
ಪ್ರತಿಧ್ವನಿ ಯಲ್ಲಾಪುರ : ಕಳೆದ ಕೆಲವು ದಿನಗಳಿಂದ ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಣ್ಣ ಪಾನಿಗುಂಡಿ ಗ್ರಾಮ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವುದರ ಕುರಿತು ಪ್ರತಿಧ್ವನಿ ನಿರಂತರ ಸುದ್ದಿ ಪ್ರಕಟಿಸುತ್ತಿದ್ದು ಇದೀಗ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಿವಕುಮಾರ್ ವಿರಕ್ತಮಠ ಮಂಗಳವಾರ ಬೇಟಿ ನೀಡಿದ್ದು ಗ್ರಾಮಸ್ಥರಲ್ಲಿ ಚರ್ಚಿಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ವಿಟ್ಟು ದೋಂಡು ಪಟಕಾರೆ ಸ್ಥಳದಲಿದ್ದು ಗ್ರಾಮದ ಹಿರಿಯರೊಡಗೂಡಿ ಪಿ.ಡಿ.ಒ ಅವರಿಗೆ ನೈಜ ಪರಿಸ್ಥಿತಿ ವಿವರಿಸಿ ಪ್ರತ್ಯಕ್ಷವಾಗಿ ಕಾಣಿಸಿದರು. ಜೊತೆಯಲ್ಲಿ ದಲಿತ ಮುಖಂಡ ಸಾಮಾಜಿಕ ಕಾರ್ಯಕರ್ತ ಅರ್ಜುನ್ ಬೆಂಗೇರಿ ಸ್ಥಳದಲಿದ್ದರು.

ಅಧಿಕಾರಿ ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿ ವಾಸ್ತವಿಕತೆಯ ವಿವರವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಮತ್ತು ನೀರಿನ ವ್ಯವಸ್ಥೆ ಸದ್ಯಕ್ಕೆ ಇದ್ದು ಇಲ್ಲಿಯೆ ಒಂದು ಕೊಳವೆ ಬಾವಿ ಕೊರೆಸಬೇಕೆಂದು ಗ್ರಾಮಸ್ಥರು ಬೇಡಿಕೆ ಇಟ್ಟಿದ್ದಾರೆ. ಉಳಿದಂತೆ ಸರ್ಕಾರದಿಂದ ಯಾವುದೆ ಅನುದಾನ ಬಂದರು ಮೊದಲ ಆದ್ಯತೆಯಾಗಿ ಗ್ರಾಮದ ಸಮಸ್ಯೆಗಳ ಬಗೆಹರಿಸಲು ಆದ್ಯತೆ ನೀಡಲಾಗುವುದು ಎಂದರು.










Prathidvani Yellapura