಿಸುತ್ತಿದೆ ಬಾಲಕೃಷ್ಣ ನಾಯಕ್ ಸಹಾಯ ಹಸ್ತ – ಯುವ ನಾಯಕನ ರಾಜಕೀಯ ಆರಂಗೆಟ್ರಂಗೆ ವೇದಿಕೆ ತಯಾರಿನ.?

ಪ್ರತಿಧ್ವನಿ ಯಲ್ಲಾಪುರ : ಮುಂಡಗೋಡಿನಲ್ಲಿ  ಹಳೂರು ಓಣಿಯಲ್ಲಿ ಮಾರಿಕಾಂಬ ದೇವಸ್ಥಾನದ ಅನ್ನ ಛತ್ರ ನಿರ್ಮಿಸಲು ಉದ್ದೇಶಿಸಿದ್ದು ಅದರ ಶಿಲಾನ್ಯಾಸ ಕಾರ್ಯಕ್ರಮ ರವಿವಾರ ನಡೆಯಿತು. ಅನ್ನ ಛತ್ರದ ನಿರ್ಮಾಣ ಕಾರ್ಯದಲ್ಲಿ ವಿವಿಧ ರೂಪದಲ್ಲಿ ಸಹಕಾರ ನೀಡುತ್ತಿರುವ ಬಿಜೆಪಿ ಯುವ ನಾಯಕ
ಉದ್ಯಮಿ ಬಾಲಕೃಷ್ಣ ನಾಯಕ್ ಅವರನ್ನು ಸಹ ಕಾರ್ಯಕ್ರಮದಲ್ಲಿ ಮುಖ್ಯ ತಿಥಿಗಳಾಗಿ  ಉಪಸ್ಥಿತರಿದ್ದರು
ವೇ.ಮೂ.ಲಕ್ಷ್ಮಿನಾರಾಯಣ ಭಟ್ ನೇತೃತ್ವದಲ್ಲಿ ನಡೆದ ಶಿಲನ್ಯಾಸ ಕಾರ್ಯಕ್ರಮದಲ್ಲಿ ವೇ.ಮೂ.ರುದ್ರಮುನಿ ಸ್ವಾಮಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ದಿನದಿಂದ ದಿನಕ್ಕೆ ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸದ್ದಿಲ್ಲದಂತೆ ಬಿಜೆಪಿ ಯುವ ನಾಯಕ ಕೊಡುಗೈ ದಾನಿ ಸಮಾಜಸೇವಕ ಬಾಲಕೃಷ್ಣ ನಾಯಕ್ ಹೆಸರು ಎಲ್ಲೆಲ್ಲು ಮಾರ್ದನಿಸುತ್ತಿದೆ. ಇದು ಬರಲಿರುವ ವಿಧಾನ ಸಭಾ ಚುನಾವಣೆಯ ರಣ ಕಣಕ್ಕೆ ರಂಗು ತುಂಬುವ ಪ್ರಯತ್ನ ಸಾಗಿದಂತೆ ಕಂಡುಬರುತ್ತಿದೆ.


ಕೊಡುಗೈ ದಾನಿ ಸಮಾಜ ಸೇವಕರೆಂದೇ ಖ್ಯಾತರಾದ ಯಲ್ಲಾಪುರದ ಯುವ ಉದ್ಯಮಿ  ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಗುಸು ಗುಸು ಸುದ್ದಿ ಹರಡುತ್ತಿರುವ ಬೆನ್ನಲ್ಲೆ ಬಾಲಕೃಷ್ಣ ನಾಯಕ್ ಸದ್ದಿಲ್ಲದ್ದಂತೆ ತಮ್ಮ ಸಹಾಯ ಸಹಕಾರ ಕ್ಷೇತ್ರ ಪರ್ಯಟನೆ ಸಾಗಿಸಿದ್ದಾರೆ.

ಯಲ್ಲಾಪುರದಲ್ಲಿ ಪ್ರಚಲಿತದಲಿದ್ದ ಕೊಡುಗೈ ದಾನಿ ಖ್ಯಾತಿ ಪಕ್ಕದ ಮುಂಡಗೋಡು ಭಾಗಕ್ಕು ವಿಸ್ತರಿಸುತಿದ್ದು ನಿಧಾನವಾಗಿ ರಾಜಕೀಯ ಪಯಣಕ್ಕೆ ಮುನ್ನುಡಿ ಬರೆಯುತ್ತಿರುವಂತೆ ಭಾಸವಾಗುತ್ತಿದೆ ಎನ್ನುತ್ತಿದ್ದಾರೆ ರಾಜಕಾರಣದ ವಿಷ್ಲೇಷಕರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಕಾರ್ಮಿಕ ಇಲಾಖೆಗೊಂದು ನವ ಚೈತನ್ಯ ತುಂಬಿ ಕಾರ್ಮಿಕರಿಗೊಂದು ಘನತೆ ತಂದವರು ಶಾಸಕ ಅರಬೈಲ್ ಶಿವರಾಮ ಹೆಬ್ಬಾರ್..

ಕೇಬಲ್ ನಾಗೇಶ್, ಯಲ್ಲಾಪುರ..🖋 ಪ್ರತಿಧ್ವನಿ ಯಲ್ಲಾಪುರ : ರಾಜ್ಯದಲ್ಲಿ ಕಾರ್ಮಿಕ ಇಲಾಖೆ ಎಂಬ ಒಂದು ವ್ಯವಸ್ಥೆ ಕೆಲಸ ಮಾಡುತ್ತಿದೆ ಎಂಬುದನ್ನು …

Leave a Reply

Your email address will not be published. Required fields are marked *